ಕೇರಳದಲ್ಲಿ ಬಿಜೆಪಿ–ಎಲ್‌ಡಿಎಫ್ ಒಳಒಪ್ಪಂದ ಆರೋಪ: ಡಿಕೆಶಿ ವಾಗ್ದಾಳಿ!

ಕೇರಳ ರಾಜಕೀಯ ರಂಗದಲ್ಲಿ ಚುನಾವಣಾ ಕಾವು ತಾರಕ್ಕೇರಿದೆ. ಈ ನಡುವೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಯುಡಿಎಫ್ ಮೈತ್ರಿಕೂಟದ ಪರ ತೀವ್ರ ಪ್ರಚಾರ ನಡೆಸಿ ಆಡಳಿತದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ತಿರುವನಂತಪುರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳದಲ್ಲಿ ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಆಡಳಿತ ನೀಡುವುದಾಗಿ ಭರವಸೆ ನೀಡಿದರು. ಯುಡಿಎಫ್ ಸರ್ಕಾರ ಅಧಿಕಾರಕ್ಕೆ ಬಂದರೆ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿ ಬಂಡವಾಳ ಹೂಡಿಕೆ ಆಕರ್ಷಿಸಿ, ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗುತ್ತದೆ ಎಂದು ಹೇಳಿದರು. ಇದೇ ವೇಳೆ, ಬಿಜೆಪಿ ಮತ್ತು ಎಲ್‌ಡಿಎಫ್ ನಡುವೆ ಒಳಒಪ್ಪಂದವಿದೆ ಎಂದು ಆರೋಪಿಸಿದ ಡಿ.ಕೆ. ಶಿವಕುಮಾರ್, ಶಬರಿಮಲೆ ದೇವಾಲಯದ ಚಿನ್ನ ಕಳವು ಪ್ರಕರಣದಲ್ಲಿ ಕೇಂದ್ರ ತನಿಖಾ ಸಂಸ್ಥೆಗಳು ಮಧ್ಯಪ್ರವೇಶ ಮಾಡದಿರುವುದನ್ನು ಪ್ರಶ್ನಿಸಿದರು.

 

“ಇತರ ರಾಜ್ಯಗಳಲ್ಲಿ ಸಣ್ಣ ಪ್ರಕರಣಕ್ಕೂ ಇಡಿ, ಸಿಬಿಐ ದಾಳಿ ನಡೆಯುತ್ತದೆ. ಆದರೆ ಕೇರಳದಲ್ಲಿ ಭ್ರಷ್ಟಾಚಾರ ಆರೋಪಗಳಿದ್ದರೂ ಕ್ರಮ ಕೈಗೊಳ್ಳಲಾಗುತ್ತಿಲ್ಲ” ಎಂದು ಟೀಕಿಸಿದರು.ಕೇರಳದಲ್ಲಿ ಅಭಿವೃದ್ಧಿ ಕೊರತೆ ಇದೆ ಎಂದು ಆರೋಪಿಸಿದ ಅವರು, “ಮುಖ್ಯಮಂತ್ರಿಗಳ ಜಿಲ್ಲೆಯಲ್ಲೇ ಸ್ಪಷ್ಟವಾದ ಅಭಿವೃದ್ಧಿ  ಕಾಣುತ್ತಿಲ್ಲ. ಕಳೆದ 10 ವರ್ಷಗಳಲ್ಲಿ ಉದ್ಯೋಗ ಸೃಷ್ಟಿ ಆಗಿಲ್ಲ, ಯುವಕರು ರಾಜ್ಯ ತೊರೆದು ಹೊರಗೆ ಹೋಗುತ್ತಿದ್ದಾರೆ” ಎಂದು ಹೇಳಿದರು. ಇನ್ನೂ ಕೇರಳದಲ್ಲಿ ಬಂಡವಾಳ ಹೂಡಿಕೆಗೆ ಸೂಕ್ತ ವಾತಾವರಣ ಇಲ್ಲವೆಂದು ಆರೋಪಿಸಿದ ಡಿಕೆಶಿ, ಉದ್ಯಮಿಗಳಿಗೆ ಅನುಕೂಲಕರ ನೀತಿಗಳು ಇಲ್ಲದ ಕಾರಣ ಅವಕಾಶಗಳು ಕಡಿಮೆಯಾಗಿವೆ ಎಂದರು.

 

ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ಕೇರಳಿಗರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದ ಅವರು, ಇದು ಅವರ ಪ್ರಜಾಸತ್ತಾತ್ಮಕ ಹಕ್ಕು ಎಂದು ಹೇಳಿದರು. ಕರ್ನಾಟಕದಲ್ಲಿ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳನ್ನು ಉಲ್ಲೇಖಿಸಿದ ಅವರು, ಕೇರಳದಲ್ಲೂ ಇಂದಿರಾ ಗ್ಯಾರಂಟಿ ಯೋಜನೆಗಳ ಮೂಲಕ ಜನರ ಬದುಕು ಬದಲಾಯಿಸಲಾಗುತ್ತದೆ ಎಂದು ಭರವಸೆ ನೀಡಿದರು. ಒಟ್ಟಿನಲ್ಲಿ, ಕೇರಳದಲ್ಲಿ ಆಡಳಿತ ಬದಲಾವಣೆಗೆ ಸಮಯ ಬಂದಿದೆ ಎಂದು ಹೇಳಿದ ಡಿ.ಕೆ. ಶಿವಕುಮಾರ್, ಯುಡಿಎಫ್ ಮೈತ್ರಿಕೂಟಕ್ಕೆ ಬೆಂಬಲ ನೀಡುವಂತೆ ಮತದಾರರಿಗೆ ಕರೆ ನೀಡಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

3 weeks ago

   
Image 1
Image 1

ತಮಿಳುನಾಡು ಚುನಾವಣೆ ಕಾವು: ನಟ ವಿಜಯ್ ಭರ್ಜರಿ ರೋಡ್ ಶೋ

ಚೆನೆಲ್ಲೈ: ತಮಿಳುನಾಡು ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ... ಓದನ್ನು ಮುಂದುವರಿಸಿ


Edited by: ಬಾನು

3 weeks ago

   
Image 1

16 ವರ್ಷದ ಬಾಲಕಿಯೊಬ್ಬಳ ಮೇಲೆ 7 ಜನರಿಂದ ಸಾಮೂಹಿಕ ಅತ್ಯಾಚಾರ

ಲಕ್ನೋ: ಉತ್ತರ ಪ್ರದೇಶದ ಭೋಜಿಪುರ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿ... ಓದನ್ನು ಮುಂದುವರಿಸಿ


Edited by: ಬಾನು

3 weeks ago

   
Image 1

ಸಿಎಂ ಸ್ಥಾನ ತ್ಯಾಗದ ಸುಳಿವು? ನಿತೀಶ್ ಕುಮಾರ್ ಮುಂದಿನ ಹೆಜ್ಜೆ ಕುತೂಹಲ

ಪಾಟ್ನಾ: ಬಿಹಾರ ರಾಜಕೀಯದಲ್ಲಿ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗುವಂ... ಓದನ್ನು ಮುಂದುವರಿಸಿ


Edited by: ಬಾನು

3 weeks ago

   
Image 1

ಉದ್ದಿಮೆಗಳಿಗೆ ಕೇಂದ್ರದ ಬೃಹತ್ ನೆರವು – 2.5 ಲಕ್ಷ ಕೋಟಿ ಕ್ರೆಡಿಟ್ ಗ್ಯಾರಂಟಿ ಯೋಜನೆ ಸಿದ್ಧ

ದೆಹಲಿ: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಪರಿಣಾಮದಿಂದ ಭಾರತದ ಹಲವು ಕ್... ಓದನ್ನು ಮುಂದುವರಿಸಿ


Edited by: ಬಾನು

3 weeks ago

   
Image 1

ಮಣಿಪುರದಲ್ಲಿ ಬಾಂಬ್ ದಾಳಿ – ಇಬ್ಬರು ಮಕ್ಕಳು ದುರ್ಮರಣ

ಇಂಪಾಲ: ಮಣಿಪುರದಲ್ಲಿ ನಡೆದ ಭೀಕರ ಬಾಂಬ್ ದಾಳಿಯಲ್ಲಿ ಇಬ್ಬರು ಮಕ್... ಓದನ್ನು ಮುಂದುವರಿಸಿ


Edited by: ಬಾನು

3 weeks ago

   
Image 1

‘ಐಐಟಿ ವಾಲೆ ಬಾಬಾ’ ಮದುವೆ: ವೈರಲ್ ಸನ್ಯಾಸಿಯಿಂದ ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಅಭಯ್ ಸಿಂಗ್

ಚಂಡೀಗಢ: ಕಳೆದ ವರ್ಷ ಪ್ರಯಾಗ್‌ರಾಜ್ ಮಹಾಕುಂಭದಲ್ಲಿ ಭಾರೀ ವೈರಲ್... ಓದನ್ನು ಮುಂದುವರಿಸಿ


Edited by: ಬಾನು

3 weeks ago

   
Image 1

ಮಳೆಗೆ ತತ್ತರಿಸಿದ ಐಪಿಎಲ್ ಪಂದ್ಯ: ಕೆಕೆಆರ್–ಪಂಜಾಬ್ ಕಿಂಗ್ಸ್ ಮುಖಾಮುಖಿ ಸ್ಥಗಿತ

ಕೋಲ್ಕತ್ತಾ: ಐಪಿಎಲ್ 2026ರ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂ... ಓದನ್ನು ಮುಂದುವರಿಸಿ


Edited by: ಬಾನು

3 weeks ago

   
Image 1

ಸಾಥನ್‌ಕುಲಂ ಕಸ್ಟಡಿ ಸಾವು ಪ್ರಕರಣ: 9 ಪೊಲೀಸರಿಗೆ ಮರಣದಂಡನೆ

ಚೆನ್ನೈ: ದೇಶವನ್ನೇ ಬೆಚ್ಚಿಬೀಳಿಸಿದ್ದ ಸಾಥನ್‌ಕುಲಂ ಕಸ್ಟಡಿ ಸಾವು... ಓದನ್ನು ಮುಂದುವರಿಸಿ


Edited by: ಬಾನು

3 weeks ago

   
Image 1

“ನಾನು ನನ್ನ ಇಚ್ಛೆಗೆ ಬದುಕುತ್ತೇನೆ” –“ಗಂಡನ ಬಿಟ್ಟು ಪ್ರಿಯಕರನ ಜೊತೆ ಬದುಕಲು ಒಪ್ಪಿಗೆ ಕೊಟ್ಟ ಕೋರ್ಟ್!

ದೆಹಲಿ: 19 ವರ್ಷದ ಯುವತಿ ತನ್ನ ವೈಯಕ್ತಿಕ ಸ್ವಾತಂತ್ರ್ಯವನ್ನು ಸ್... ಓದನ್ನು ಮುಂದುವರಿಸಿ


Edited by: ಬಾನು

3 weeks ago

   
Image 1

ಯುದ್ಧದ ಮಧ್ಯೆಯೂ ಎಲ್ಪಿಜಿ ಕೊರತೆ ಇಲ್ಲ: ಜನರಿಗೆ ಕೇಂದ್ರದ ಭರವಸೆ!

ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ನಡುವೆಯೇ ದೇಶದಲ್ಲಿ ಎಲ್ಪಿಜಿ ಕೊರತೆ ಉಂಟಾಗಬಹು... ಓದನ್ನು ಮುಂದುವರಿಸಿ


Edited by: ಬಾನು

3 weeks ago

   
Image 1