ಕೆಎಎಸ್ ಅಧಿಕಾರಿ ನಟೇಶ್ ಪ್ರಕರಣ: ವಿನೋದ್ ಮಾತು ನಂಬಿ ಪೋಸ್ಟ್ – ಸಿಸಿಬಿ ವಿಚಾರಣೆಯಲ್ಲಿ ಸ್ನೇಹಮಯಿ ಕೃಷ್ಣ ಒಪ್ಪಿಗೆ
ಬೆಂಗಳೂರು : ಕೆಎಎಸ್ ಅಧಿಕಾರಿ ನಟೇಶ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆರೋಪ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ. ವಿಚಾರಣೆ ವೇಳೆ ಕೃಷ್ಣ ಅವರು, ವಿನೋದ್ ಎಂಬಾತನ ಮಾತು ನಂಬಿ ಪೋಸ್ಟ್ ಮಾಡಿದ್ದಾಗಿ ಒಪ್ಪಿಕೊಂಡಿದ್ದು, ತಮ್ಮ ಆರೋಪಕ್ಕೆ ಯಾವುದೇ ದೃಢವಾದ ಸಾಕ್ಷ್ಯಗಳಿಲ್ಲವೆಂದು ತಿಳಿಸಿದ್ದಾರೆ. ತನಿಖೆಯಲ್ಲಿ ಹೊರಬಂದ ಮಾಹಿತಿಯ ಪ್ರಕಾರ, ನಟೇಶ್ ಮತ್ತು ವಿನೋದ್ ನಡುವೆ ವ್ಯವಹಾರಿಕ ಸಂಬಂಧವಿದ್ದು, ಹಣಕಾಸು ವಿವಾದದ ಹಿನ್ನೆಲೆಯಲ್ಲೇ ಈ ಆರೋಪಗಳು ರೂಪಿತವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
“ನಟೇಶ್ ಆಡಿಯೋ” ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಧ್ವನಿಸುರುಳಿ ಒಂದು ವರ್ಷದ ಹಿಂದಿನದ್ದಾಗಿದ್ದು, ಅದು ಕೃಷ್ಣ ಮಾಡಿದ ಇತ್ತೀಚಿನ ಆರೋಪಗಳಿಗೆ ಸಂಬಂಧಪಟ್ಟದ್ದಲ್ಲವೆಂದು ಸಿಸಿಬಿ ಸ್ಪಷ್ಟಪಡಿಸಿದೆ. ಪ್ರಕರಣದಲ್ಲಿ ಮಹಾದೇವ ಸ್ವಾಮಿ ಹಾಗೂ ಪ್ರತಾಪ್ ಸೇರಿದಂತೆ ಕೆಲ ಬಿಜೆಪಿ ನಾಯಕರ ಪಾತ್ರದ ಕುರಿತೂ ವಿಚಾರಣೆ ನಡೆದಿದ್ದು, ಕೃಷ್ಣರನ್ನು ತಪ್ಪು ದಾರಿಗೆಳೆದು ಟ್ರ್ಯಾಪ್ ಮಾಡಲಾಗಿದೆಯೇ ಎಂಬ ದಿಕ್ಕಿನಲ್ಲಿ ತನಿಖೆ ಮುಂದುವರಿದಿದೆ. ಜಪ್ತಿ ಮಾಡಿದ್ದ ಗ್ಯಾಜೆಟ್‌ಗಳಲ್ಲಿ ಯಾವುದೇ ಪ್ರಾಮಾಣಿಕ ಸಾಕ್ಷ್ಯ ಸಿಕ್ಕಿಲ್ಲವೆಂದು ತಿಳಿದುಬಂದಿದೆ. ಪ್ರಾಥಮಿಕ ತನಿಖೆಯಲ್ಲಿ ಕೃಷ್ಣ ಟ್ರ್ಯಾಪ್ ಆಗಿರುವ ಸಾಧ್ಯತೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ವಿಚಾರಣೆ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಕಿತ್ತೂರು
ಗ್ರಾಮದಲ್ಲಿ ರಕ್ತರಂಜಿತ ಘಟನೆ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ!
ಬೆಳಗಾವಿ : ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಹಿರೇನಂದಿಹಳ್ಳಿ ಗ್ರಾ... ಓದನ್ನು ಮುಂದುವರಿಸಿ
ಹೊಸಕೋಟೆ
ಹೊಸಕೋಟೆ ಬಳಿ ಭೀಕರ ಅಪಘಾತ: ಲಾರಿ-ಬೈಕ್ ಡಿಕ್ಕಿ, ಸವಾರ ಸ್ಥಳದಲ್ಲೇ ಸಾವು
ಬೆಂಗಳೂರು ಗ್ರಾಮಾಂತರ : ಹೊಸಕೋಟೆ–ಚಿಂತಾಮಣಿ ರಾಷ್ಟ್ರೀಯ ಹೆದ್ದಾರ... ಓದನ್ನು ಮುಂದುವರಿಸಿ
ನೆಲಮಂಗಲ
ಅಂಗಡಿ ಮಾಲೀಕನ ಗಮನ ಬೇರೆಡೆ ತಿರುಗಿಸಿ ಚಿನ್ನ ಎಗರಿಸಿದ ಕಳ್ಳ!
ನೆಲಮಂಗಲ: ಚಿನ್ನದ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆ ರಾಜ್ಯದಲ್... ಓದನ್ನು ಮುಂದುವರಿಸಿ
ಆನೇಕಲ್ ತಾಲ್ಲೂಕು
ಆನೇಕಲ್‌ನಲ್ಲಿ ಬೆಚ್ಚಿಬೀಳಿಸಿದ ಘಟನೆ : 9 ಶಾಲಾ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಪೋಕ್ಸೋ ಕೇಸ್ ದಾಖಲು
ಆನೇಕಲ್ : ಬೆಂಗಳೂರು ಹೊರವಲಯದ ಆನೇಕಲ್‌ನಲ್ಲಿ ಶಾಲಾ ಮಕ್ಕಳ ಮೇಲೆ... ಓದನ್ನು ಮುಂದುವರಿಸಿ
ದೇವನಹಳ್ಳಿ
ಪೋಕ್ಸೋ ಆರೋಪ ದಾಖಲಿಸಿದ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ; ನಾಲ್ವರು ಆರೋಪಿಗಳ ವಿರುದ್ಧ FIR
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕ... ಓದನ್ನು ಮುಂದುವರಿಸಿ
ಸಂಜಯನಗರದಲ್ಲಿ ಹೇಮಂತ್ ಆತ್ಮಹತ್ಯೆ ಪ್ರಕರಣ: ಯುಡಿಆರ್ ದಾಖಲಾಗಿದ್ದು, ತನಿಖೆ ಪ್ರಾರಂಭ
ಬೆಂಗಳೂರು : ಮಾಜಿ ಮುಖ್ಯಮಂತ್ರಿ Basavaraj Bommai ಅವರ ಪರ್ಸನಲ... ಓದನ್ನು ಮುಂದುವರಿಸಿ
ಬೈರತಿ ಬಸವರಾಜ್ ನ್ಯಾಯಾಂಗ ಬಂಧನಕ್ಕೆ: ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಜೈಲು ಆದೇಶ
ಬೆಂಗಳೂರು : ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ Byra... ಓದನ್ನು ಮುಂದುವರಿಸಿ
ಪ್ರಕರಣ ಮುಚ್ಚಿಹಾಕಲು ಕೈ ಜೋಡಿಸಿದ ಆರೋಪ: ವರ್ತೂರು ಪೊಲೀಸ್ ಇನ್‌ಸ್ಪೆಕ್ಟರ್ ಗಂಭೀರ ಟೀಕೆ
ಬೆಂಗಳೂರು : ವರ್ತೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ Yoganand... ಓದನ್ನು ಮುಂದುವರಿಸಿ
ವಿಚಾರಣೆ ಮುಗಿಸಿ ಕ್ಷಮೆಯಾಚಿಸಿದ ಸ್ನೇಹಮಯಿ ಕೃಷ್ಣ: ಸುಳ್ಳು ಲಂಚದ ಆರೋಪ ತಿರಸ್ಕರಣೆ
ಬೆಂಗಳೂರು : ಸರ್ಕಾರದ ಮುಖ್ಯ ಕಾರ್ಯದರ್ಶಿ Shalini Rajanesh ವಿ... ಓದನ್ನು ಮುಂದುವರಿಸಿ
ಕಬ್ಬಿನ ಟ್ರ್ಯಾಕ್ಟರ್ ಅಪಘಾತದಲ್ಲಿ 2 ವರ್ಷದ ಮಗು ಸೇರಿದಂತೆ 4 ಮಂದಿ ಮೃತ
ಬಾಗಲಕೋಟೆ, ಜಮಖಂಡಿ : ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಟ್ಟೆ ಕೆರೆ... ಓದನ್ನು ಮುಂದುವರಿಸಿ