ಕರ್ನಾಟಕದ ಜೈಲು ವ್ಯವಸ್ಥೆಯಲ್ಲಿ “ರಾಜಾತಿಥ್ಯ‑ಅಕ್ರಮ” ತಡೆಗೆ ಡಿಜಿಪಿ ಅಲೋಕ್ ಕುಮಾರ್ ಗಂಭೀರ ಕ್ರಮ
ಬೆಂಗಳೂರು: ರಾಜ್ಯದ ಜೈಲುಗಳಲ್ಲಿ ಖೈದಿಗಳಿಗೆ ನೀಡಲಾಗುತ್ತಿದ್ದ ರಾಜಾತಿಥ್ಯ ಹಾಗೂ ನಡೆಯುತ್ತಿದ್ದ ಅಕ್ರಮಗಳಿಗೆ ಕಡಿವಾಣ ಹಾಕಲು ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಜೈಲು ಸಿಬ್ಬಂದಿಗಳಲ್ಲಿ ವರ್ಷಾನುಗಟ್ಟಲೆ ಒಂದೇ ಜೈಲಿನಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ವರ್ಗಾವಣೆ ಮಾಡುವ ‘ವರ್ಗಾವಣೆ ಅಸ್ತ್ರ’ವನ್ನು ಪ್ರಯೋಗಿಸಲು ತೀರ್ಮಾನಿಸಲಾಗಿದೆ.
ವಿಶೇಷವಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ದೀರ್ಘಕಾಲದಿಂದ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಮೇಲೆ ಡಿಜಿಪಿ ಕಣ್ಣಿಟ್ಟಿದ್ದಾರೆ. ಜೈಲು ಸಿಬ್ಬಂದಿ ಹಣ ಪಡೆದು ಖೈದಿಗಳಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಈ ತಿಂಗಳ 9ರಿಂದ ಕೇಂದ್ರ ಕಾರಾಗೃಹ ಕಚೇರಿಯಲ್ಲಿ ಸಿಬ್ಬಂದಿಗಳಿಗೆ ಕೌನ್ಸೆಲಿಂಗ್ ನಡೆಸಿ, ವರ್ಗಾವಣೆ ಪ್ರಕ್ರಿಯೆ ಆರಂಭಿಸಲು ಮುಹೂರ್ತ ನಿಗದಿಪಡಿಸಲಾಗಿದೆ. ಬೇರೆ ಜೈಲುಗಳಿಂದ OOD (On Other Duty) ಮೇಲೆ ಬಂದಿರುವ ಅಧಿಕಾರಿಗಳಿಗೂ ವರ್ಗಾವಣೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಸಿಬ್ಬಂದಿಗಳನ್ನು ನಿಯಮಿತವಾಗಿ ಬದಲಾವಣೆ ಮಾಡುವುದರಿಂದ ಜೈಲುಗಳೊಳಗಿನ ಅಕ್ರಮ ಜಾಲಕ್ಕೆ ಬ್ರೇಕ್ ಬೀಳಲಿದೆ ಹಾಗೂ ಶಿಸ್ತು ಕಾಪಾಡಲು ಸಹಕಾರಿಯಾಗಲಿದೆ ಎಂಬುದು ಡಿಜಿಪಿ ಅಲೋಕ್ ಕುಮಾರ್ ಅವರ ಉದ್ದೇಶವಾಗಿದೆ. ಡಿಜಿಪಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಜೈಲುಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿರುವ ಅಲೋಕ್ ಕುಮಾರ್, ಮಂಗಳೂರು ಹಾಗೂ ಬೆಂಗಳೂರು ಜೈಲುಗಳಿಗೆ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು. ಈ ಎಚ್ಚರಿಕೆಯ ಬೆನ್ನಲ್ಲೇ ಇದೀಗ ವರ್ಗಾವಣೆ ಕ್ರಮ ಕೈಗೊಳ್ಳಲಾಗಿದ್ದು, ಜೈಲು ಅಧಿಕಾರಿಗಳಲ್ಲಿ ಆತಂಕ ಶುರುವಾಗಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಹೊಸಕೋಟೆ
ಹೊಸಕೋಟೆ–ಚಿಂತಾಮಣಿ ಹೆದ್ದಾರಿ ಅಪಘಾತ: ಮಾರುತಿ ಓಮ್‌ನಿ-ಬೈಕ್ ಡಿಕ್ಕಿ, 1 ಮೃತ, ಹಲವರಿಗೆ ಗಾಯ
ಬೆಂಗಳೂರು ಗ್ರಾಮಾಂತರ: ಹೊಸಕೋಟೆ – ಚಿಂತಾಮಣಿ ರಾಷ್ಟ್ರೀಯ ಹೆದ್ದಾ... ಓದನ್ನು ಮುಂದುವರಿಸಿ
ಮಾರಕಾಸ್ತ್ರ ಹಿಡಿದು ಹುಟ್ಟುಹಬ್ಬ ಕೇಕ್ ಕತ್ತರಿಸಿದ ಅರೆಸ್ಟ್
ಚಿತ್ರದುರ್ಗ: ಚಿತ್ರದುರ್ಗದ ಭೋವಿ ಕಾಲೋನಿಯಲ್ಲಿ ಮಾರಕಾಸ್ತ... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ಸೈಬರ್ ವಂಚನೆ ಪ್ರಕರಣ: ಹುಬ್ಬಳ್ಳಿಯಲ್ಲಿ ಒಂದೇ ಖಾತೆಯಿಂದ ಕೋಟಿ ಕೋಟಿ ಹಣ ವರ್ಗಾವಣೆ
ಹುಬ್ಬಳ್ಳಿ : ಹುಬ್ಬಳ್ಳಿಯ ನಗರದಲ್ಲಿ ನಡೆದ ಭಾರೀ ಸೈಬರ್ ವಂಚನೆಯ... ಓದನ್ನು ಮುಂದುವರಿಸಿ
ರಾಜ್ಯದಲ್ಲಿ ಸೈಬರ್ ದಂಧೆ ಜಾಲ ಭೇದಿಸಿದ ಸಿಐಡಿ: ಮ್ಯೂಲ್ ಅಕೌಂಟ್ ಕೇಸ್‌ನಲ್ಲಿ 13 ವಂಚಕರು ಅರೆಸ್ಟ್
ಬೆಂಗಳೂರು: ಸಿಐಡಿ ಸೈಬರ್ ಕ್ರೈಂ ವಿಭಾಗವು ರಾಜ್ಯಾದ್ಯಂತ ಮೆಗಾ ಕಾ... ಓದನ್ನು ಮುಂದುವರಿಸಿ
ಬೆಂಗಳೂರು ಏರ್ ಪೋರ್ಟ್ʼನಲ್ಲಿ ಕೋಟ್ಯಂತರ ರೂ. ಮೌಲ್ಯದ ಚಿನ್ನ, ವಜ್ರ ಕಳ್ಳತನ!
ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕೆಂಪೇಗ... ಓದನ್ನು ಮುಂದುವರಿಸಿ
ಆನೇಕಲ್ ತಾಲ್ಲೂಕು
ಆನೇಕಲ್‌ನಲ್ಲಿ ಭೀಕರ ರಸ್ತೆ ಅಪಘಾತ: ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವು
ಆನೇಕಲ್ : ಆನೇಕಲ್ ತಾಲ್ಲೂಕಿನ ಜಿಗಣಿ ವ್ಯಾಪ್ತಿಯಲ್ಲಿ ಬುಧವ... ಓದನ್ನು ಮುಂದುವರಿಸಿ
"ಲಂಚದ ಆರೋಪ: ಮಂಡ್ಯ ಅಬಕಾರಿ ಅಧಿಕಾರಿಗೆ ಅಮಾನತು"
ಮಂಡ್ಯ : ಸಿಎಲ್ 7 ಲೈಸೆನ್ಸ್ ನೀಡಲು ಲಂಚಕೇಳಿದ ಆರೋಪದಡಿಯಲ... ಓದನ್ನು ಮುಂದುವರಿಸಿ
ಸಣ್ಣ ಹಣಕ್ಕಾಗಿ ಜೀವ ಬಲಿ.. ಸಿಗರೆಟ್ ವಾಟರ್ ಬಾಟಲ್ ಖರೀದಿ ಹಣ ಕೇಳಿದ್ದಕ್ಕೆ ಕೊಲೆ.
ಬೆಳಗಾವಿ : ಬೆಳಗಾವಿ ತಾಲೂಕಿನ ಘೋಡಕೆನಟ್ಟಿ ಗ್ರಾಮದಲ್ಲಿ ... ಓದನ್ನು ಮುಂದುವರಿಸಿ
ತೀರ್ಥಹಳ್ಳಿ
ನಿಂತಿದ್ದ ಕಾರಿಗೆ ಅತೀ ವೇಗವಾಗಿ ಬಂದ BMW ಕಾರ್ ಡಿಕ್ಕಿ : ಮಹಿಳೆ ಸಾವು
ಶಿವಮೊಗ್ಗ : ಮೇಗರವಳ್ಳಿ ಬಳಿಯಲ್ಲಿ ಇಂದು ಬೆಳಗ್ಗೆ ನಡೆದ ರಸ್ತೆ ಅ... ಓದನ್ನು ಮುಂದುವರಿಸಿ
“ಮನೆ ಸೀಜ್ ಮಾಡೋದಾಗಿ ಫೈನಾನ್ಸ್ ಸಿಬ್ಬಂದಿ ಬೆದರಿಕೆ – ವಿಷ ಕುಡಿದು ರೈತ ಆತ್ಮಹತ್ಯೆ”
ಹಾಸನ :ಮನೆ ಸೀಜ್ ಮಾಡೋದಾಗಿ ಫೈನಾನ್ಸ್ (Finance) ಸಿಬ್ಬಂದಿ ಬೆ... ಓದನ್ನು ಮುಂದುವರಿಸಿ