ಕಮರ್ಷಿಯಲ್ ಗ್ಯಾಸ ಕೊರತೆ: ಹೋಟೆಲ್‌ಗಳಿಗೆ ಒಂದು ವಾರ ಸಹಕಾರ ಕೇಳಿದ ಸಚಿವ ಕೆ.ಎಚ್. ಮುನಿಯಪ್ಪ

ಬೆಂಗಳೂರು: ರಾಜ್ಯದಲ್ಲಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಕೊರತೆ ಹಿನ್ನೆಲೆಯಲ್ಲಿ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್. ಮುನಿಯಪ್ಪ ಹೋಟೆಲ್‌ಗಳಿಗೆ ಒಂದು ವಾರ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಮಾತನಾಡಿದ ಅವರು, ಗೃಹ ಬಳಕೆಯ (ಡೊಮೆಸ್ಟಿಕ್) ಸಿಲಿಂಡರ್‌ಗಳಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ಪ್ರತಿದಿನ 3 ಲಕ್ಷಕ್ಕೂ ಹೆಚ್ಚು ಡೊಮೆಸ್ಟಿಕ್ ಸಿಲಿಂಡರ್‌ಗಳ ಪೂರೈಕೆ ನಡೆಯುತ್ತಿದ್ದು, ಅವು ನಿರಂತರವಾಗಿ ವಿತರಿಸಲಾಗುತ್ತಿದೆ ಎಂದು ಹೇಳಿದ್ದಾರೆ.

 

ಆದರೆ ಕಮರ್ಷಿಯಲ್ ಗ್ಯಾಸ್ ಪೂರೈಕೆಯಲ್ಲಿ ಮಾತ್ರ ಸಮಸ್ಯೆ ಉಂಟಾಗಿದೆ. ಕೇಂದ್ರ ಸರ್ಕಾರದಿಂದ ಕೇವಲ 20% ಗ್ಯಾಸ್ ಪೂರೈಕೆ ಮಾಡಲು ಸೂಚನೆ ನೀಡಲಾಗಿದೆ. ಪ್ರಸ್ತುತ ಸುಮಾರು 9,000 ಕಮರ್ಷಿಯಲ್ ಸಿಲಿಂಡರ್‌ಗಳನ್ನು ಮಾತ್ರ ವಿತರಿಸಲಾಗುತ್ತಿದೆ. ಈ ಪೂರೈಕೆಯಲ್ಲಿ ಆಸ್ಪತ್ರೆಗಳು, ವಸತಿ ಶಾಲೆಗಳು, ಹಾಸ್ಟೆಲ್‌ಗಳು ಮತ್ತು ಇಂದಿರಾ ಕ್ಯಾಂಟೀನ್‌ಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಹೀಗಾಗಿ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗೆ ಸೀಮಿತ ಪ್ರಮಾಣದ ಗ್ಯಾಸ್ ಮಾತ್ರ ಲಭ್ಯವಾಗಿದೆ.

 

ಸಚಿವರು ತಿಳಿಸಿದ್ದು, “ಹೋಟೆಲ್‌ಗಳಿಗೆ ಸುಮಾರು 1,000 ಸಿಲಿಂಡರ್‌ಗಳನ್ನು ಮಾತ್ರ ನೀಡಲು ಸಾಧ್ಯ. ಎಲ್ಲರಿಗೂ ಸಮರ್ಪಕವಾಗಿ ಪೂರೈಕೆ ಮಾಡುವುದು ಸವಾಲಾಗಿದೆ. ಆದ್ದರಿಂದ ಒಂದು ವಾರ ಸಹಿಸಿಕೊಳ್ಳಬೇಕು” ಎಂದು ಮನವಿ ಮಾಡಿದ್ದಾರೆ. ಇಲ್ಲದೆ, ಇರಾನ್‌ನೊಂದಿಗೆ ಮಾತುಕತೆ ನಡೆಸಿ ಗ್ಯಾಸ್ ಸಮಸ್ಯೆ ಪರಿಹರಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದ್ದು, 16 ಹಡಗುಗಳು ಸರಬರಾಜಿಗಾಗಿ ಕಾಯುತ್ತಿವೆ. ಅವು ಬಂದ ನಂತರ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆಯಿದೆ ಎಂದು ಸಚಿವರು ತಿಳಿಸಿದ್ದಾರೆ.

 

ಹೋಟೆಲ್ ಅಸೋಸಿಯೇಷನ್ ಜೊತೆಗೆ ಚರ್ಚೆ ನಡೆಸಲಾಗಿದೆ. ಒಂದು ವಾರದಲ್ಲಿ ಸುಮಾರು 15,000 ಸಿಲಿಂಡರ್ ಸಂಗ್ರಹಿಸಿ, ನಂತರ ಸಮರ್ಪಕವಾಗಿ ಹಂಚಿಕೆ ಮಾಡುವ ಯೋಜನೆ ಇದೆ ಎಂದು ಸಚಿವರು ತಿಳಿಸಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

7 hours ago

   
Image 1
Image 1
ಬೆಂಗಳೂರು ನಗರ

ಮೈಸೂರು ಮೊದಲ ಮಳೆ : ಗಾಳಿ ಮಳೆಯಲ್ಲೇ ಶಾಲಾ ಮೇಲ್ಚಾವಣಿ ಹರಿದಿತು, ಶಿಕ್ಷಕಿಯ ತ್ವರಿತ ಕ್ರಮದಿಂದ ಮಕ್ಕಳು ರಕ್ಷಿತ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವರ್ಷದ ಮೊದಲ ಮಳೆ ಸುರಿ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ದಕ್ಷಿಣಕನ್ನಡ

ಮಂಗಳೂರು

ಜಾಗತಿಕ ರಾಜಕೀಯದ ನಡುವೆಯೂ ಭಾರತಕ್ಕೆ ರಷ್ಯಾದ ತೈಲ ಸಾಗಣೆ: ಮಂಗಳೂರು ಸುತ್ತಾ ಬೆಳವಣಿಗೆ

ಮಂಗಳೂರು: ಜಾಗತಿಕ ಇಂಧನ ಬಿಕ್ಕಟ್ಟಿನ ಮಧ್ಯೆ, ಚೀನಾಕ್ಕೆ ಸಾಗುತ್ತ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಬೆಂಗಳೂರು ನಗರ

ಅಂಗನವಾಡಿ ಕಾರ್ಯಕರ್ತೆಯರ ಗೌರವಧನ: ರಾಜ್ಯಕ್ಕೆ ಜೊತೆಗೆ ಕೇಂದ್ರವೂ ಕಣ್ತೆರೆಯಬೇಕು – ಲಕ್ಷ್ಮೀ ಹೆಬ್ಬಾಳಕರ್

ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಕುರಿತಾಗಿ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಬೆಂಗಳೂರು ನಗರ

ಆಟೋ ಮ್ಯುಟೇಶನ್ ವ್ಯವಸ್ಥೆ: ಖಾತೆಗಳ 98% ಸ್ವಯಂಚಾಲಿತ ಬದಲಾವಣೆ – ಕೃಷ್ಣ ಬೈರೇಗೌಡ

ಬೆಂಗಳೂರು: ಆಸ್ತಿ ನೋಂದಣಿಯ ನಂತರ ಖಾತೆ ಬದಲಾವಣೆ ಪ್ರಕ್ರಿಯೆಯನ್ನ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಚಿಕ್ಕಮಗಳೂರು

ಸಂತೋಷ್ ಕೋಟ್ಯಾನ್ ಸೇರಿ ಬಿಜೆಪಿ ಹಾಗೂ ಸಂಘಟನೆ ಕಾರ್ಯಕರ್ತರಿಗೆ ಗಡಿಪಾರು ನೋಟಿಸ್

ಚಿಕ್ಕಮಗಳೂರು: ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆ ಕಾಯ್ದುಕೊಳ್... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಬಾಗಲಕೋಟೆ

ಬಾಗಲಕೋಟೆ ಉಪಚುನಾವಣೆ: ಮೇಟಿ ಕುಟುಂಬದ ಟಿಕೆಟ್ ಹಂಚಿಕೆಗೆ ಸಿಎಂ ಸಿದ್ದರಾಮಯ್ಯ ಮಧ್ಯಸ್ಥ

ಬೆಂಗಳೂರು/ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯ ಹಿನ್ನೆಲ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಉಡುಪಿ

ಉಡುಪಿಯಲ್ಲಿ ‘ಮತಾಂತರ ಪ್ರಚೋದನೆ’ ಆರೋಪ: ಮೋಹನ್ ಲಾಜರಸ್ ಮಹೋತ್ಸವಕ್ಕೆ ಸಂಘಟನೆಗಳ ತೀವ್ರ ವಿರೋಧ

ಉಡುಪಿ: ಉಡುಪಿ ನಗರದಲ್ಲಿ ಮಾರ್ಚ್ 20ರಿಂದ 22ರವರೆಗೆ ನಡೆಯಲಿರುವ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಬೆಂಗಳೂರು ನಗರ

ವೈಷ್ಣೋದೇವಿ ಯಾತ್ರೆಗೆ ₹5,000 ಸಹಾಯಧನ: ರಾಜ್ಯ ಸರ್ಕಾರದ ಹೊಸ ಯೋಜನೆ ಘೋಷಣೆ

ಬೆಂಗಳೂರು: ಶ್ರೀ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ನೀಡುವ ಯಾ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಬೆಂಗಳೂರು ನಗರ

ವಿಧಾನಸಭೆಯಲ್ಲಿ ಹೊಸ ಬಿಲ್ : ಅಂತರ್ಜಾತಿ ವಿವಾಹಿತರಿಗೆ ರಕ್ಷಣೆ: ‘ಇವನಮ್ಮವ ಇವ ನಮ್ಮವ’ ವಿಧೇಯಕ ಮಂಡನೆ

ಬೆಂಗಳೂರು: ಅಂತರ್ಜಾತಿ ವಿವಾಹಗಳ ಸಂದರ್ಭ ಎದುರಾಗುತ್ತಿರುವ ಕುಟುಂ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಕೊಡಗು

ವೃಷಭಾವತಿ ‘ನಾಲೆ’ ಅಲ್ಲ ‘ನದಿ’: ದಾಖಲೆ ತಿದ್ದುಪಡಿ ಮಾಡಿ ಎಂದು ಶಾಸಕ ಶರವಣ ಒತ್ತಾಯ

ಬೆಂಗಳೂರು: ನಗರದ ಜೀವನಾಡಿಯಾಗಿರುವ ವೃಷಭಾವತಿ ನದಿಯನ್ನು ಕಂದಾಯ ದ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1