Jeffrey Epstein ಪ್ರಕರಣಕ್ಕೆ ಹೊಸ ಟ್ವಿಸ್ಟ್: ಸಂತ್ರಸ್ತರ ಪಟ್ಟಿಯಲ್ಲಿ ಭಾರತೀಯ ಮಹಿಳೆಯ ಹೆಸರು!

ವಾಷಿಂಗ್ಟನ್ : ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿರುವ Jeffrey Epstein ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕಾದ ನ್ಯಾಯಾಂಗ ಇಲಾಖೆ ಹೊಸ ದಾಖಲೆಗಳನ್ನು ಬಿಡುಗಡೆ ಮಾಡಿದೆ. ಈ ದಾಖಲೆಗಳಲ್ಲಿ ಸಂತ್ರಸ್ತರ ಪಟ್ಟಿಯಲ್ಲಿ ಭಾರತೀಯ ಮೂಲದ ಮಹಿಳೆಯೊಬ್ಬರ ಹೆಸರು ಸೇರಿರುವುದು ದೃಢಪಟ್ಟಿದೆ.

 

ಜನವರಿ 13, 2020ರ ಆಂತರಿಕ ಇಮೇಲ್ ಪ್ರಕಾರ, ಎಪ್ಸ್ಟೀನ್ ಪ್ರಕರಣದ ಸಂತ್ರಸ್ತರಿಗೆ ಪರಿಹಾರ ನಿಧಿ ಒದಗಿಸಲು ಅಮೆರಿಕಾದ ಅಧಿಕಾರಿಗಳು ಭಾರತೀಯ ಮೂಲದ ಮಹಿಳೆಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು. ‘ಎಪ್ಸ್ಟೀನ್ ವಿಕ್ಟಿಮ್ಸ್’ ಶೀರ್ಷಿಕೆಯ ಇಮೇಲ್‌ನಲ್ಲಿ ಆಕೆಯ ವಿಳಾಸ ಮತ್ತು ಇತರ ವಿವರಗಳು ಲಭ್ಯವಿದ್ದರೆ ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿಯೊಂದಿಗೆ ಸಂಪರ್ಕ ಸಾಧಿಸಲು ಸೂಚಿಸಲಾಗಿದೆ. ಗೌಪ್ಯತೆಯನ್ನು ಕಾಪಾಡುವ ದೃಷ್ಟಿಯಿಂದ ಮಹಿಳೆಯ ಹೆಸರು ಹಾಗೂ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ.

 

New York Crime Victims Compensation Board ಯೋಜನೆಯಡಿ ಪರಿಹಾರ ಪ್ರಕ್ರಿಯೆಗಳ ವಿವರಗಳನ್ನು ದಾಖಲಿಸಲಾಗಿದೆ. ಸಂಬಂಧಿತ ಅರ್ಜಿಗಳನ್ನು FBI ಗೆ ಕಳುಹಿಸಲು ಸೂಚಿಸಲಾಗಿದೆ. ಅಗತ್ಯವಿದ್ದಲ್ಲಿ ತುರ್ತು ಚಿಕಿತ್ಸೆ ನೀಡುವ ವ್ಯವಸ್ಥೆಯೂ ಒಳಗೊಂಡಿದೆ. ಅಪ್ರಾಪ್ತ ಬಾಲಕಿಯರ ಲೈಂಗಿಕ ಸಾಗಣೆ ಆರೋಪದ ಹಿನ್ನೆಲೆ ವಿಚಾರಣೆಯನ್ನು ಎದುರಿಸುತ್ತಿದ್ದ ಜೆಫ್ರಿ ಎಪ್ಸ್ಟೀನ್ ಆಗಸ್ಟ್ 2019ರಲ್ಲಿ ಸಾವನ್ನಪ್ಪಿದ್ದರು. ಅಮೆರಿಕ ಸರ್ಕಾರ ಇದನ್ನು ಆತ್ಮಹತ್ಯೆ ಎಂದು ಘೋಷಿಸಿತ್ತು. ಅವರ ಸಾವಿನ ಕೆಲ ವರ್ಷಗಳ ಬಳಿಕ ಈ ಇಮೇಲ್ ವಿನಿಮಯ ಬೆಳಕಿಗೆ ಬಂದಿದೆ, ಮತ್ತು ಹೊಸ ದಾಖಲೆಗಳು ಪ್ರಕರಣದ ಕುರಿತು ಮತ್ತಷ್ಟು ಚರ್ಚೆಗೆ ಕಾರಣವಾಗಬಹುದು.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

1 week ago

   
Image 1
Image 1

ಖಮೇನಿ ನಿಧನದ ನಂತರ ಇರಾನ್: ಮಧ್ಯಂತರ ನಾಯಕತ್ವಕ್ಕೆ ಅಲಿರೆಜಾ ಅರಾಫಿ ನೇಮಕ

ಟೆಹ್ರಾನ್ನಲ್ಲಿ ವರದಿಯಾಗಿರುವಂತೆ, ಅಮೆರಿಕ–ಇಸ್ರೇಲ್ ಜಂಟಿ ದಾಳಿಯಲ್ಲಿ ಅಯತೊಲ್ಲಾ ಅಲಿ... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1

ಅಂತರಾಷ್ಟ್ರೀಯ ಪ್ರತಿಕ್ರಿಯೆ: ಅಮೆರಿಕ–ಇಸ್ರೇಲ್ ವಿರುದ್ಧ ಕಲ್ಲು ಎಸೆಯುವ ಪ್ರತಿಭಟನೆ

ಅಯತೊಲ್ಲಾ ಅಲಿ ಖಮೇನಿರ ನಿಧನದ ವರದಿ ಬಂದಿದ್ದು, ಜಾಗತಿಕ ಮಟ್ಟದಲ್ಲಿ ಪ್ರತಿಕ್ರಿಯೆಗಳು... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1

ಇಸ್ರೇಲ್–ಅಮೆರಿಕ ದಾಳಿ: ಇರಾನ್ ಟಾಪ್ ನಾಯಕರ ಹತ್ಯೆ, ಮಧ್ಯಪ್ರಾಚ್ಯ ಉಡೀಸ್

ಮಧ್ಯಪ್ರಾಚ್ಯ: ಇರಾನ್ ಸೂಪ್ರೀಂ ನಾಯಕ ಅಲಿ ಖಮೇನಿ ಹತ್ಯೆಯ ನಂತರ,... ಓದನ್ನು ಮುಂದುವರಿಸಿ


Edited by: ಬಾನು

16 hours ago

   
Image 1

ದುಬೈ ವಿಮಾನ ನಿಲ್ದಾಣದಲ್ಲಿ ಇರಾನ್ ದಾಳಿ: 4 ಗಾಯ, ಮಧ್ಯಪ್ರಾಚ್ಯ ಭದ್ರತಾ ಆತಂಕ

ದುಬೈ: ಇರಾನ್–ಇಸ್ರೇಲ್–ಅಮೆರಿಕ ಸಂಘರ್ಷದ ಹಿನ್ನೆಲೆ, ದುಬೈ ಅಂತಾರ... ಓದನ್ನು ಮುಂದುವರಿಸಿ


Edited by: ಬಾನು

16 hours ago

   
Image 1

ಇರಾನ್ ಸೂಪ್ರೀಂ ನಾಯಕ ಅಲಿ ಖಮೇನಿ ನಿಧನ – 37 ವರ್ಷಗಳ ಆಳ್ವಿಕೆ ಅಂತ್ಯ

ಇರಾನ್: ಇರಾನ್‌ನ ಸೂಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಶನಿವಾರ ನ... ಓದನ್ನು ಮುಂದುವರಿಸಿ


Edited by: ಬಾನು

16 hours ago

   
Image 1

ಐರ್ಲೆಂಡ್‌ನಲ್ಲಿ ದಕ್ಷಿಣ ಕನ್ನಡ ಯುವಕ ನಿಗೂಢ ಸಾವು; ಇಂಡಿಯನ್ ಪೊಲೀಸರು ತನಿಖೆ ಆರಂಭ

ಮಂಗಳೂರು / ಐರ್ಲೆಂಡ್: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1

ವಿಶ್ವ ಚಿನ್ನದ ದರದಲ್ಲಿ ಕುಸಿತದ ಭಾವನೆ: ಅಮೆರಿಕ ಕ್ರಮ ಚೀನಾದ ಮೇಲೆ ಹೊರೆ ಹಾಕಬಹುದೇ?

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ವಿಶ್ವದಾದ್ಯಂತ ಭಾರೀ ಏರಿಕೆ ಕ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1

ಪುತ್ರನ ನೆನಪಿಗಾಗಿ 6 ಕೋಟಿ ರೂ. BMW ಕಾರನ್ನು ಸಮಾಧಿ ಮಾಡಿದ ತಂದೆ

ಮಾಸ್ಕೋ: ಪುತ್ರನ ಅಕಾಲಿಕ ಮರಣದ ದುಃಖವನ್ನು ಸಹಿಸಲು ಆಗದೇ, ಮಾಸ್ಕ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1

ಭಾರತಕ್ಕೆ ನೀರಿನ ಹಕ್ಕು, ಪಾಕ್‌ಗಾಗಿ ಚಿಂತಾಜನಕ ಸುದ್ದಿಯಾಗಲಿದೆ ರಾವಿ ನದಿ ನಿರ್ಬಂಧ

ನವದೆಹಲಿ: ಭಾರತವು ಶಹಪುರ್ ಕಂಡಿ ಬ್ಯಾರೇಜ್ ಪೂರ್ಣಗೊಳಿಸುತ್ತಿರುವ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1

"ಅಮೆರಿಕದಲ್ಲಿ ಪೊಲೀಸ್ ನಿರ್ಲಕ್ಷ್ಯ: ಭಾರತೀಯ ವಿದ್ಯಾರ್ಥಿನಿ ಸಾವು – ಕುಟುಂಬಕ್ಕೆ ₹262 ಕೋಟಿ ಪರಿಹಾರ"

ವಾಷಿಂಗ್ಟನ್:- ಅಮೆರಿಕದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪ... ಓದನ್ನು ಮುಂದುವರಿಸಿ


Edited by: ಬಾನು

2 weeks ago

   
Image 1