ಹುಸಿ ಬಾಂಬ್ ಬೆದರಿಕೆ ಜಾಲ ಭೇದ – ಪಾಕಿಸ್ತಾನಕ್ಕೂ ವಿಸ್ತರಿಸಿದ್ದ ಆರೋಪಿಯ ಕೃತ್ಯ!

ಮೈಸೂರು: ದೇಶಾದ್ಯಂತ ಶಾಲೆಗಳು, ನ್ಯಾಯಾಲಯಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ಹುಸಿ ಬಾಂಬ್ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಿ ಆತಂಕ ಸೃಷ್ಟಿಸಿದ್ದ ಪ್ರಕರಣದಲ್ಲಿ ಮೈಸೂರಿನ ಶ್ರೀನಿವಾಸ್ ಲೂಯಿಸ್ ಬಂಧನದ ಬಳಿಕ ಬೆಚ್ಚಿಬೀಳಿಸುವ ಮಾಹಿತಿ ಹೊರಬಂದಿದೆ. ದೆಹಲಿ ಪೊಲೀಸರ ವಿಚಾರಣೆಯಲ್ಲಿ, ಆರೋಪಿಯ ಕೃತ್ಯಗಳು ದೇಶದ ಗಡಿ ದಾಟಿ ಪಾಕಿಸ್ತಾನದಲ್ಲಿಯೂ ಮುಂದುವರಿದಿದ್ದವು ಎಂಬುದು ಬೆಳಕಿಗೆ ಬಂದಿದೆ. ಪೊಲೀಸ್ ಮೂಲಗಳ ಪ್ರಕಾರ, ಪಾಕಿಸ್ತಾನದ ನ್ಯಾಯಾಲಯಗಳು, ಶಾಲಾ-ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳಿಗೂ ಈತ ಹುಸಿ ಬಾಂಬ್ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಾನೆ.

 

ತಾಂತ್ರಿಕವಾಗಿ ಪರಿಣತಿಯಾಗಿರುವ ಶ್ರೀನಿವಾಸ್, ತನ್ನ ಗುರುತು ಪತ್ತೆಯಾಗದಂತೆ ಡಾರ್ಕ್ ವೆಬ್ ಹಾಗೂ ವಿಪಿಎನ್ ತಂತ್ರಜ್ಞಾನ ಬಳಸಿ ಐಪಿ ವಿಳಾಸವನ್ನು ಮರೆಮಾಚುತ್ತಿದ್ದನು. ಗೂಗಲ್ ಮ್ಯಾಪ್ ಮೂಲಕ ಪ್ರಮುಖ ಸ್ಥಳಗಳನ್ನು ಗುರುತಿಸಿ, VoIP ಸೇವೆಗಳ ಮೂಲಕ ಕರೆಗಳನ್ನು ಮಾಡುತ್ತಿದ್ದ ಈತ, ಸುಮಾರು 50ಕ್ಕೂ ಹೆಚ್ಚು ನಕಲಿ ಇಮೇಲ್ ಐಡಿಗಳನ್ನು ಸೃಷ್ಟಿಸಿ ತನ್ನ ಕೃತ್ಯಗಳನ್ನು ನಡೆಸಿದ್ದಾನೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಸಂದೇಶಗಳನ್ನು ರವಾನಿಸುತ್ತಿದ್ದ ಈತ, ದೇಶದ ವಿವಿಧ ರಾಜ್ಯಗಳ ವಿಧಾನಸಭೆಗಳಿಗೂ ಬೆದರಿಕೆ ಹಾಕಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

 

ಮಾರ್ಚ್ 27ರಂದು ಮೈಸೂರಿನಲ್ಲಿ ದೆಹಲಿ ಪೊಲೀಸರಿಂದ ಬಂಧಿಸಲ್ಪಟ್ಟ ಆರೋಪಿಯಿಂದ ಮೊಬೈಲ್, ಲ್ಯಾಪ್‌ಟಾಪ್ ಹಾಗೂ ಅನೇಕ ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಾಧನಗಳ ಮಾಹಿತಿಯನ್ನು ಫರೆನ್ಸಿಕ್ ಸೈನ್ಸ್ ಲ್ಯಾಬ್‌ಗೆ ರವಾನಿಸಿ ಪರಿಶೀಲಿಸಲಾಗುತ್ತಿದೆ. ಪ್ರಸ್ತುತ ದೆಹಲಿ ಪೊಲೀಸರ ಕಸ್ಟಡಿಯಲ್ಲಿ ಇರುವ ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಈತನ ಹಿಂದೆ ಯಾವುದೇ ಸಂಘಟನೆಗಳ ಕೈವಾಡವಿದೆಯೇ ಅಥವಾ ವೈಯಕ್ತಿಕ ಕುಚೇಷ್ಟೆಯೇ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ. ಮೈಸೂರಿನ ಬೃಂದಾವನ ಬಡಾವಣೆ ಎರಡನೇ ಹಂತದ ನಿವಾಸಿಯಾಗಿರುವ ಶ್ರೀನಿವಾಸ್, ಇದೇ ಸ್ಥಳದಿಂದ ತನ್ನ ಸಂಪೂರ್ಣ ಆನ್‌ಲೈನ್ ಬೆದರಿಕೆ ಜಾಲವನ್ನು ನಡೆಸುತ್ತಿದ್ದನೆಂಬುದು ತನಿಖೆಯಲ್ಲಿ ಪತ್ತೆಯಾಗಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

2 days ago

   
Image 1
Image 1
ಮಂಡ್ಯ

ಅಪ್ರಾಪ್ತೆಯ ಮೇಲಿನ ದೌರ್ಜನ್ಯ: ಆರೋಪಿಗೆ 20 ವರ್ಷ ಜೈಲು ಶಿಕ್ಷೆ

ಮಂಡ್ಯ: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಬೆಂಗಳೂರು ಗ್ರಾಮಾಂತರ

ಆನೇಕಲ್ ಜಾತ್ರೆಯಲ್ಲಿ ಅಪಘಾತ : ಪಲ್ಲಕ್ಕಿ ಟ್ರ್ಯಾಕ್ಟರ್ ಹರಿದು ಯುವಕ ಸಾವು

ಆನೇಕಲ್: ತಾಲೂಕಿನ ಹುಳಿಮಾವು ಗ್ರಾಮದ ಶ್ರೀ ಕೋದಂಡ ರಾಮಸ್ವಾಮಿ ದೇ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಧಾರವಾಡ

ಹುಬ್ಬಳ್ಳಿ

“ಬಾಲ ಬಿಚ್ಚಿದರೆ ಗುಂಡಾ ಕಾಯ್ದೆ” – 450ಕ್ಕೂ ಹೆಚ್ಚು ರೌಡಿಗಳಿಗೆ ಕಮಿಷನರ್ ಶಶಿಕುಮಾರ್ ಖಡಕ್ ವಾರ್ನಿಂಗ್

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಪುಡಿ ರೌಡಿಗಳ ಚಟುವಟಿ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಬಾಗಲಕೋಟೆ

ಪ್ರೇಯಸಿ ಸಾವಿನ ಸುದ್ದಿ ಕೇಳಿ ಪ್ರಿಯಕರ ಆತ್ಮಹತ್ಯೆ

ಬಾಗಲಕೋಟೆ: ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಪ್ರಿ... ಓದನ್ನು ಮುಂದುವರಿಸಿ


Edited by: ಬಾನು

20 hours ago

   
Image 1
ಬೆಂಗಳೂರು ನಗರ

ಮೈಸೂರು ರಸ್ತೆಯಲ್ಲಿ ಭೀಕರ ಲಾರಿ ಅಪಘಾತ – ಚಾಲಕ ಸ್ಥಳದಲ್ಲೇ ಸಾವು

ಬೆಂಗಳೂರು: ನಗರದ ಮೈಸೂರು ರಸ್ತೆಯ ಸಾಟ್ಲೈಟ್ ಬಸ್ ನಿಲ್ದಾಣದ ಸಿಗ್... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ಲವ್-ಕಮ್-ಅರೆಂಜ್ ಮದುವೆ ದುರಂತ ಅಂತ್ಯ – ಪತಿ ಚಾಕು ಇರಿತಕ್ಕೆ ಬಲಿ

ಬೆಂಗಳೂರು: ಕೌಟುಂಬಿಕ ಕಲಹ ದುರಂತಕ್ಕೆ ತಿರುಗಿ, ಪತಿ ಚಾಕು ಇರಿತದ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ಡೆಲಿವರಿ ಬಾಯ್, ಆಟೋ ಚಾಲಕರಿಂದ ಗಾಂಜಾ ಪೆಡ್ಲಿಂಗ್ – ಇಬ್ಬರು ಬಂಧನ

ಬೆಂಗಳೂರು: ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1
ಬೆಂಗಳೂರು ನಗರ

ಸ್ನ್ಯಾಪ್‌ಚಾಟ್ ಸ್ನೇಹದ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್ – ಮಹಿಳೆಯಿಂದ ಲಕ್ಷಾಂತರ ವಂಚನೆ, ಇಬ್ಬರು ಬಂಧನ

ಬೆಂಗಳೂರು: ಸೋಷಿಯಲ್ ಮೀಡಿಯಾ ಮೂಲಕ ಪರಿಚಯ ಬೆಳೆಸಿ ಖಾಸಗಿ ಫೋಟೋ ಮ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1
ಬೆಂಗಳೂರು ನಗರ

ಬಳಗೆರೆ ರಸ್ತೆ ಕೊಲೆ ಪ್ರಕರಣ ಭೇದ – ನಾಲ್ವರು ಆರೋಪಿಗಳು ಬಂಧನ

ಬೆಂಗಳೂರು: ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಳಗೆರೆ ರಸ್ತೆಯಲ್... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1
ಬೆಂಗಳೂರು ನಗರ

ಪತ್ನಿ ಮೇಲೆ ಪತಿ ಕ್ರೂರ ಹತ್ಯೆ – ಆಸ್ತಿ ವಿವಾದವೇ ಕಾರಣವೇ?

ಬೆಂಗಳೂರು: ನಗರದಲ್ಲಿ ಮತ್ತೊಂದು ಶಾಕ್ ನೀಡುವಂತಿರುವ ಗೃಹ ಕಲಹದ ಪ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1