ಗ್ಯಾಸ್ ಸಿಲಿಂಡರ್ ಅಭಾವ: ಸೌದೆ ಒಲೆ ಬಳಕೆಗೆ ಸಚಿವ ಮುನಿಯಪ್ಪ ಕರೆ

ಬೆಂಗಳೂರು, ಮಾ. 29: ಗಲ್ಫ್ ಯುದ್ಧವು 30ನೇ ದಿನಕ್ಕೆ ತಲುಪಿರುವ ಹಿನ್ನೆಲೆ, ಕರ್ನಾಟಕದಲ್ಲಿ ಗ್ಯಾಸ್ ಸಿಲಿಂಡರ್‌ಗಳ ಕೊರತೆ ಗಂಭೀರವಾಗಿದ್ದು, ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಸಿಲಿಂಡರ್‌ಗಳ ಅಭಾವದಿಂದ ಹೋಟೆಲ್‌ಗಳು ಹಾಗೂ ಕೈಗಾರಿಕೆಗಳು ಭಾಗಶಃ ಸ್ಥಗಿತಗೊಂಡಿವೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜನರು ಖಾಲಿ ಸಿಲಿಂಡರ್‌ಗಳನ್ನು ಹಿಡಿದು ಗ್ಯಾಸ್ ಏಜೆನ್ಸಿಗಳತ್ತ ಧಾವಿಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.

 

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಅವರು ಈ ಬಗ್ಗೆ ಮಾತನಾಡಿ, ಸಿಲಿಂಡರ್ ಕೊರತೆಗೆ ಕೇಂದ್ರ ಸರ್ಕಾರದ ನೀತಿಗಳೇ ಕಾರಣ ಎಂದು ಆರೋಪಿಸಿದರು. ಗ್ರಾಮೀಣ ಪ್ರದೇಶದ ಜನರು ತಾತ್ಕಾಲಿಕವಾಗಿ ಸೌದೆ ಒಲೆ ಅಥವಾ ಒಣ ಕಟ್ಟಿಗೆಗಳನ್ನು ಬಳಸುವಂತೆ ಮನವಿ ಮಾಡಲಾಗಿದೆ. ಬೆಂಗಳೂರು ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಲಭ್ಯವಿರುವ ಹಸಿ ಮರಗಳನ್ನು ಬಳಸುವ ಸಲಹೆಯನ್ನೂ ನೀಡಲಾಗಿದೆ.

 

ಇದರ ನಡುವೆ, ರಾಜ್ಯ ಸರ್ಕಾರ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯನ್ನು 68 ಶೇಕಡಕ್ಕೆ ಹೆಚ್ಚಿಸಿದ್ದು, ದಿನನಿತ್ಯ ಸಾವಿರಾರು ಸಿಲಿಂಡರ್‌ಗಳನ್ನು ವಿತರಿಸುತ್ತಿದೆ. ಸರ್ಕಾರಿ ಮತ್ತು ಅಗತ್ಯ ಸೇವಾ ಸಂಸ್ಥೆಗಳಿಗೆ 5,400 ಸಿಲಿಂಡರ್‌, ಹೋಟೆಲ್‌ಗಳು, ಕ್ಯಾಂಟೀನ್‌ಗಳು ಹಾಗೂ ಆಹಾರ ಮಳಿಗೆಗಳಿಗೆ 17,500 ಸಿಲಿಂಡರ್‌, ಕೃಷಿ, ಮೀನುಗಾರಿಕೆ ಹಾಗೂ ಕೋಳಿ ಸಾಕಣೆ ಕ್ಷೇತ್ರಗಳಿಗೆ 6,000 ಸಿಲಿಂಡರ್‌ಗಳನ್ನು ಒದಗಿಸಲಾಗುತ್ತಿದೆ. ಒಟ್ಟು 29,463 ಸಿಲಿಂಡರ್‌ಗಳು ಪ್ರತಿದಿನ ವಿತರಣೆ ಆಗುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ಇದಲ್ಲದೆ, ಸಿಲಿಂಡರ್‌ಗಳ ಅಕ್ರಮ ಮಾರಾಟವನ್ನು ತಡೆಯಲು ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಈಗಾಗಲೇ 1,169 ಪ್ರಕರಣಗಳು ದಾಖಲಾಗಿವೆ. 1,603 ವಾಣಿಜ್ಯ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿದುಬಂದಿದೆ. ನಿಗದಿತ ದರದಲ್ಲಿ ಮಾತ್ರ ಸಿಲಿಂಡರ್‌ಗಳನ್ನು ಮಾರಾಟ ಮಾಡಬೇಕು ಎಂದು ಎಲ್ಲಾ ವಿತರಕರಿಗೆ ಸರ್ಕಾರ ಎಚ್ಚರಿಕೆ ನೀಡಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

1 day ago

   
Image 1
Image 1
ಕೊಪ್ಪಳ

ಇಂಧನ ಕೊರತೆಯ ವದಂತಿಗಳು ಜನರಲ್ಲಿ ಆತಂಕ – ಬಂಕ್‌ಗಳಲ್ಲಿ ಉದ್ದ ಸಾಲುಗಳು

ಕೊಪ್ಪಳ: ಜಿಲ್ಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯ ಬಗ್ಗೆ... ಓದನ್ನು ಮುಂದುವರಿಸಿ


Edited by: ಬಾನು

20 hours ago

   
Image 1
ಬೆಂಗಳೂರು ಗ್ರಾಮಾಂತರ

“ಶ್ರೀರಾಮನವರ “ಹಬ್ಬದ ಸಂತೋಷವೇ ಭೀಕರ ಅನುಭವ : ಅನ್ನಪ್ರಸಾದ ಸೇವನೆಯಿಂದ 200ಕ್ಕೂ ಹೆಚ್ಚು ಅಸ್ವಸ್ಥರು”

ಬೆಂಗಳೂರು ಗ್ರಾಮಾಂತರ: ಶ್ರೀರಾಮನವಮಿ ಹಬ್ಬದ ಅಂಗವಾಗಿ ವಿತರಿಸಲಾದ... ಓದನ್ನು ಮುಂದುವರಿಸಿ


Edited by: ಬಾನು

20 hours ago

   
Image 1
ಬೆಂಗಳೂರು ನಗರ

1ರೊಳಗೆ ಲೇಖಕಿ: ಬಾಲಕಿ ಪರಿಣಿತಾಳ ಸಾಧನೆಗೆ TA ಶರವಣ ಪ್ರಶಂಸೆ”

ಬೆಂಗಳೂರು: ಕಿರಿಯ ವಯಸ್ಸಿನಲ್ಲೇ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ... ಓದನ್ನು ಮುಂದುವರಿಸಿ


Edited by: ಬಾನು

20 hours ago

   
Image 1
ಉಡುಪಿ

ಪೊಲೀಸ್ ಮೇಲೆ ದಾಳಿ ಹಾಗೂ ಕ್ರಿಕೆಟ್ ಬೆಟ್ಟಿಂಗ್ ಜಾಲಕ್ಕೆ ಐವರ ಬಂಧನ

ಉಡುಪಿ: ಉಡುಪಿ ಜಿಲ್ಲೆಯ ಕಾರ್ಕಳ ಮತ್ತು ಶಿರ್ವ ಪ್ರದೇಶಗಳಲ್ಲಿ ಪೊ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಕೋಲಾರ

ನಾಗ ಸಾಧುಗಳ ದೈವಿಕ ಶಕ್ತಿ ಕಾಣಲು ಕೋಲಾರದಲ್ಲಿ ಭಕ್ತಿಭಾವದ ಮಹಾಯಜ್ಞ ಶೋಭಾಯಾತ್ರೆ ಉದ್ಘಾಟನೆ

ಕೋಲಾರ: ಇಂದು ಕೋಲಾರದ ಮುಳಬಾಗಿಲು ತಾಲ್ಲೂಕಿನ ಪ್ರಸಿದ್ಧ ವಿರೂಪಾಕ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಯಾದಗಿರಿ

ಶಾಲಾ ರಜೆ ದಿನ ದುಃಖಕರ ಘಟನೆ : ಕೃಷಿ ಹೊಂಡದಲ್ಲಿ ಮುಳುಗಿ ನಾಲ್ವರು ಮಕ್ಕಳು ಸಾವು– ಗ್ರಾಮದಲ್ಲಿ ಆಘಾತ

ಯಾದಗಿರಿ: ನಗನೂರು ಗ್ರಾಮದ ಕೃಷಿ ಹೊಂಡದಲ್ಲಿ ಗುರುವಾರ ಬೆಳಿಗ್ಗೆ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಚಿಕ್ಕಮಗಳೂರು

ಫೇಸ್‌ಬುಕ್ ಮೋಸ : ಫೇಸ್‌ಬುಕ್‌ ಜಾಹೀರಾತು ನಂಬಿ 1.28 ಕೋಟಿ ಕಳೆದುಕೊಂಡ ವ್ಯಕ್ತಿ

ಚಿಕ್ಕಮಗಳೂರು: “ಮೋಸ ಹೋಗುವವರು ಇರುವವರೆಗೆ ಮೋಸಗಾರರು ಕಡಿಮೆಯಾಗು... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬಾಗಲಕೋಟೆ

ಬಾಗಲಕೋಟೆ ಉಪ ಚುನಾವಣೆಗೆ ಸಿದ್ದರಾಮಯ್ಯ ಹಾಟ್ ಎಂಟ್ರಿ: ಉಮೇಶ್ ಮೇಟಿ ಪರ ಪ್ರಚಾರ ಆರಂಭ

ಬಾಗಲಕೋಟೆ, ಮಾರ್ಚ್ 29: ಏಪ್ರಿಲ್ 9ರಂದು ನಡೆಯಲಿರುವ ಬಾಗಲಕೋಟೆ ವ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ಡಾ. ವಿಷ್ಣುವರ್ಧನ್ ರಸ್ತೆಯಲ್ಲಿ ಕಸದ ರಾಶಿ ವಿಡಿಯೋ ಮಾಡಿದ್ದ ಅನಿರುದ್ಧ್ -ಅಧಿಕಾರಿಗಳ ಕ್ರಮ

ಬೆಂಗಳೂರು, ಮಾ. 29: ನಟ ಅನಿರುದ್ಧ ಜಟ್ಕರ್ ಕಳೆದ ಐದು ವರ್ಷಗಳಿಂದ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ನಮ್ಮ ಮೆಟ್ರೋ ಸ್ಟೇಷನ್‌ಗೆ ಖಾಸಗಿ ಕಂಪನಿ ಹೆಸರು: ಆದಾಯ ಹೆಚ್ಚಿಸುವತ್ತ ಹೆಜ್ಜೆ

ಬೆಂಗಳೂರು, ಮಾ. 29: ನಗರದ ಔಟರ್ ರಿಂಗ್ ರೋಡ್‌ನ ಡಿಆರ್‌ಡಿಒ ಸ್ಪೋ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1