ಬುಧವಾರದ ರಾಶಿ ಭವಿಷ್ಯ – 08 ಏಪ್ರಿಲ್ 2026
ಮೇಷ ರಾಶಿ
ಈ ಅವಧಿಯಲ್ಲಿ ನಿಮಗೆ ವಿದೇಶ ಭಾಗ್ಯ ಒಲಿಯುವ ಸಾಧ್ಯತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ ಸಾಧಿಸುವ ಅವಕಾಶಗಳು ಕಂಡು ಬರುತ್ತವೆ. ಎಣ್ಣೆ, ನೀರು ಹಾಗೂ ಮಾರಾಟ ವ್ಯವಹಾರದಲ್ಲಿರುವವರಿಗೆ ಉತ್ತಮ ಧನಲಾಭ ದೊರೆಯಲಿದೆ. ಸ್ಯಾರಿ ಸೆಂಟರ್ ಪ್ರಾರಂಭಿಸುವ ಯೋಚನೆಗೂ ಇದು ಸೂಕ್ತ ಕಾಲ. ಸಂಗಾತಿಯನ್ನು ನೆನೆದು ಮನಸ್ಸಿನಲ್ಲಿ ಸ್ವಲ್ಪ ಒತ್ತಡ, ಚಿಂತನೆ ಕಾಣಿಸಬಹುದು. ಕಮಿಷನ್ ಏಜೆಂಟ್‌ಗಳು ಹಾಗೂ ಆರ್ಥಿಕ ಸಲಹೆಗಾರರಿಗೆ ಸಿಹಿ ಸುದ್ದಿಗಳು ಲಭಿಸುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಪ್ರಮೋಷನ್ ಪ್ರಯತ್ನದಲ್ಲಿ ಸ್ವಲ್ಪ ಹಿನ್ನಡೆ ಕಂಡರೂ, ತಾತ್ಕಾಲಿಕ ಸಿಬ್ಬಂದಿಗೆ ಖಾಯಂ ನೇಮಕಾತಿಯ ಅವಕಾಶಗಳು ಸಿಗುವ ಸಮಯ ಇದು. ವಕೀಲರಿಗೆ ಉನ್ನತ ಹುದ್ದೆ ದೊರೆಯುವ ಸಾಧ್ಯತೆ ಇದೆ. ಗ್ಲಾಸ್, ಪ್ರೇಮ್ ವರ್ಕ್ ಹಾಗೂ ಉದ್ದಿಮೆ ಕ್ಷೇತ್ರದಲ್ಲಿರುವವರಿಗೆ ಆರ್ಥಿಕ ಚೇತರಿಕೆ ಕಾಣಿಸಲಿದೆ. ಆದರೆ ಆಸ್ತಿ ದಾಖಲಾತಿಗಳ ವಿಷಯದಲ್ಲಿ ಗೊಂದಲ ಉಂಟಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ವ್ಯಾಪಾರ ವಹಿವಾಟಿನಲ್ಲಿ ನೀವು ಹೆಚ್ಚು ಕ್ರಿಯಾಶೀಲರಾಗಿರುತ್ತೀರಿ. ಮುಂದಾಲೋಚನೆಯೊಂದಿಗೆ ತೆಗೆದುಕೊಳ್ಳುವ ನಿರ್ಧಾರಗಳು ಲಾಭದತ್ತ ನಿಮ್ಮನ್ನು ಕೊಂಡೊಯ್ಯುತ್ತವೆ. ರಾಜಕೀಯ ಕ್ಷೇತ್ರದಲ್ಲಿ ಸೃಜನಶೀಲ ನಾಯಕತ್ವ ತೋರಿಸಿ ಜನಬೆಂಬಲ ಹಾಗೂ ಆಶೀರ್ವಾದ ಗಳಿಸುವಿರಿ. ಮತಕ್ಷೇತ್ರ ಕಾರ್ಯಗಳಲ್ಲಿ ತೊಡಗಿ ಯಶಸ್ಸು ಪಡೆಯುವಿರಿ. ನಿಮ್ಮ ಕಾರ್ಯಕ್ಷಮತೆಯಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ಸಂಭವಿಸಿ, ನಿಮಗೆ ಗೌರವ ಹೆಚ್ಚುತ್ತದೆ. ಧನಲಾಭ ಸಾಮಾನ್ಯ ಮಟ್ಟದಲ್ಲಿ ಇರಲಿದೆ. ನರದೌರ್ಬಲ್ಯ ಸಮಸ್ಯೆಗಳ ಬಗ್ಗೆ ಎಚ್ಚರಿಕೆ ವಹಿಸಿ. ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ದರ್ಶನ ಮಾಡುವುದರಿಂದ ಮನಶಾಂತಿ ಲಭಿಸುತ್ತದೆ. ವೃತ್ತಿ ಕ್ಷೇತ್ರದಲ್ಲಿ ಕೆಲವರು ನಿಮ್ಮ ವಿರುದ್ಧ ಹುನ್ನಾರ ನಡೆಸುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ನಡೆದುಕೊಳ್ಳಿ.
ವೃಷಭ ರಾಶಿ
ಈ ಅವಧಿಯಲ್ಲಿ ನರ್ಸರಿ, ಸಸಿ ಸಂಬಂಧಿತ ವ್ಯವಹಾರಗಳಲ್ಲಿ ಲಾಭದ ಸೂಚನೆಗಳು ಕಾಣಿಸಿಕೊಳ್ಳುತ್ತವೆ. ಸಂತಾನ ಭಾಗ್ಯ ಲಭಿಸುವ ಸಾಧ್ಯತೆ ಇದೆ. ನಿಮ್ಮ ಕಷ್ಟದ ದಿನಗಳು ನಿಧಾನವಾಗಿ ದೂರವಾಗುತ್ತಾ ಸುಖದ ದಿನಗಳು ಆರಂಭವಾಗುವ ಲಕ್ಷಣಗಳು ಗೋಚರಿಸುತ್ತವೆ. ಇಷ್ಟಾರ್ಜಿತ ಮದುವೆ ಪ್ರಾಪ್ತಿಯ ಯೋಗವೂ ಇದೆ. ಹಣಕಾಸಿನ ವಿಷಯದಲ್ಲಿ ನೀವು ಹೆಚ್ಚು ಚಿಂತನೆ ಮಾಡುವಿರಿ. ನಿವೃತ್ತರಾದವರಿಗೆ ಕುಟುಂಬದಲ್ಲಿ ಸ್ವಲ್ಪ ಮನಸ್ತಾಪ ಎದುರಾಗುವ ಸಾಧ್ಯತೆ ಇದೆ. ದಂಪತಿಗಳು ಸಂಸಾರ ಸೌಖ್ಯಕ್ಕಾಗಿ ಹೊಸ ಮಾರ್ಗಗಳನ್ನು ಹುಡುಕುವಿರಿ. ಉದ್ಯಮದಲ್ಲಿ ಮಾಡುವ ಬದಲಾವಣೆಗಳು ಉತ್ತಮ ಫಲಿತಾಂಶಗಳನ್ನು ತರುತ್ತವೆ. ರಕ್ಷಣಾ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಕಠಿಣ ಸವಾಲುಗಳು ಎದುರಾದರೂ, ಅವುಗಳಿಗೆ ಸಮರ್ಪಕ ಪರಿಹಾರವೂ ಸಿಗಲಿದೆ. ಅನಾರೋಗ್ಯಪೀಡಿತರ ಆರೋಗ್ಯದಲ್ಲಿ ಕೆಲವೊಮ್ಮೆ ಗಂಭೀರತೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ವಿಶೇಷ ಜಾಗ್ರತೆ ಅಗತ್ಯ. ಕಲಾವಿದರು, ಸಂಗೀತಗಾರರು, ಹಾಡುಗಾರರು ಹಾಗೂ ಪುರಾಣ ಪ್ರವಚನಕಾರರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ದಂಪತಿಗಳಿಗೆ ಕೆಲ ಸಮಯ ಸಂತಾನದ ವಿಚಾರದಲ್ಲಿ ತೊಂದರೆ ಎದುರಾಗಬಹುದು.
ಮಿಥುನ ರಾಶಿ
ಈ ಅವಧಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗಳಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ ಹಾಗೂ ಉನ್ನತ ಮಟ್ಟದ ಉದ್ಯೋಗ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಹಾಲು ಉತ್ಪನ್ನ, ಲಘು ಪಾನೀಯಗಳು ಹಾಗೂ ದರ್ಶನಿ/ಫಾಸ್ಟ್ ಫುಡ್ ವ್ಯಾಪಾರದಲ್ಲಿರುವವರಿಗೆ ಲಾಭದಾಯಕ ಸಮಯ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಆರ್ಥಿಕ ಚೇತರಿಕೆ ಕಂಡುಬರುತ್ತದೆ. ವ್ಯಾಪಾರ-ವ್ಯವಹಾರಗಳಲ್ಲಿ ಪ್ರಗತಿ ಸಾಧಿಸುವಿರಿ. ವಿದೇಶ ಪ್ರವಾಸದ ವೀಸಾ ವಿಷಯದಲ್ಲಿ ಹೆಚ್ಚಿನ ಆಲೋಚನೆ ಮತ್ತು ಯೋಜನೆ ಮಾಡಬೇಕಾಗುತ್ತದೆ. ಪ್ರೇಮ ಸಂಬಂಧಗಳಲ್ಲಿ ಮನಸ್ಥಿತಿ ಮತ್ತು ವಾಸ್ತವಗಳ ನಡುವಿನ ವ್ಯತ್ಯಾಸವನ್ನು ನೀವು ಅರಿಯುವಿರಿ. ಈಗಿರುವ ಉದ್ಯೋಗದಲ್ಲೇ ಮುಂದುವರೆಯುವುದು ಉತ್ತಮ. ಜೊತೆಗೆ ಸರ್ಕಾರಿ ಉದ್ಯೋಗದ ಪ್ರಯತ್ನಕ್ಕೂ ಶುಭ ಸಮಯ. ಆಸ್ತಿ ಸಂಬಂಧಿತ ಸಮಸ್ಯೆಗಳು ನಿವಾರಣೆಯಾಗುವ ಸಾಧ್ಯತೆ ಇದೆ. ಹೊಸ ರೀತಿಯ ವ್ಯವಹಾರ ಆರಂಭಿಸುವ ಮೊದಲು ಸಂಪೂರ್ಣ ಮಾಹಿತಿ ಪಡೆದು, ವಿಶೇಷವಾಗಿ ಪತ್ನಿ ಅಥವಾ ಸಂಗಾತಿಯ ಮಾರ್ಗದರ್ಶನ ಪಡೆಯುವುದು ಲಾಭದಾಯಕ. ಬಾಳಸಂಗಾತಿ ಹುಡುಕುತ್ತಿರುವವರಿಗೆ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ವಿವಾಹ ಸಂಭ್ರಮ ನಡೆಯುವ ಸಾಧ್ಯತೆ ಕಾಣಿಸುತ್ತದೆ.
ಕಟಕ ರಾಶಿ
ಈ ಅವಧಿಯಲ್ಲಿ ಟೈಲ್ಸ್ ಅಥವಾ ಗ್ರಾನೈಟ್ಸ್ ಶೋರೂಮ್ ಪ್ರಾರಂಭಿಸುವ ಯೋಚನೆ ಮೂಡಬಹುದು. ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ. ಕೆಲವರು ನೌಕರಿ ಬದಲಾಯಿಸುವ ನಿರ್ಧಾರ ಕೈಗೊಳ್ಳುವಿರಿ. ಉನ್ನತ ಹುದ್ದೆಯ ಅಧಿಕಾರಿಗಳಿಗೆ ಧನಲಾಭದ ಸೂಚನೆಗಳು ಕಾಣಿಸಿಕೊಳ್ಳುತ್ತವೆ. ಯುವ ರಾಜಕೀಯ ವ್ಯಕ್ತಿಗಳಿಗೆ ಸ್ನೇಹಿತರ ಸಹಕಾರದಿಂದ ರಾಜಕೀಯದಲ್ಲಿ ಸ್ಥಾನಮಾನ ದೊರೆಯುವ ಅವಕಾಶಗಳಿವೆ. ಆರ್ಥಿಕ ಶಕ್ತಿ ಹೆಚ್ಚಿಸಲು ಕೈಗೊಂಡ ಯೋಜನೆಗಳು ಯಶಸ್ವಿಯಾಗುವ ಸಾಧ್ಯತೆ ಇದೆ. ಭೂಮಿ ಸಂಬಂಧಿತ ವ್ಯವಹಾರಗಳಲ್ಲಿ ಪ್ರಗತಿ ಕಾಣಿಸಿಕೊಳ್ಳುತ್ತದೆ. ಉದ್ಯೋಗದಲ್ಲಿ ಬಡ್ತಿ ಭಾಗ್ಯ ಇದ್ದರೂ, ಪಾಲುಗಾರಿಕೆ ವ್ಯವಹಾರಗಳಲ್ಲಿ ನಿಧಾನಗತಿಯ ಪ್ರಗತಿ ಕಂಡುಬರುತ್ತದೆ. ಮಕ್ಕಳಿಂದ ಕೆಲವೊಮ್ಮೆ ಮನಸ್ತಾಪ ಉಂಟಾಗಬಹುದು. ಪತ್ನಿಯ ಸಹಕಾರದ ಕೊರತೆಯಿಂದ ಮಾನಸಿಕ ಕಿರಿಕಿರಿ ಅನುಭವಿಸುವ ಸಾಧ್ಯತೆ ಇದೆ. ಮದುವೆ ವಿಳಂಬವಾಗುವ ಲಕ್ಷಣಗಳು ಕಂಡುಬರುವುದರಿಂದ ಸಂಗಾತಿಯ ಜೊತೆ ತಾಳ್ಮೆಯಿಂದ ವರ್ತಿಸುವುದು ಉತ್ತಮ. ಸ್ತ್ರೀಶಕ್ತಿ ನಡೆಸುವ ಹೋಂ ಪ್ರಾಡಕ್ಟ್ಸ್ ಉದ್ಯಮಗಳಲ್ಲಿ ಉತ್ತಮ ಪ್ರಗತಿ ಸಾಧಿಸುವ ಅವಕಾಶಗಳು ಲಭಿಸುತ್ತವೆ.
ಸಿಂಹ ರಾಶಿ
ಈ ಅವಧಿಯಲ್ಲಿ ಸಂಗಾತಿಯೊಂದಿಗೆ ಮಾತುಕತೆ ಕಡಿಮೆಯಾಗುವ ಸಾಧ್ಯತೆ ಇದೆ. ವಿವಾಹ ಸಂಬಂಧಿತ ಕಾರ್ಯಗಳಲ್ಲಿ ಅಡಚಣೆಗಳು ಎದುರಾಗಬಹುದು. ಆದರೆ ವ್ಯವಸಾಯದಲ್ಲಿ ಉತ್ತಮ ಆದಾಯ ದೊರೆಯಲಿದೆ. ಕೃಷಿ ಭೂಮಿಗೆ ಬೋರ್ವೆಲ್ ಅಳವಡಿಸುವ ಯೋಚನೆ ಕೂಡ ಮೂಡಬಹುದು. ಉದ್ಯಮ ಮತ್ತು ವ್ಯವಹಾರಗಳಲ್ಲಿ ಆರ್ಥಿಕ ಚೇತರಿಕೆ ಕಂಡುಬರುತ್ತದೆ. ಹಣಕಾಸಿನ ಒಳಹರಿವು ಹೆಚ್ಚಾಗುತ್ತದೆ. ಮಿತ್ರರೊಂದಿಗೆ ಔತಣಕೂಟಗಳಲ್ಲಿ ಪಾಲ್ಗೊಂಡು ಸಂತೋಷ ಅನುಭವಿಸುವಿರಿ. ಆದರೆ ಸಂತೋಷದ ಸಂದರ್ಭಗಳಲ್ಲಿ ಅತಿಯಾಗಿ ಮೈಮರೆತರೆ ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಕಾರ್ಯಕರ್ತರಿಂದ ಕೆಲವೊಮ್ಮೆ ಮನಸ್ತಾಪ ಉಂಟಾಗಬಹುದು. ಅನಾರೋಗ್ಯಪೀಡಿತರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಸರ್ಕಾರದಿಂದ ಬರಬೇಕಿದ್ದ ಧನಸಹಾಯಗಳು ನಿಮ್ಮ ಕೈಗೆ ತಲುಪುವ ಸಾಧ್ಯತೆ ಇದೆ. ಕ್ಲಾಸ್-ಒನ್ ಗುತ್ತಿಗೆದಾರರಿಗೆ ಸರ್ಕಾರದ ಕೆಲವು ಬಾಕಿ ಹಣಗಳು ಬಿಡುಗಡೆ ಆಗುವ ಸಾಧ್ಯತೆ ಇದೆ. ನಿರುದ್ಯೋಗಿಗಳಿಗೆ ತಮ್ಮ ಸಾಮರ್ಥ್ಯಕ್ಕೆ ತಕ್ಕ ಫಲಿತಾಂಶ ದೊರೆಯಲಿದೆ. ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡಲು ಬಯಸುವವರಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ. ಹಾಲು ಉತ್ಪಾದಕರಿಗೆ ಲಾಭದಾಯಕ ಸಮಯವಾಗಿದೆ.
ಕನ್ಯಾ ರಾಶಿ
ಈ ಅವಧಿಯಲ್ಲಿ ಹೋಟೆಲ್ ಮಾಲೀಕರಿಗೆ ಪಕ್ಕದ ವ್ಯವಹಾರಸ್ಥರಿಂದ ಕೆಲ ತೊಂದರೆಗಳು ಎದುರಾಗುವ ಸಾಧ್ಯತೆ ಇದೆ. ಮಗಳಿಗೆ ವಿವಾಹ ಯೋಗ ಕಾಣಿಸಿಕೊಳ್ಳುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಯ್ಕೆ ಸಾಧ್ಯತೆ ಇದ್ದು, ಉನ್ನತ ವಿದ್ಯಾಭ್ಯಾಸ ಅಥವಾ ಉದ್ಯೋಗಕ್ಕಾಗಿ ವಿದೇಶ ಪ್ರಯಾಣದ ಅವಕಾಶವೂ ಲಭಿಸಬಹುದು. ಕೋಳಿ ಫಾರಂ, ಮತ್ಸ್ಯ ಉದ್ಯಮ ಹಾಗೂ ಮೀನುಗಾರಿಕೆ ಮತ್ತು ನೀರು ಸರಬರಾಜು ಸಂಬಂಧಿತ ವ್ಯವಹಾರಗಳಲ್ಲಿ ಲಾಭದ ಸೂಚನೆಗಳಿವೆ. ಕಾಯಕದಲ್ಲಿ ಉತ್ತಮ ಆದಾಯ ದೊರೆಯಲಿದೆ. ವೃತ್ತಿಯಲ್ಲಿ ಗಮನಾರ್ಹ ಬದಲಾವಣೆ ಸಂಭವಿಸಬಹುದು. ಪ್ರೇಮ ಸಂಬಂಧಗಳಲ್ಲಿ ಸಂಭಾಷಣೆ ಮುಂದುವರಿಯುತ್ತದೆ. ಕೃಷಿ ಉತ್ಪನ್ನಗಳನ್ನು ಸಂಗ್ರಹಿಸುವವರಿಗೆ ಸ್ವಲ್ಪ ಹಿನ್ನಡೆ ಕಾಣಿಸಬಹುದು. ಕಲಾವಿದರಿಗೆ ತಮ್ಮ ಪ್ರಯತ್ನದಲ್ಲಿ ಯಶಸ್ಸು ಸಿಗುತ್ತದೆ. ಎದುರಾಳಿಗಳು ನಿಮ್ಮ ವಿರುದ್ಧ ಒಳ ಸಂಚು ರೂಪಿಸುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ನಡೆದುಕೊಳ್ಳುವುದು ಅಗತ್ಯ. ಬಟ್ಟೆ, ದಿನಸಿ ಹಾಗೂ ಆಭರಣ ವ್ಯಾಪಾರದಲ್ಲಿ ಸ್ವಲ್ಪ ಮಟ್ಟಿನ ಲಾಭ ನಿರೀಕ್ಷಿಸಬಹುದು. ರೈತರಿಗೆ ಬೆಳೆಗಳಿಗೆ ಉತ್ತಮ ಬೆಲೆ ಸಿಗುವ ಸಾಧ್ಯತೆ ಇದೆ. ನವೀನ ಕೃಷಿ ಉದ್ಯಮ ಆರಂಭಿಸುವ ಯೋಚನೆ ಮೂಡಬಹುದು. ಫ್ಯಾಶನ್ ಡಿಸೈನ್, ಬ್ಯೂಟಿ ಪಾರ್ಲರ್ ಮತ್ತು ಪುರುಷರ ಸಲೂನ್ ವ್ಯವಹಾರಗಳಲ್ಲಿ ಬೇಡಿಕೆ ಹೆಚ್ಚಾಗುತ್ತದೆ. ವೃತ್ತಿಯಲ್ಲಿ ನಿಂತಿದ್ದ ಸಂಬಳ ದೊರೆಯುವ ಸಾಧ್ಯತೆ ಇದೆ.
ತುಲಾ ರಾಶಿ
ಈ ಅವಧಿಯಲ್ಲಿ ಭೂ ವ್ಯವಹಾರಗಳಲ್ಲಿ ಅಡಚಣೆಗಳು ಹಾಗೂ ಆತಂಕಗಳು ಎದುರಾಗುವ ಸಾಧ್ಯತೆ ಇದೆ. ಹೋಂ ಮೇಡ್ ಪದಾರ್ಥಗಳ ವ್ಯಾಪಾರಸ್ಥರಿಗೆ ಉತ್ತಮ ಆದಾಯ ದೊರೆಯುತ್ತದೆ. ಪುಸ್ತಕ ವ್ಯಾಪಾರದಲ್ಲಿ ಮಂದಗತಿಯ ಲಾಭ ಕಾಣಿಸಿಕೊಳ್ಳಬಹುದು. ತಾಂತ್ರಿಕ ಪರಿಣತರಿಗೆ ವಿದೇಶದಲ್ಲಿ ಉದ್ಯೋಗ ಅವಕಾಶಗಳು ಲಭಿಸುವ ಸಾಧ್ಯತೆ ಇದ್ದರೂ, ವೀಸಾ ಸಂಬಂಧಿತ ಗೊಂದಲಗಳು ಎದುರಾಗಬಹುದು. ನಿರುದ್ಯೋಗಿಗಳಿಗೆ ಉತ್ತಮ ಕೆಲಸ ಸಿಗುವ ಅವಕಾಶ ಇದೆ. ಕೆಲಸದಲ್ಲಿ ಒತ್ತಡ ಹೆಚ್ಚಿದ್ದರೂ, ಅದೇ ಉದ್ಯೋಗದಲ್ಲಿ ಮುಂದುವರೆಯುವುದು ಒಳಿತು. ಮೇಲಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿ, ಉದ್ಯೋಗದಲ್ಲಿ ಬಡ್ತಿ ಪಡೆಯುವ ಸಾಧ್ಯತೆ ಇದೆ. ವ್ಯಾಪಾರ ವ್ಯವಹಾರಗಳಲ್ಲಿ ಪತ್ನಿ ಅಥವಾ ಸಂಗಾತಿಯ ಮಾರ್ಗದರ್ಶನ ಲಾಭದಾಯಕವಾಗಲಿದೆ. ಕೆಲವು ಪ್ರಮುಖ ವ್ಯವಹಾರ ಉದ್ದೇಶಗಳನ್ನು ಬಹಿರಂಗಪಡಿಸದೇ ಇರುವುದು ಉತ್ತಮ. ಸ್ತ್ರೀಯರ ಬಗ್ಗೆ ಟೀಕೆ ಮಾಡುವ ಮುನ್ನ ವಾಸ್ತವಾಂಶಗಳನ್ನು ತಿಳಿದು ಮಾತನಾಡುವುದು ಅಗತ್ಯ. ಉಸಿರಾಟದ ತೊಂದರೆ ಕಂಡುಬಂದಲ್ಲಿ ವೈದ್ಯರ ಸಲಹೆ ಪಡೆಯಿರಿ. ಫ್ಯಾಷನ್ ಡಿಸೈನ್ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸ ದೊರೆತು ಉತ್ತಮ ಆದಾಯ ಗಳಿಸುವಿರಿ.
ವೃಶ್ಚಿಕ ರಾಶಿ
ಈ ಅವಧಿಯಲ್ಲಿ ಆಮದು-ರಫ್ತು ವಸ್ತುಗಳ ವಹಿವಾಟಿನಲ್ಲಿ ಉತ್ತಮ ಲಾಭ ನಿರೀಕ್ಷಿಸಬಹುದು. ಹೊಸ ವ್ಯಾಪಾರಕ್ಕೆ ಕೈಹಾಕುವ ಬದಲು, ಈಗಿರುವ ವ್ಯವಹಾರವನ್ನು ಮುಂದುವರಿಸುವುದು ಒಳಿತು. ಸರ್ಕಾರಿ ಕಚೇರಿ ಹಾಗೂ ಕೋರ್ಟ್ ಸಂಬಂಧಿತ ಕೆಲಸಗಳಲ್ಲಿ ಅಡಚಣೆಗಳು ಮುಂದುವರಿಯುವ ಸಾಧ್ಯತೆ ಇದೆ. ಆದರೂ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹಣದ ಹರಿವು ಹೆಚ್ಚಾಗಿ ಆರ್ಥಿಕ ಚೇತರಿಕೆ ಕಾಣಿಸಿಕೊಳ್ಳುತ್ತದೆ. ಶತ್ರುಗಳ ಮನೋಭಾವದಲ್ಲಿ ಬದಲಾವಣೆ ಉಂಟಾಗಿ, ಸಮಸ್ಯೆಗಳು ನಿಧಾನವಾಗಿ ಕಡಿಮೆಯಾಗುವ ಸಾಧ್ಯತೆ ಇದೆ. ಅನಿರೀಕ್ಷಿತವಾಗಿ ಮಕ್ಕಳ ವಿವಾಹ ವಿಚಾರ ಮುಂದಕ್ಕೆ ಬರುವ ಸಂಭವವಿದೆ. ಮಕ್ಕಳಿಂದ ಧನಸಹಾಯ ದೊರೆಯುವ ಸಾಧ್ಯತೆ ಇದೆ. ರಾಜಕೀಯ ಕ್ಷೇತ್ರದಲ್ಲಿರುವವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಮಾಜದಲ್ಲಿ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳುವಿರಿ.
ಧನಸ್ಸು ರಾಶಿ
ಈ ಅವಧಿಯಲ್ಲಿ ಹೊಲಗಳಲ್ಲಿ ಸೌರಶಕ್ತಿ ಅಳವಡಿಸುವ ಯೋಚನೆ ಮೂಡಬಹುದು. ಅಧಿಕಾರಿ ವರ್ಗದವರಿಗೆ ಅನಾವಶ್ಯಕ ವಿವಾದಗಳು ಎದುರಾಗುವ ಸಾಧ್ಯತೆ ಇದೆ. ಪಾಲುದಾರಿಕೆ ವ್ಯಾಪಾರದಲ್ಲಿ ನಷ್ಟ ಕಂಡುಬರುವುದರಿಂದ ಜಾಗ್ರತೆ ಅಗತ್ಯ. ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಯೋಜನೆಗಳನ್ನು ರೂಪಿಸುವುದು ಉತ್ತಮ. ವೃತ್ತಿ ಕ್ಷೇತ್ರದಲ್ಲಿ ಹಿರಿಯ ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳಿಂದ ತೊಂದರೆಗಳು ಎದುರಾಗುವ ಸಾಧ್ಯತೆ ಇದೆ. ಲೋಹ ಉದ್ಯಮದಾರರಿಗೆ ಲಾಭದಾಯಕ ಸಮಯ. ಕೃಷಿಕರಿಗೆ ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರೆಯಲಿದೆ. ತೆರಿಗೆ ತಜ್ಞರಿಗೆ ಹೆಚ್ಚಿನ ಬೇಡಿಕೆ ಉಂಟಾಗುತ್ತದೆ. ಆಸ್ತಿ ಖರೀದಿ ಮಾಡುವ ಯೋಗವೂ ಇದೆ. ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಪ್ರಭಾವಿ ವ್ಯಕ್ತಿಗಳ ಒತ್ತಡ ಎದುರಾಗುವ ಸಾಧ್ಯತೆ ಇದೆ. ಕೆಲಸದ ಒತ್ತಡದಿಂದ ಆರೋಗ್ಯದ ಮೇಲೆ ಪರಿಣಾಮ ಬೀಳಬಹುದು. ಮಾನಸಿಕ ಖಿನ್ನತೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ. ಮೂಳೆ ನೋವು ಸಮಸ್ಯೆಗಳು ಕಾಡಬಹುದು. ಸಂಗಾತಿಯಿಂದ ಅನಿರೀಕ್ಷಿತ ಉಡುಗೊರೆ ದೊರೆಯುವ ಸಾಧ್ಯತೆ ಇದೆ. ಅನಿರೀಕ್ಷಿತವಾಗಿ ಮದುವೆ ಸಂಬಂಧಿತ ಶುಭ ಸುದ್ದಿ ಬರಬಹುದು.
ಮಕರ ರಾಶಿ
ಈ ಅವಧಿಯಲ್ಲಿ ಕೆಲಸಕ್ಕೆ ಮರು ಸೇರ್ಪಡೆಯಾಗುವ ಅವಕಾಶ ದೊರೆಯಬಹುದು. ಸ್ಥಿರಾಸ್ತಿ ಖರೀದಿಸುವ ಯೋಗವಿದೆ. ಕೌನ್ಸಿಲಿಂಗ್ ವೃತ್ತಿಯಲ್ಲಿ ಇರುವವರಿಗೆ ಆದಾಯದ ಜೊತೆಗೆ ಉನ್ನತ ಸ್ಥಾನಮಾನವೂ ಲಭಿಸುವ ಸಾಧ್ಯತೆ ಇದೆ. ಜಮೀನಿನಲ್ಲಿ ಪವನಶಕ್ತಿ ಅಳವಡಿಸುವ ಯೋಚನೆ ಮೂಡಬಹುದು. ಆದರೆ ವಿದ್ಯುತ್ ಸಂಬಂಧಿತ ಕೆಲಸಗಳಲ್ಲಿ ಅವಘಡಗಳ ಸಾಧ್ಯತೆ ಹೆಚ್ಚಿರುವುದರಿಂದ ವಿಶೇಷ ಜಾಗ್ರತೆ ಅಗತ್ಯ. ಮದುವೆ ತೀರ್ಮಾನಗಳಲ್ಲಿ ಆತುರಪಡದೆ ಸಮಾಧಾನವಾಗಿ ಯೋಚಿಸಿ ಮುಂದುವರಿಯುವುದು ಉತ್ತಮ. ಉದ್ಯೋಗದಲ್ಲಿ ಪ್ರಮೋಷನ್ ದೊರೆಯುವ ಸಾಧ್ಯತೆ ಇದ್ದು, ಹೆಚ್ಚಿದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿ ಮೆಚ್ಚುಗೆ ಗಳಿಸುವಿರಿ. ಶಿಕ್ಷಕರಿಗೆ ಸ್ಥಿರಾಸ್ತಿ ಸಂಪಾದಿಸುವ ಯೋಗವಿದೆ. ವೇದಿಕೆ ಹಾಗೂ ಒಳಾಂಗಣ ಅಲಂಕಾರ ಕ್ಷೇತ್ರದಲ್ಲಿರುವವರಿಗೆ ಹೆಚ್ಚಿನ ಬೇಡಿಕೆ ಬರಲಿದೆ. ಕೃಷಿ ವಿಜ್ಞಾನ ಓದಿದವರಿಗೆ ಉದ್ಯೋಗ ಅವಕಾಶಗಳು ದೊರೆಯುತ್ತವೆ. ಸಂಗಾತಿಯ ಮೇಲಿದ್ದ ಮುನಿಸು ದೂರವಾಗಿ, ಮತ್ತೆ ಒಗ್ಗಟ್ಟಿನಿಂದ ಜೀವನ ಸಾಗಿಸುವಿರಿ.
ಕುಂಭ ರಾಶಿ
ಈ ಅವಧಿಯಲ್ಲಿ ನಿಂತಿದ್ದ ಮದುವೆ ಕಾರ್ಯಗಳು ವಿಜೃಂಭಣೆಯಿಂದ ನೆರವೇರುವ ಸಾಧ್ಯತೆ ಇದೆ. ನೀವು ಜಯದ ಹಾದಿಯಲ್ಲಿ ಮುಂದುವರಿಯುತ್ತಾ, ಹಣ ಸಂಪಾದನೆ ಮಾಡುವ ಧೈರ್ಯ ಮತ್ತು ಸಾಮರ್ಥ್ಯ ತೋರಿಸುವಿರಿ. ಉದ್ಯೋಗ ಹುಡುಕುತ್ತಿರುವವರಿಗೆ ಉತ್ತಮ ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ಬರುವ ಅವಕಾಶಗಳನ್ನು ತ್ಯಜಿಸದೇ, ಲಭ್ಯವಿರುವ ಆಯ್ಕೆಗಳಲ್ಲಿ ಸರಿಯಾದದ್ದನ್ನು ಆರಿಸಿಕೊಳ್ಳುವುದು ಒಳಿತು. ಉದ್ಯೋಗ ಸ್ಥಳಗಳಲ್ಲಿ ಹೊಸ ಬದಲಾವಣೆಗಳಿಗೆ ಮುಕ್ತ ಮನಸ್ಸಿನಿಂದ ಹೊಂದಿಕೊಳ್ಳುವುದರಿಂದ ನಿಮಗೆ ಹೆಚ್ಚಿನ ಲಾಭವಾಗುತ್ತದೆ. ಆದಾಯ ಉತ್ತಮವಾಗಿದ್ದರೂ, ಅಗತ್ಯಕ್ಕೆ ತಕ್ಕಂತೆ ಖರ್ಚು ಮಾಡುವುದು ಸೂಕ್ತ. ಮಕ್ಕಳ ಮೇಲಿನ ನಿಗಾ ಸ್ವಲ್ಪ ಹೆಚ್ಚಿಸುವುದು ಉತ್ತಮ. ಪತ್ನಿಯ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು. ವಿಧವಾ ಹಾಗೂ ವಿಚ್ಛೇದನಗೊಂಡವರಿಗೆ ಹೊಸ ಸಂಬಂಧಗಳು ಒದಗುವ ಸಾಧ್ಯತೆ ಇದೆ. ಕೆಲವು ಸರ್ಕಾರಿ ಕೆಲಸಗಳಲ್ಲಿ ಸ್ವಲ್ಪ ಹಿನ್ನಡೆ ಕಂಡರೂ, ಕಾರ್ಯಗಳು ನಿಲ್ಲುವುದಿಲ್ಲ. ಚಲನಚಿತ್ರ ನಿರ್ಮಾಪಕರಿಗೆ ಹೊಸ ಚಿತ್ರಕ್ಕಾಗಿ ಬಂಡವಾಳ ಹೂಡಿಕೆ ಮಾಡುವ ಯೋಚನೆ ಮೂಡಬಹುದು.
ಮೀನ ರಾಶಿ
ಈ ಅವಧಿಯಲ್ಲಿ ಇಲಾಖಾ ಪರೀಕ್ಷೆಗಳಲ್ಲಿ ತೆರ್ಗಡೆಯಾಗಿ ಉನ್ನತ ಸ್ಥಾನಮಾನ ಪಡೆಯುವ ಸಾಧ್ಯತೆ ಇದೆ. ಶಿಕ್ಷಕ ತರಬೇತಿ ಪಡೆದವರಿಗೆ ಸಿಹಿ ಸುದ್ದಿಗಳು ಲಭಿಸಬಹುದು. ಕಷ್ಟಪಟ್ಟು ಹೊಸ ಉದ್ಯಮ ಆರಂಭಿಸುವ ಯೋಚನೆ ಕಾರ್ಯರೂಪಕ್ಕೆ ಬರಬಹುದು. ಭೂಮಿ ವ್ಯವಹಾರಗಳಲ್ಲಿ ಚೇತರಿಕೆ ಕಂಡುಬಂದು ಉತ್ತಮ ಸಂಪಾದನೆ ಸಾಧ್ಯತೆ ಇದೆ. ಯಾರಾದರೂ ಹೇಳಿದರೆಂದು ಅಜಾಗರೂಕವಾಗಿ ಹಣವನ್ನು ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಡಿ. ಸೂಕ್ತ ಆಲೋಚನೆ ಮಾಡಿ ಸರಿಯಾದ ಸ್ಥಳದಲ್ಲಿ ಬಂಡವಾಳ ಹೂಡಿಕೆ ಮಾಡುವುದು ಒಳಿತು. ಸಜ್ಜನರ ಒಡನಾಟದಿಂದ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚುತ್ತದೆ. ಸರ್ಕಾರಿ ಉದ್ಯೋಗಕ್ಕಾಗಿ ಶ್ರಮಿಸುತ್ತಿರುವವರಿಗೆ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ. ಸಗಟು ದಿನಸಿ ವ್ಯಾಪಾರಿಗಳಿಗೆ ಆರ್ಥಿಕ ಪ್ರಗತಿ ಕಂಡುಬರುತ್ತದೆ. ಹಿರಿಯರ ಆಸ್ತಿಯಲ್ಲಿ ನಿಮಗೆ ಕೆಲವು ಪಾಲು ದೊರೆಯುವ ಯೋಗವಿದೆ. ಸಂಗಾತಿಯ ಮನಸ್ಥಿತಿಯಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬರುವುದರಿಂದ ಪತಿ-ಪತ್ನಿಗಳ ನಡುವೆ ವಿರಸ ಉಂಟಾಗುವ ಸಾಧ್ಯತೆ ಇದೆ. ತಾಳ್ಮೆಯಿಂದ ನಡೆದುಕೊಳ್ಳುವುದು ಉತ್ತಮ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಶುಕ್ರವಾರದ ರಾಶಿ ಭವಿಷ್ಯ – 10 ಏಪ್ರಿಲ್ 2026
ಮೇಷ ರಾಶಿ
ಮೇಷ ರಾಶಿಯವರೇ, ಇಂದು ನಿಮ್ಮ ದಿನ ಚುರುಕ... ಓದನ್ನು ಮುಂದುವರಿಸಿ
ಗುರುವಾರದ ರಾಶಿ ಭವಿಷ್ಯ – 09 ಏಪ್ರಿಲ್ 2026
ಮೇಷ ರಾಶಿ: ಸಂಗಾತಿಯ ಪ್ರೀತಿ ಮತ್ತು ಪ್ರೋತ್ಸಾಹದಿಂದ ನಿಮ್ಮಲ್ಲಿ... ಓದನ್ನು ಮುಂದುವರಿಸಿ
ಮಂಗಳವಾರದ ರಾಶಿ ಭವಿಷ್ಯ – 07 ಏಪ್ರಿಲ್ 2026
ಮೇಷ ರಾಶಿ
ಮೇಷ ರಾಶಿಯವರಿಗೆ ಇಂದು ಮಿಶ್ರ ಫಲಿತಾಂಶಗ... ಓದನ್ನು ಮುಂದುವರಿಸಿ
ಭಾನುವಾರದ ರಾಶಿ ಭವಿಷ್ಯ – 05 ಏಪ್ರಿಲ್ 2026
ಮೇಷ ರಾಶಿ
ಮೇಷ ರಾಶಿಯವರಿಗೆ ಈ ಅವಧಿಯಲ್ಲಿ ಭೂ ವ್ಯವ... ಓದನ್ನು ಮುಂದುವರಿಸಿ
ಶನಿವಾರದ ರಾಶಿ ಭವಿಷ್ಯ 04 ಏಪ್ರಿಲ್ 2026
ಮೇಷ ರಾಶಿ: ಮೇಷ ರಾಶಿಯವರಿಗೆ ಇಂದು ಕೆಲಸದ ಕ್ಷೇತ್ರದಲ್ಲಿ ಮಹತ್ವದ... ಓದನ್ನು ಮುಂದುವರಿಸಿ
ಶುಕ್ರವಾರದ ರಾಶಿ ಭವಿಷ್ಯ – 03 ಏಪ್ರಿಲ್ 2026
ಮೇಷ ರಾಶಿ ಭವಿಷ್ಯ: ಇಂದು ಮಠಾಧಿಪತಿಗಳಿಗೆ ಭಾಗ್ಯದ ಬಗ್ಗೆ ಚಿಂತೆ... ಓದನ್ನು ಮುಂದುವರಿಸಿ
ಗುರುವಾರದ ರಾಶಿ ಭವಿಷ್ಯ – 02 ಏಪ್ರಿಲ್ 2026
ಮೇಷ ರಾಶಿ ಭವಿಷ್ಯ: ಕಂಪನಿ ವತಿಯಿಂದ ವಿದೇಶ ಪ್ರವಾಸದ ಅವಕಾಶಗಳು ಲ... ಓದನ್ನು ಮುಂದುವರಿಸಿ
ಬುಧವಾರದ ರಾಶಿ ಭವಿಷ್ಯ – 01 ಏಪ್ರಿಲ್ 2026
ಮೇಷ ರಾಶಿ ಇಂದಿನ ಭವಿಷ್ಯ
ಅಡುಗೆ ಗುತ್ತಿಗೆದಾರರಿಗೆ ಇಂದು... ಓದನ್ನು ಮುಂದುವರಿಸಿ
ಮಂಗಳವಾರದ ರಾಶಿ ಭವಿಷ್ಯ – 31 ಮಾರ್ಚ್ 2026
ಮೇಷ ರಾಶಿ: ನಿಮ್ಮ ವ್ಯವಹಾರಗಳಲ್ಲಿ ಉಂಟಾಗುತ್ತಿರುವ ನಷ್ಟಕ್ಕೆ ಅಕ... ಓದನ್ನು ಮುಂದುವರಿಸಿ