ಬಿಗ್ ಬಾಸ್ ಕನ್ನಡ ಮಾಜಿ ಸ್ಪರ್ಧಿ ರಜತ್ ವಿರುದ್ಧ ಮತ್ತೊಂದು FIR: ಮಾನಹಾನಿ ಆರೋಪ

ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಮಾಜಿ ಸ್ಪರ್ಧಿ ರಜತ್ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಡಾಗ್ ಸತೀಶ್ ಅಲಿಯಾಸ್ ಸತೀಶ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ರಜತ್ ಮತ್ತು ಧನರಾಜ್ ವಿರುದ್ಧ ತನಿಖೆ ಆರಂಭವಾಗಿದೆ.

 

ಪೊಲೀಸರು ಭಾರತೀಯ ದಂಡ ಸಂಹಿತೆ ಸೆಕ್ಷನ್ 351 ಮತ್ತು 352ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೂರಿನಂತೆ, ಕಳೆದ ವರ್ಷದ ಡಿಸೆಂಬರ್ 12ರಂದು ರಜತ್ ಕರೆ ಮಾಡಿ, “ನಾವು ಯೂಟ್ಯೂಬ್ ಚಾನೆಲ್ ಆರಂಭಿಸುತ್ತಿದ್ದೇವೆ” ಎಂದು ತಿಳಿಸಿ ಸಂದರ್ಶನಕ್ಕೆ ಆಹ್ವಾನಿಸಿದ್ದರು. ಆದರೆ, ಚಾನೆಲ್‌ನಲ್ಲಿ ವಿಡಿಯೋ ಅಪ್ಲೋಡ್ ಮಾಡಿದಾಗ ಅವರ ಮಾತುಗಳನ್ನು ತಿರುಚಿ ತೋರಿಸಿ ಸಾರ್ವಜನಿಕವಾಗಿ ಅವಮಾನ ಮಾಡಿದ ಆರೋಪ ಸತೀಶ್ ಮೇಲೆ ತಳ್ಳಿದ್ದಾರೆ.

 

ವೀಡಿಯೋ ಚಿತ್ರೀಕರಣ ನಾಲ್ವರು, ಎರಡು ಕ್ಯಾಮೆರಾ ಮತ್ತು ಎರಡು ಮೊಬೈಲ್‌ಗಳಲ್ಲಿ ನಡೆದಿದ್ದು, ಸತೀಶ್ ಅವರ ದೂರಿನಲ್ಲಿ ವಿವರಿಸಲಾಗಿದೆ. ಅಲ್ಲದೆ ಫೆಬ್ರವರಿ 27 ರಂದು ರಾತ್ರಿ 10:30 ಕ್ಕೆ ರಜತ್ ಇನ್‌ಸ್ಟಾಗ್ರಾಮ್‌ನಲ್ಲಿ ಸಂದೇಶ ಹಂಚಿ ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಕೊಲೆ ಬೆದರಿಕೆ ನೀಡಿದ್ದಾರೆಯೆಂಬ ಆರೋಪವೂ ಇದೆ. ಮಧ್ಯರಾತ್ರಿಯಲ್ಲಿಯೂ ನಿರಂತರ ಬೆದರಿಕೆ ಕರೆಗಳು ಬಂದಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

 

ಸತೀಶ್ ದೂರಿನಲ್ಲಿ ಉಲ್ಲೇಖಿಸಿದಂತೆ, ರಜತ್ ಮತ್ತು ಧನರಾಜ್ ಉದ್ದೇಶಪೂರ್ವಕವಾಗಿ ಮಾನಹಾನಿ ಮಾಡುತ್ತಿದ್ದಾರೆಯೆಂದು ಹಾಗೂ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಚಾಮರಾಜಪೇಟೆ ಪೊಲೀಸ್ ಠಾಣೆ ಮುಂದಿನ ತನಿಖೆಯನ್ನು ಮುಂದುವರೆಸುತ್ತಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

13 hours ago

   
Image 1
Image 1

ಲಿಂಗಸುಗೂರು ಮಹಿಳೆ ಕೊಲೆ: ದೇವರಾಜಿಗೆ ಜೀವಾವಧಿ ಶಿಕ್ಷೆ

ರಾಯಚೂರು: ಮೃತ ಮಹಿಳೆ ವಿಜಯಲಕ್ಷ್ಮಿ, ಪತಿಯ ಮರಣದ ನಂತರ ಯರಡೋಣದಲ್... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಧಾರವಾಡ

ಲೋಕಾಯುಕ್ತ ದಾಳಿ : ರೊಟ್ಟಿ ಅಂಗಡಿ ಲೈಸೆನ್ಸ್‌ಗೆ ಲಂಚ ಬೇಡಿಕೆ: ಅಧಿಕಾರಿ ಬಂಧನ

ಧಾರವಾಡ: ರೊಟ್ಟಿ ಅಂಗಡಿ ಆರಂಭಿಸಲು ಲೈಸೆನ್ಸ್ ನೀಡುವ ವಿಚಾರದಲ್ಲಿ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ತುಮಕೂರು

ಹೃದಯಾಘಾತ ಸಾವುಗೆ ಭೀಕರ ಟ್ವಿಸ್ಟ್.. 3ನೇ ಮದುವೆ ಆಸೆಗೆ 2ನೇ ಗಂಡನ ಹತ್ಯೆ! ಪತ್ನಿಯ ಖತರ್ನಾಕ್ ಪ್ಲಾನ್

ತುಮಕೂರು: ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದ್ದ ವ್ಯಕ್ತಿಯ ಸಾವಿಗೆ ಇದೀ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1

ಕಡಿಮೆ ಬೆಲೆಗೆ ಚಿನ್ನ ಕೊಡುತ್ತೇವೆಂದು ನಂಬಿಸಿ 15 ಲಕ್ಷ ದೋಚಿದ ಗ್ಯಾಂಗ್: ಐವರು ಅರೆಸ್ಟ್

ದೇವನಹಳ್ಳಿ: ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ನಂಬಿಸಿ 15 ಲಕ್ಷ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1
ವಿಜಯಪುರ

ಸ್ವಂತ 5 ವರ್ಷದ ಮಗಳ ಮೇಲೆ ಅತ್ಯಾಚಾರ: ತಂದೆಗೆ 20 ವರ್ಷ ಜೈಲು ಶಿಕ್ಷೆ

ವಿಜಯಪುರ: ಐದು ವರ್ಷದ ಅಪ್ರಾಪ್ತ ಸ್ವಂತ ಮಗಳ ಮೇಲೆ ಅತ್ಯಾಚಾರ ಎಸಗ... ಓದನ್ನು ಮುಂದುವರಿಸಿ


Edited by: ಬಾನು

19 hours ago

   
Image 1
ಬೆಂಗಳೂರು ನಗರ

25 ಅಡಿ ಆಳ ಗುಂಡಿಗೆ ಬಿದ್ದ ಮಹಿಳೆ ಸುರಕ್ಷಿತ, ಹೊಯ್ಸಳ ಪೊಲೀಸ್ ತಂಡದ ಸಾಹಸ

ಬೆಂಗಳೂರು: ನಗರದಲ್ಲಿ ಸುಮಾರು 25 ಅಡಿ ಆಳ ಗುಂಡಿಗೆ ಬಿದ್ದ ಮಹಿಳೆ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ FIR – ಬೆದರಿಕೆ ಮತ್ತು ನಿಂದನೆ ಆರೋಪ

ಬೆಂಗಳೂರು: ನಗರದಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ಅಕ್ರಮ ವಿದೇಶಿಗರ ವಿರುದ್ಧ ಪೊಲೀಸ್ ದಾಳಿ: 200 ಮಂದಿ ಪತ್ತೆ

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ವಿದೇಶಿ ಪ್ರಜೆ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಕಲ್ಬುರ್ಗಿ

ಆಳಂದ್

ಹೋಳಿ ಹಬ್ಬದಲ್ಲಿ ಬುರ್ಖಾ ಧರಿಸಿ ಬಣ್ಣದಾಟ – ಐವರು ಯುವಕರು ಬಂಧನ

ಕಲಬುರಗಿ: ಜಿಲ್ಲೆಯ ಆಳಂದ ತಾಲ್ಲೂಕಿನ ನಿಂಬರ್ಗಾ ಗ್ರಾಮದಲ್ಲಿ ಹೋಳ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಉಡುಪಿ

ಕಾಲೇಜಿಗೆ ಹೋಗು ಎಂದ ತಂದೆಯ ಮಾತಿಗೆ ಮನನೊಂದು: 14 ದಿನಗಳ ಹೋರಾಟದ ಬಳಿಕ ಡಿಪ್ಲೋಮಾ ವಿದ್ಯಾರ್ಥಿ ಸಾವು

ಉಡುಪಿ: ಜಿಲ್ಲೆಯ ಕೊಲ್ಲೂರು ಸಮೀಪದ ಕೆರಾಡಿ ಗ್ರಾಮದ ಹಯ್ಯಂಗಾರುದಲ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1