ಭವಿಷ್ಯ ಹೇಳ್ತೀನಿ ಅಂತ ನಂಬಿಸಿ ಬೇಟೆನಾ? ರೀಲ್ಸ್ ರಾಣಿಯ ಆರೋಪ, ಕಮಲಾಕರ್ ಭಟ್ ವಿರುದ್ಧ ಆಡಿಯೋ ವೈರಲ್
ಶಿವಮೊಗ್ಗ: ನಿತ್ಯ ಬೆಳಗ್ಗೆ ಜನರಿಗೆ ಭವಿಷ್ಯ ಹೇಳುತ್ತಿದ್ದ ವ್ಯಕ್ತಿಯೊಬ್ಬನ ನಿಜ ಜೀವನದ ಕರ್ಮಕಾಂಡ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಜ್ಯೋತಿಷ್ಯ ಹೇಳುತ್ತಿದ್ದ ಕಮಲಾಕರ್ ಭಟ್ ಎಂಬ ವ್ಯಕ್ತಿ, ರೀಲ್ಸ್ ರಾಣಿ ಸುಚಿತ್ರಾ ಹಿಂದೆ ನಾಯಿ ತರ ಸುತ್ತಾಡಿದ್ದೆನೆಂದು ತಾನೇ ಒಪ್ಪಿಕೊಂಡಿರುವಂತೆ ಹೇಳಲಾಗುತ್ತಿರುವ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಆರೋಪಗಳನ್ನು ನಾವು ಹೇಳುತ್ತಿಲ್ಲ. ಸ್ವತಃ ಕಮಲಾಕರ್ ಭಟ್ ಮಾತನಾಡಿರುವುದಾಗಿ ಹೇಳಲಾಗುತ್ತಿರುವ ಆಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಆ ಆಡಿಯೋದಲ್ಲಿ, “ಇವಳೇ ನನ್ನ ಸರ್ವಸ್ವ. ಅವಳನ್ನು ಪಡೆಯಬೇಕು ಎನ್ನುವ ಉದ್ದೇಶದಿಂದ ಅವಳು ಏನು ಮಾಡಿದ್ರು ಕೂಡ ನಾಯಿ ತರ ಅವಳ ಹಿಂದೆ ಓಡಾಡಿದವನು ನಾನು” ಎಂದು ಹೇಳಿರುವುದು ಸ್ಪಷ್ಟವಾಗಿ ಕೇಳಿಸುತ್ತದೆ. ಇನ್ನೂ ಇದೇ ಆಡಿಯೋದಲ್ಲಿ, ನಾಲ್ಕು ತಿಂಗಳ ಪರಿಶ್ರಮದ ಬಳಿಕ ದೇವರು ಕೊಟ್ಟ ಫಲವೆಂದು ಸುಚಿತ್ರಾಳನ್ನು ಪಡೆದಂತೆ ಮಾತನಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಲ್ಲದೇ, ಅದೇ ಆಡಿಯೋದಲ್ಲಿ ರೀಲ್ಸ್ ರಾಣಿ ಸುಚಿತ್ರಾ, “ಅವನಿಗೆ ಹೆಂಡತಿಯೂ ನಾನೇ, ಲವರೂ ನಾನೇ” ಎಂದು ಹೇಳಿರುವ ಭಾಗವೂ ವೈರಲ್ ಆಗಿದೆ.
ಇದಾದ ಬಳಿಕ ಸುಚಿತ್ರಾ ತನ್ನ ಇನ್‌ಸ್ಟಾಗ್ರಾಂ ಬಯೋವನ್ನು “ನೊಂದ ಹೃದಯದ ಪ್ರೀತಿ, ಇನ್ಮೇಲೆ ಓನ್ಲಿ ಮನಿ ಮನಿ” ಎಂದು ಬದಲಾಯಿಸಿಕೊಂಡಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ. ಸುಚಿತ್ರಾ ಇನ್‌ಸ್ಟಾಗ್ರಾಂನಲ್ಲಿ ಎರಡು ಖಾತೆಗಳನ್ನು ಹೊಂದಿದ್ದಾಳೆ ಎನ್ನಲಾಗುತ್ತಿದ್ದು, ಪ್ರೀತಿಯ ಹೆಸರಿನಲ್ಲಿ ದುಡ್ಡು ಮಾಡುತ್ತಿದ್ದಳಾ? ಅಥವಾ ದುಡ್ಡಿಗಾಗಿ ಪ್ರೀತಿಯ ನಾಟಕವಾಡಿದಳಾ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಎದ್ದಿವೆ. ಭವಿಷ್ಯ ಹೇಳುತ್ತಿದ್ದ ವ್ಯಕ್ತಿಯೊಬ್ಬನ ವೈಯಕ್ತಿಕ ಆಡಿಯೋ ಈ ರೀತಿ ಬಹಿರಂಗವಾಗಿರುವುದು ಜ್ಯೋತಿಷ್ಯ ವೃತ್ತಿಯ ನೈತಿಕತೆ ಮೇಲೆಯೂ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಕಾಡು ಪ್ರಾಣಿಗಳ ಹಾವಳಿ ಹಸುಗಳಿಗೆ ಹಾನಿ – 2 ದಿನಗಳಲ್ಲಿ 11 ಗೋವುಗಳು ಮೃತ
ಚಾಮರಾಜನಗರ: ಕಾಡು ಪ್ರಾಣಿಗಳ ದಾಳಿಯಿಂದ ರೈತರಿಗೆ ಮತ್ತೊಂದು ಆಘಾತ... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ಕಾಶ್ಮೀರ ಮೂಲದ ಇಬ್ಬರು ವ್ಯಕ್ತಿಗಳು ಪತ್ತೆ?
ಹುಬ್ಬಳ್ಳಿ: ಕಾಶ್ಮೀರದಿಂದ ಬಂದಿರುವುದಾಗಿ ಹೇಳಿಕೊಂಡ ಇಬ್ಬರು ವ್ಯ... ಓದನ್ನು ಮುಂದುವರಿಸಿ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ: ಅಪರಾಧ ಅಂಕಿಅಂಶಗಳೊಂದಿಗೆ ಬಿಜೆಪಿ ಆರೋಪ ತಳ್ಳಿಹಾಕಿದ ಸಚಿವ ಪರಮೇಶ್ವರ್
ಬೆಂಗಳೂರು: ವಿಧಾನಸಭೆಯ ವಿಶೇಷ ಅಧಿವೇಶನದ ವೇಳೆ ಆಡಳಿತ ಪಕ್ಷ ಮತ್ತ... ಓದನ್ನು ಮುಂದುವರಿಸಿ
ಕೆ.ಆರ್.ನಗರ ಮಹಿಳೆ ಅಪಹರಣ ಪ್ರಕರಣ: ಹೆಚ್.ಡಿ.ರೇವಣ್ಣ ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್
ಬೆಂಗಳೂರು : ಕೆ.ಆರ್.ನಗರದ ಮಹಿಳೆ ಅಪಹರಣ ಪ್ರಕರಣದಲ್ಲಿ, ಮಾಜಿ ಸಚ... ಓದನ್ನು ಮುಂದುವರಿಸಿ
ಅಕ್ರಮ ಹಣ ವರ್ಗಾವಣೆ ಪ್ರಕರಣ: ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ ವೈದ್ಯಕೀಯ ಜಾಮೀನು ಮಂಜೂರು
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ ಜಾರಿ ನ... ಓದನ್ನು ಮುಂದುವರಿಸಿ
ರಬಕವಿ ಬನಹಟ್ಟಿ
ನ್ಯಾಯಾಲಯವೇ ಸಾಕ್ಷಿ: ಜಡ್ಜ್ ಎದುರೇ ವಿಷ ಸೇವಿಸಿದ ವ್ಯಕ್ತಿ
ಬಾಗಲಕೋಟೆ: ಕೋರ್ಟ್ ಆವರಣದಲ್ಲಿ, ನ್ಯಾಯಾಧೀಶರ ಎದುರಲ್ಲೇ ಒಬ್ಬ ವ... ಓದನ್ನು ಮುಂದುವರಿಸಿ
ಮಧುಗಿರಿ
“ಹಣವಿಲ್ಲ… ಮೂಲಂಗಿಯೇ ಲಂಚ!” – ತುಮಕೂರಿನಲ್ಲಿ ಕಂದಾಯ ಅಧಿಕಾರಿಗಳ ವಿರುದ್ಧ ರೈತನ ಆಕ್ರೋಶ
ತುಮಕೂರು: ತುಮಕೂರಿನಲ್ಲಿ ಕೆಲ ಕಂದಾಯ (Revenue) ಅಧಿಕಾರಿಗಳು ಲಂ... ಓದನ್ನು ಮುಂದುವರಿಸಿ
ಗಂಡನ ಅಕ್ರಮ ಸಂಬಂಧ ಪ್ರಕರಣ – ಪತ್ನಿ ಗೃಹ ಬಂಧನದಲ್ಲಿದ್ದು ಪತಿ ಎಸ್ಕೇಪ್
ಹಾಸನ : ಹಾಸನದ ಕೆ.ಆರ್.ಪುರಂ ಬಡಾವಣೆಯಲ್ಲಿ ಗಂಡ–ಹೆಂಡತಿಯ ನಡುವೆ... ಓದನ್ನು ಮುಂದುವರಿಸಿ
"ಮೈಸೂರಿನಲ್ಲಿ ಅಂತರ್ಜಾತಿ ಮದುವೆ ವಿರೋಧದ ಸಂಚಲನ : ಕುಟುಂಬ ಬಾಹಿಷ್ಕಾರ, ಎಲೆಕ್ಟ್ರಿಷಿಯನ್ ಮೇಲೆ ಕೇಸ್"
ಮೈಸೂರು : ಇಡೀ ಜಗತ್ತು ಆಧುನಿಕತೆಯತ್ತ ಸಾಗುತ್ತಿದ್ದರೂ, ಭಾರತದಲ್... ಓದನ್ನು ಮುಂದುವರಿಸಿ
"ಮಕ್ಕಳ ಮೊಟ್ಟೆ ಅನುದಾನ ಬಿಡುಗಡೆಗೆ ಲಂಚ: ಅಂಗನವಾಡಿ ಶಿಕ್ಷಕಿ-ಸಿಬ್ಬಂದಿ ಲೋಕಾಯುಕ್ತ ಬಲೆಗೆ"
ಕಲಬುರಗಿ : ಬಡ ಮಕ್ಕಳ ಪೌಷ್ಟಿಕಾಹಾರದ ಮೊಟ್ಟೆಗೆ ಅನುದಾನ ಬಿಡುಗಡೆ... ಓದನ್ನು ಮುಂದುವರಿಸಿ