ಬೆಂಗಳೂರಿನಲ್ಲಿ ಕನ್ನಡ ಉಳಿದರೆ, ಕರ್ನಾಟಕದಲ್ಲಿ ಕನ್ನಡ ಉಳಿಯುತ್ತದೆ – ಎಂ. ಪ್ರಕಾಶ ಮೂರ್ತಿ
ಕೆ.ಆರ್.ಪುರ : ಬೆಂಗಳೂರು ನಗರದಲ್ಲಿ ಕನ್ನಡ ಉಳಿದರೆ ಮಾತ್ರ ಕರ್ನಾಟಕದಲ್ಲಿ ಕನ್ನಡ ಉಳಿಯುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಪ್ರಕಾಶ ಮೂರ್ತಿ ಹೇಳಿದರು. ಅವರು ಮಹದೇವಪುರ ಕ್ಷೇತ್ರದ ರಾಮಗೊಂಡನಹಳ್ಳಿ ಸರ್ಕಾರಿ ಶಾಲಾ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕ್ಷೇತ್ರ ಘಟಕದ ವತಿಯಿಂದ ಆಯೋಜಿಸಿದ್ದ ಕನ್ನಡ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ವಲಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹಳ್ಳಿಗಳು ನಗರೀಕರಣವಾಗುತ್ತಿರುವ ಈ ಸಂದರ್ಭದಲ್ಲಿ ಸ್ಥಳೀಯ ಕನ್ನಡಿಗರು ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಕಾಪಾಡಿಕೊಳ್ಳುವ ದೀಕ್ಷೆ ತೊಡುವುದು ಅತ್ಯವಶ್ಯಕವಾಗಿದೆ ಎಂದು ಹೇಳಿದರು. ಕಸಾಪ ಮಹದೇವಪುರ ಕ್ಷೇತ್ರ ಘಟಕದ ಅಧ್ಯಕ್ಷ ಟಿ. ವೀರಭದ್ರಪ್ಪ ಮಾತನಾಡಿ, ವಲಸಿಗರು ಮತ್ತು ಹೊರ ರಾಜ್ಯದವರ ಸಂಖ್ಯೆ ವಿಪರೀತವಾಗಿ ಹೆಚ್ಚಾಗಿದೆ. ಇದೇ ರೀತಿ ಮುಂದುವರಿದರೆ, ಸ್ಥಳೀಯರು ಮೂಲಭೂತ ಅಗತ್ಯತೆಗಳಿಗೂ ಪರದಾಡುವ ಪರಿಸ್ಥಿತಿ ಬರಬಹುದು. ಅದಕ್ಕಿಂತ ಮುನ್ನ ಕನ್ನಡಾಭಿಮಾನದೊಂದಿಗೆ ಎಲ್ಲರೂ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.
ಕ್ಷೇತ್ರ ಘಟಕದ ಕಾರ್ಯದರ್ಶಿ ಕನ್ನಡದ ಭಕ್ತ ಕಿರಣ್, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಗಳನ್ನು ಸ್ಮರಿಸಿದರು. ಹನುಮಂತ ಟಿ. ಶೆಟ್ಟಿ ಹಾಗೂ ಕುಮಾರವ್ಯಾಸ ಭಾರತದ ಗಮಕಗಳನ್ನು ಪ್ರಸ್ತುತಪಡಿಸಿದರು. ವಿಚಾರಗೋಷ್ಠಿಯಲ್ಲಿ ಕವಯಿತ್ರಿ ಪ್ರೊ. ಸುಜಾತ ಸತ್ಯನಾರಾಯಣ, ಲೇಖಕ ಅಶೋಕ್ ತಿಪ್ಪಾ, ಅಧ್ಯಕ್ಷತೆ ವಹಿಸಿದ್ದ ಸಾಹಿತಿ ವಿನೋದ್ ಕುಮಾರ್, ಬಿ. ಶೃಂಗೇಶ್ವರ ಉಪಸ್ಥಿತರಿದ್ದರು. ಕವಿಗೋಷ್ಠಿಯಲ್ಲಿ ಡಾ. ರವೀಂದ್ರ, ಆರ್.ಎಸ್. ಅರುಣ್ ಕುಮಾರ್ ಪುಷ್ಪದಂತ, ಶ್ರೀಮತಿ ಮಾಲತಿ ಆರಾಧ್ಯ, ಮಂಜೇಶ್ವರ ಸಂಗಮೇಶ್ವರದ, ಆರ್. ಕಿರಣ್ ಕುಮಾರ್ ಯಾದವ್, ಸೂರ್ಯಕುಮಾರ್, ಪ್ರಕಾಶ್, ಶ್ರೀರಾಮ್, ಎಂ. ಉಪೇಂದ್ರ ಕುಮಾರ್ ಸೇರಿದಂತೆ ಹಲವರು ಕವನ ವಾಚನ ಮಾಡಿದರು.
ಇದೇ ವೇಳೆ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಸಂವಿಧಾನದ ಆಶಯದ ಗೀತೆಗಳು, ನೃತ್ಯ, ಜಾನಪದ, ಕನ್ನಡ ನಾಡು–ನುಡಿ ಅಭಿಮಾನ ತುಂಬುವ ಗೀತಗಾಯನ ಹಾಗೂ ನೃತ್ಯಗಳನ್ನು ಪ್ರಸ್ತುತಪಡಿಸಿ ಗಮನಸೆಳೆದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ರಾಮ್.ಕೆ. ಹನುಮಂತಯ್ಯ, ಕನ್ನಡ ಕಾಯಕ ಜೀವಿ ಚಂದ್ರಶೇಖರ ಮೂರ್ತಿ ಎಸ್.ಪಿ, ಇತಿಹಾಸ ತಜ್ಞ ಡಾ. ಸಿ. ಚಂದ್ರಪ್ಪ, ಕಸಾಪ ಕುವೆಂಪುನಗರ ಕ್ಷೇತ್ರ ಘಟಕದ ಅಧ್ಯಕ್ಷ ಹನುಮಂತ ಪಿ. ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಡಿಕೆಶಿಗೆ ಸಿಎಂ ಸ್ಥಾನ ಕಲ್ಪಿಸಬೇಕು: ಶಾಸಕ ಇಕ್ಬಾಲ್ ಹುಸೇನ್ ಒತ್ತಾಯ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ ಡಿ... ಓದನ್ನು ಮುಂದುವರಿಸಿ
ದೇವನಹಳ್ಳಿ
ಕೆಂಪೇಗೌಡ ವಿಮಾನ ನಿಲ್ದಾಣದ ವ್ಯಾಪ್ತಿಗೆ ಏರ್ ಬಲೂನ್ ಪ್ರವೇಶ; ಪ್ರಕರಣ ದಾಖಲು
ದೇವನಹಳ್ಳಿ: ಹೊಸಕೋಟೆ ಪ್ರದೇಶದಲ್ಲಿ ಹಾರಾಟ ನಡೆಸುತ್ತಿದ್ದ... ಓದನ್ನು ಮುಂದುವರಿಸಿ
ಗುಡಿಬಂಡಾ
ಗುಡಿಬಂಡೆ ಪ್ರವಾಸಿ ಮಂದಿರದಲ್ಲಿ ಬಲಗೈ ಜಾತಿಗಳ ಒಕ್ಕೂಟ ನಾಮಕರಣ – ಪದಾಧಿಕಾರಿಗಳ ಆಯ್ಕೆ.
ಗುಡಿಬಂಡೆ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ಬಲಗೈ ಜಾತಿಗಳ ಒ... ಓದನ್ನು ಮುಂದುವರಿಸಿ
ಚಾಮುಂಡೇಶ್ವರಿ ಜೆಡಿಎಸ್ ಶಾಸಕರ ಜಿ.ಟಿ. ದೇವೇಗೌಡಿಗೆ ಪಕ್ಷದ ಬಾಗಿಲು ಬಂದ್ – ಎಚ್.ಡಿ. ಕುಮಾರಸ್ವಾಮಿ
ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.... ಓದನ್ನು ಮುಂದುವರಿಸಿ
ಮೈಸೂರಿನ ಮೃಗಾಲಯದಲ್ಲಿ ದುಃಖ: 10 ವರ್ಷದ ಜೀಬ್ರಾ ‘ಪ್ರಾಚಿ’ ನಿಧನ
ಮೈಸೂರು: ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ 10 ವರ್ಷದ ಹ... ಓದನ್ನು ಮುಂದುವರಿಸಿ
ದೊಡ್ಡಬಳ್ಳಾಪುರ ತಾಲೂಕು
ಮೆಟ್ರೋ ದರ ಏರಿಕೆ – ಡಿಕೆ ಸುರೇಶ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ: ಮೆಟ್ರೋ ದರ ಏರಿಕೆ ವಿಚಾರದಲ್ಲ... ಓದನ್ನು ಮುಂದುವರಿಸಿ
ಹಕ್ಕಿ ಜ್ವರ ಭೀತಿ – ಕರ್ನಾಟಕದಲ್ಲಿ ಎಚ್ಚರಿಕೆ ಘೋಷಣೆ
ಬೆಂಗಳೂರು: ಹತ್ತಿರದ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ತಮಿಳ... ಓದನ್ನು ಮುಂದುವರಿಸಿ
ಕರಾವಳಿ, ಉತ್ತರ–ದಕ್ಷಿಣ ಒಳನಾಡಿನಲ್ಲಿ ಒಣಹವೆ ಮುಂದುವರಿಕೆ – ತೀವ್ರ ಚಳಿ ಎಚ್ಚರಿಕೆ
ಬೆಂಗಳೂರು: ರಾಜ್ಯದ ಕರಾವಳಿ ಹಾಗೂ ಉತ್ತರ ಒಳನಾಡು ಭಾಗಗಳಲ್... ಓದನ್ನು ಮುಂದುವರಿಸಿ
ವಿಜಯನಗರದಲ್ಲಿ ಬಿಎಂಟಿಸಿ ಬಸ್ ಅಪಘಾತ – ಬ್ರೇಕ್ ಫೇಲ್‌ನಿಂದ ಆಟೋ, ಬೈಕ್‌ಗೆ ಡಿಕ್ಕಿ
ಬೆಂಗಳೂರು: ನಗರದಲ್ಲಿ ಮತ್ತೊಂದು ಬಿಎಂಟಿಸಿ ಬಸ್ ಅಪಘಾತ ಸಂ... ಓದನ್ನು ಮುಂದುವರಿಸಿ
ಅಪ್ರಾಪ್ತೆಗೆ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ – ಅಪರಾಧಿಗಳಿಗೆ ಗಲ್ಲು ಶಿಕ್ಷೆ ದೃಢೀಕರಿಸಿದ ಹೈಕೋರ್ಟ್
ಬೆಂಗಳೂರು: ಅಪ್ರಾಪ್ತ ಬಾಲಕಿಗೆ ಸಾಮೂಹಿಕ ಅತ್ಯಾಚಾರ ಎಸಗಿ... ಓದನ್ನು ಮುಂದುವರಿಸಿ