ಸೋಮವಾರದ ರಾಶಿ ಭವಿಷ್ಯ 02 ಮಾರ್ಚ್ 2026

ಮೇಷ ರಾಶಿ ಭವಿಷ್ಯ: ಅವಕಾಶಗಳ ಜೊತೆಗೆ ಎಚ್ಚರಿಕೆಯ ದಿನ

ಮೇಷ ರಾಶಿಯವರಿಗೆ ಇಂದು ಮಿಶ್ರ ಫಲಗಳ ದಿನ. ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಕೆಲವು ಉತ್ತಮ ಬೆಳವಣಿಗೆಗಳು ಕಾಣಿಸಿಕೊಂಡರೂ, ಎಚ್ಚರಿಕೆ ಮತ್ತು ತಾಳ್ಮೆ ಅತ್ಯಗತ್ಯವಾಗಿದೆ.ಈ ರಾಶಿಯವರ ಜೊತೆ ಮದುವೆಯಾದರೆ ದೀರ್ಘಕಾಲದ ಸೌಹಾರ್ದ ಜೀವನ ನಡೆಸುವ ಸಾಧ್ಯತೆ ಇದೆ. ಆದರೆ ಇಂದಿನ ದಿನ ದಾಂಪತ್ಯದಲ್ಲಿ ವಿರಸ ಉಂಟಾಗುವ ಸಾಧ್ಯತೆ ಇದೆ. ಮಾತೃವಿನೊಂದಿಗೆ ಕಲಹ ಸಂಭವಿಸಬಹುದು. ಸಂಬಂಧಿಗಳಿಂದ ಕುತಂತ್ರ ನಡೆಯುವ ಸೂಚನೆಗಳಿದ್ದು, ಕುಟುಂಬದಲ್ಲಿ ಅನರ್ಥ ಸಂಭವಿಸುವ ಭೀತಿ ಇದೆ. ಮಕ್ಕಳಿಂದ ಉತ್ತಮ ಸಲಹೆ ದೊರೆಯಬಹುದು. ಸಂಸ್ಥೆಯ ಪ್ರಮುಖ ಜವಾಬ್ದಾರಿ ನಿಮ್ಮ ಮೇಲೆ ಬರಬಹುದು. ಹಿರಿಯ ಅಧಿಕಾರಿಗಳಿಂದ ಪ್ರೋತ್ಸಾಹ ಸಿಗಲಿದ್ದು, ಉದ್ಯೋಗದಲ್ಲಿ ಪ್ರಗತಿ ಸಾಧಿಸುವ ಸಮಯ ಬಂದಿದೆ. ಇಚ್ಚಿತ ಸ್ಥಾನಕ್ಕೆ ಉದ್ಯೋಗ ಬದಲಾವಣೆ ಅಥವಾ ಬಡ್ತಿ ಯೋಗ ಇದೆ. ಆದರೆ ಉದ್ಯೋಗದಲ್ಲಿ ಸಮಸ್ಯೆಯಿಂದಾಗಿ ಕೆಲಸ ಬಿಟ್ಟುಬಿಡುವ ಪರಿಸ್ಥಿತಿಯೂ ಎದುರಾಗಬಹುದು. ಸಹೋದ್ಯೋಗಿಗಳೊಂದಿಗೆ ಕಲಹ ಉಂಟಾಗುವ ಸಾಧ್ಯತೆ ಇರುವುದರಿಂದ ಜಾಗ್ರತೆ ವಹಿಸಿ. ಕೃಷಿಯಲ್ಲಿ ಲಾಭದ ಸೂಚನೆಗಳಿವೆ. ಸ್ತ್ರೀಯರಿಗೆ ಇಷ್ಟಾರ್ಥ ಸಿದ್ಧಿ ಸಾಧ್ಯ. ಋಣಬಾಧೆಯಿಂದ ಮುಕ್ತಿ ದೊರೆಯಬಹುದು. ಆಕಸ್ಮಿಕ ಧನಲಾಭ ಸಾಧ್ಯತೆ ಇದ್ದು, ಜೂಜಾಟದಿಂದ ಲಾಭ ಪಡೆಯುವ ಸಾಧ್ಯತೆ ಇದೆ. ಆದರೆ ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ. ಅಧಿಕ ಖರ್ಚು ಕಂಡುಬರಬಹುದು. ಆರೋಗ್ಯದಲ್ಲಿ ಏರುಪೇರು ಕಂಡುಬರಬಹುದು. ಶೀತ ಸಂಬಂಧಿತ ರೋಗ ಬಾಧೆ ಸಾಧ್ಯ. ವಾಹನ ಚಾಲನೆಯಲ್ಲಿ ಎಚ್ಚರಿಕೆ ಅಗತ್ಯ, ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಮಾನಸಿಕ ವೇದನೆ ಕಡಿಮೆಯಾಗುವ ಲಕ್ಷಣಗಳಿದ್ದರೂ, ಚಂಚಲ ಮನಸ್ಸು ಮತ್ತು ಆಲಸ್ಯ ಕಾಡಬಹುದು. ಅನ್ಯಜನರಲ್ಲಿ ದ್ವೇಷ ಭಾವನೆ ಉಂಟಾಗಬಹುದು. ಮಾತಿನ ಮೇಲೆ ನಿಗಾವಿರಲಿ. ವಾದ-ವಿವಾದಗಳಲ್ಲಿ ಭಾಗಿಯಾಗುವಾಗ ತಾಳ್ಮೆ ಕಾಪಾಡಿ. ಹೊಸ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆ ಇದ್ದು, ಪ್ರತಿಯೊಂದು ನಿರ್ಧಾರವನ್ನು ಆಲೋಚಿಸಿ ತೆಗೆದುಕೊಳ್ಳುವುದು ಒಳಿತು.

 

ವೃಷಭ ರಾಶಿ ಭವಿಷ್ಯ: ಜಾಗ್ರತೆ ಮತ್ತು ಸ್ಥಿರತೆಯ ಅವಶ್ಯಕತೆ

ವೃಷಭ ರಾಶಿಯವರಿಗೆ ಇಂದು ಮಿಶ್ರ ಫಲಗಳ ದಿನ. ವ್ಯವಹಾರ, ಉದ್ಯೋಗ ಹಾಗೂ ವೈಯಕ್ತಿಕ ಜೀವನದಲ್ಲಿ ಕೆಲವು ಪ್ರಮುಖ ಬೆಳವಣಿಗೆಗಳು ಕಂಡುಬರುವ ಸೂಚನೆಗಳಿವೆ. ಆದರೆ ತುರ್ತು ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಯೋಚನೆ ಅಗತ್ಯ. ನಿಮ್ಮ ಬಿಸಿನೆಸ್ ಸ್ಥಳಾಂತರಕ್ಕೆ ಯೋಚಿಸುತ್ತಿದ್ದರೆ, ಸದ್ಯಕ್ಕೆ ಅದನ್ನು ಮುಂದೂಡುವುದು ಒಳಿತು. ಸಂಸ್ಥೆಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರೆ, ಗ್ರಾಹಕರು ಮುಂದೆ ಬರುವ ಸಾಧ್ಯತೆ ಇದೆ. ಸಾಲಬಾಧೆ ಇದ್ದರೂ ನಿಧಾನವಾಗಿ ಪ್ರಗತಿ ಕಾಣಬಹುದು. ಆದರೆ ಸಾಲಗಾರರಿಂದ ಕಿರಿಕಿರಿ ಎದುರಾಗುವ ಸಾಧ್ಯತೆ ಇದೆ. ಕೆಲಸ ಕಾರ್ಯಗಳನ್ನು ಅತ್ಯಂತ ಜಾಗ್ರತೆಯಿಂದ ನಡೆಸಿಕೊಳ್ಳಿ; ಭಾವೋದ್ರೇಕದ ನಿರ್ಧಾರಗಳಿಂದ ದೂರವಿರಿ.
ಪ್ರಿಂಟಿಂಗ್ ಮತ್ತು ಸ್ಟೇಷನರಿ ಉದ್ಯೋಗಿಗಳಿಗೆ ನಷ್ಟದ ಭೀತಿ ಇರುವುದರಿಂದ ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ. ಕೆಲಸಕ್ಕೆ ಮರು ನೇಮಕಾತಿ ಸಾಧ್ಯತೆ ಇದೆ. ಸ್ನೇಹಿತರ ಸಹಾಯದಿಂದ ಉದ್ಯೋಗ ಭಾಗ್ಯ ಒಲಿಯಬಹುದು. ಪರಿಸ್ಥಿತಿಗೆ ತಕ್ಕಂತೆ ನಡೆದುಕೊಳ್ಳುವುದು ಮುಖ್ಯ. ಹಿರಿಯರಿಗೆ ಗೌರವ ಹಾಗೂ ಮನ್ನಣೆ ಸಿಗಲಿದೆ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಹೆಚ್ಚು ಗಮನ ಹರಿಸುವುದು ಉತ್ತಮ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ಶಾಂತಿ ಮತ್ತು ಸಮಾಧಾನ ದೊರೆಯುತ್ತದೆ. ಮನೆಯಲ್ಲಿ ಶುಭಕಾರ್ಯ ಸಂಭವಿಸುವ ಯೋಗವಿದ್ದು, ಪೂರ್ವ ತಯಾರಿ ಮಾಡಿಕೊಳ್ಳುವುದು ಉತ್ತಮ. ಕುಟುಂಬದ ಸಂಪೂರ್ಣ ಸಹಕಾರ ನಿಮ್ಮೊಂದಿಗೆ ಇರುತ್ತದೆ.
ಪ್ರೇಮಿಗಳಿಗೆ ಪುನರ್ಮಿಲನದ ಆಸೆ ಮೂಡಬಹುದು. ಆದರೆ ಹಿರಿಯರಿಂದ ವಿರೋಧ ಎದುರಾಗುವ ಸಾಧ್ಯತೆ ಇರುವುದರಿಂದ ಸಂಯಮ ಅಗತ್ಯ. ಜಾಗ್ರತೆ, ಶಾಂತಿ ಮತ್ತು ತಾಳ್ಮೆ ನಿಮ್ಮ ಪ್ರಮುಖ ಶಕ್ತಿಗಳು. ಭಾವನಾತ್ಮಕವಾಗಿ ಅಲ್ಲ, ಯುಕ್ತಿಯುತವಾಗಿ ನಡೆದುಕೊಂಡರೆ ದಿನ ಉತ್ತಮವಾಗಿ ಸಾಗುತ್ತದೆ.

 

ಮಿಥುನ ರಾಶಿ ಫಲಿತಾಂಶ: ಸಂಧಾನ, ಹಣಕಾಸು ಮತ್ತು ಕುಟುಂಬ ವಿಚಾರಗಳಲ್ಲಿ ಎಚ್ಚರಿಕೆ

ಮಿಥುನ ರಾಶಿಯವರಿಗೆ ಹಳೆಯ ಜಗಳಗಳು ಅಂತ್ಯಗೊಳ್ಳುವ ಸಮಯ ಬಂದಿದೆ. ಸಂಧಾನದ ಮೂಲಕ ಸಮಸ್ಯೆಗಳು ಪರಿಹಾರವಾಗಿ ಉತ್ತಮ ಫಲಿತಾಂಶ ನೀಡುವ ಸಾಧ್ಯತೆ ಇದೆ. ಪಾರ್ಟ್ ಟೈಮ್ ಕೆಲಸ ಹುಡುಕುತ್ತಿರುವವರಿಗೆ ಉದ್ಯೋಗ ಅವಕಾಶ ದೊರೆಯಲಿದೆ. ಹಣಕಾಸು ಸಂಬಂಧಿತ ವಿಷಯಗಳಲ್ಲಿ ಚಿಂತೆಯು ಹೆಚ್ಚಾಗಬಹುದು. ಸಂಬಂಧಿಕರ ಬಳಿ ಧನ ಸಹಾಯ ಕೇಳುವುದನ್ನು ತಪ್ಪಿಸುವುದು ಒಳಿತು. ನಿಮ್ಮ ಉದಾರ ಮನೋಭಾವದಿಂದ ಅನಗತ್ಯ ಸಮಸ್ಯೆಗಳನ್ನು ತಂದುಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಹಣಕಾಸು ವ್ಯವಹಾರಗಳಲ್ಲಿ ಜಾಗ್ರತೆ ಅಗತ್ಯ. ಲಕ್ಷ್ಮೀ ಕೃಪೆಯಿಂದ ಧನಾಗಮನ ಉತ್ತಮವಾಗಿರುತ್ತದೆ. ವಿವಿಧ ಮೂಲಗಳಿಂದ ಆದಾಯ ಬರುತ್ತದೆ. ಪತ್ನಿ ಸಂಬಂಧ ಕಡೆಯಿಂದ ಆಸ್ತಿ ಅಥವಾ ಧನ ಲಾಭ ಸಾಧ್ಯತೆ ಇದೆ. ದೀರ್ಘಕಾಲದಿಂದ ಬಳಲುತ್ತಿದ್ದ ವ್ಯಾಧಿಗಳಿಗೆ ನಿವಾರಣೆ ದೊರೆಯಬಹುದು. ಆದರೆ ಶತ್ರುಗಳ ಒಳಸಂಚುಗಳ ಬಗ್ಗೆ ಎಚ್ಚರಿಕೆ ಇರಲಿ. ವಿದ್ಯಾರ್ಥಿಗಳು ಹೆಚ್ಚಿನ ಪ್ರಯತ್ನ ಮತ್ತು ಶ್ರಮದಿಂದಲೇ ಅಭ್ಯಾಸದಲ್ಲಿ ಮುಂದುವರಿಯಬೇಕು. ಸುಲಭ ಮಾರ್ಗ ನಿರೀಕ್ಷಿಸಬೇಡಿ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಗೊಂದಲ ಉಂಟಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಅನಿರೀಕ್ಷಿತವಾಗಿ ಮಧ್ಯಸ್ಥಿಕೆ ಮಾಡುವವರಿಂದ ಸಮಸ್ಯೆಗಳು ಸೃಷ್ಟಿಯಾಗಬಹುದು. ಅಳಿಯನ ನಡವಳಿಕೆಯಿಂದ ಬೇಸರ ಉಂಟಾಗಬಹುದು. ಮಗನ ಭವಿಷ್ಯದ ಬಗ್ಗೆ ಚಿಂತನೆ ಹೆಚ್ಚಾಗುತ್ತದೆ. ಮಗಳ ಮದುವೆ ವಿಚಾರ ಚರ್ಚೆಗೆ ಬರಬಹುದು. ಪ್ರಯತ್ನಕ್ಕೆ ತಕ್ಕಂತೆ ಫಲ ಸಿಗುವಲ್ಲಿ ವಿಳಂಬ ಕಂಡುಬರಬಹುದು. ಪ್ರೇಮ ಸಂಬಂಧಗಳಲ್ಲಿ ಮೊದಲಿನಷ್ಟು ಉತ್ಸಾಹ, ಪ್ರೀತಿ ಮತ್ತು ವ್ಯಾಮೋಹ ಕಡಿಮೆಯಾಗುವ ಸಾಧ್ಯತೆ ಇದೆ. ಸಹನೆ ಮತ್ತು ವಿವೇಕದಿಂದ ನಡೆದುಕೊಂಡರೆ ಸಂಕಷ್ಟಗಳನ್ನು ಸಮರ್ಥವಾಗಿ ಎದುರಿಸಬಹುದು.

 

 

ಕಟಕ ರಾಶಿ ವಾರಫಲ – ಕುಟುಂಬ, ವ್ಯಾಪಾರ ಮತ್ತು ಸಂಬಂಧಗಳಲ್ಲಿ ಎಚ್ಚರಿಕೆ ಅಗತ್ಯ

ಕಟಕ ರಾಶಿಯವರ ಜೀವನದಲ್ಲಿ ಈ ಅವಧಿ ಮಿಶ್ರ ಫಲಿತಾಂಶಗಳನ್ನು ತರುತ್ತಿದೆ. ದಂಪತಿಗಳ ನಡುವೆ ಅನಾವಶ್ಯಕ ಹತಾಶೆ ಮತ್ತು ಕೆಟ್ಟ ಆಲೋಚನೆಗಳು ಮೂಡಬಹುದು. ಪರಸ್ಪರ ಸಂಭಾಷಣೆ ಕೊರತೆಯಿಂದ ಮನಸ್ತಾಪ ಹೆಚ್ಚಾಗುವ ಸಾಧ್ಯತೆ ಇದೆ. ಸಹನೆಯಿಂದ ಸಮಸ್ಯೆಗಳನ್ನು ಪರಿಹರಿಸುವುದು ಅಗತ್ಯ. ಉದ್ಯೋಗ ಕ್ಷೇತ್ರದಲ್ಲಿ ಪಾರ್ಟ್ ಟೈಮ್ ಕೆಲಸದ ಅವಕಾಶಗಳು ಲಭ್ಯವಾಗುವ ಸೂಚನೆಗಳಿವೆ. ಆದರೆ ಕೈಹಿಡಿದ ಕೆಲಸಗಳಲ್ಲಿ ಮರುಮರು ನಷ್ಟ ಅನುಭವಿಸಬಹುದಾದ ಸಾಧ್ಯತೆ ಇದೆ. ವಿಶೇಷವಾಗಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ನಿರೀಕ್ಷಿತ ಯಶಸ್ಸು ದೊರೆಯದಿರಬಹುದು. ವ್ಯಾಪಾರ ಮತ್ತು ಉದ್ಯಮದಲ್ಲಿ ನಿಧಾನವಾಗಿ ಚೇತರಿಕೆ ಕಾಣಿಸಿಕೊಳ್ಳುವ ಲಕ್ಷಣಗಳಿದ್ದರೂ, ಬಹಳ ಎಚ್ಚರಿಕೆಯಿಂದ ಮುಂದುವರಿಯಬೇಕು. ಪರಸ್ತ್ರೀ ಮೋಹ ಅಥವಾ ಅತಿಯಾದ ಆಕರ್ಷಣೆಗಳಿಂದ ಕುಟುಂಬ ಜೀವನದಲ್ಲಿ ಗೊಂದಲ ಉಂಟಾಗಬಹುದು. ದುಷ್ಟ ಜನರ ಸಹವಾಸದಿಂದ ಮಕ್ಕಳಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಮಕ್ಕಳ ಸ್ವಭಾವದ ಬಗ್ಗೆ ಅನುಮಾನಗಳು ಕಾಡಬಹುದು. ವಿಚ್ಛೇದಿತ ಮಕ್ಕಳ ಮರುಮದುವೆ ಕುರಿತ ಚಿಂತನೆಗಳು ಕುಟುಂಬದಲ್ಲಿ ಚರ್ಚೆಯಾಗಬಹುದು. ಮಿತ್ರರು ಶತ್ರುಗಳಾಗಿ ವರ್ತಿಸುವ ಸಂದರ್ಭಗಳು ಎದುರಾಗಬಹುದು. ಕೈಕೆಳಗಿನ ಕೆಲಸಗಾರರಿಂದ ತೊಂದರೆ ಅನುಭವಿಸಬಹುದು. ಕಚೇರಿಯಲ್ಲಿ ಕಳೆದುಹೋಗಿರುವ ಫೈಲ್ ಅಥವಾ ದಾಖಲೆಗಳಿಂದ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಅಗತ್ಯ. ಆರೋಗ್ಯ ಸಂಬಂಧಿತ ಖರ್ಚುಗಳು ಹೆಚ್ಚಾಗಬಹುದು. ಪ್ರೀತಿ, ಪ್ರೇಮ ಮತ್ತು ಸರಸ-ಸಲ್ಲಾಪಗಳಲ್ಲಿ ಅಸಮಜ್ಜತೆ ಉಂಟಾಗಿ ಮನಸ್ತಾಪ ಎದುರಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಪ್ರತಿಯೊಂದು ವಿಷಯದಲ್ಲೂ ತಾಳ್ಮೆ ಮತ್ತು ಸಮಾಧಾನದಿಂದ ಮುಂದುವರಿಯುವುದು ಮುಖ್ಯ. ತುರ್ತು ನಿರ್ಧಾರಗಳನ್ನು ತಪ್ಪಿಸಿ, ವಿವೇಕದಿಂದ ನಡೆದುಕೊಂಡರೆ ಅನೇಕ ಸಮಸ್ಯೆಗಳನ್ನು ನಿಯಂತ್ರಿಸಬಹುದು

 

ಸಿಂಹ ರಾಶಿ ಫಲಿತಾಂಶ: ಸಹನೆ ಮತ್ತು ನಂಬಿಕೆ ಮುಖ್ಯ

ಸಿಂಹ ರಾಶಿಯವರೊಂದಿಗೆ ವಿವಾಹವಾಗುವವರು ದೀರ್ಘಕಾಲ ಒಟ್ಟಾಗಿ ಸಂತೋಷದಿಂದ ಜೀವನ ಸಾಗಿಸುವ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ಪರಸ್ಪರ ಅರ್ಥಮಾಡಿಕೊಳ್ಳುವ ಗುಣದಿಂದ ಬಾಂಧವ್ಯ ಬಲವಾಗುತ್ತದೆ. ಸಂಗಾತಿಯೊಂದಿಗೆ ಪ್ರವಾಸಕ್ಕೆ ಹೋಗುವ ಯೋಚನೆಗಳು ರೂಪ ಪಡೆಯಬಹುದು. ನಿಮ್ಮ ವಿರೋಧಿಗಳು ತಮ್ಮೊಳಗಿನ ಜಗಳಗಳಿಂದಲೇ ದುರ್ಬಲರಾಗುವರು. ಆದಾಗ್ಯೂ ಪ್ರೇಮ ಸಂಬಂಧಗಳಲ್ಲಿ ಹತಾಶೆ ಹಾಗೂ ಅನಗತ್ಯ ಆಲೋಚನೆಗಳು ಕಾಡುವ ಸಾಧ್ಯತೆ ಇದೆ. ಮನಸ್ಸಿನ ಸಮತೋಲನ ಕಾಪಾಡಿಕೊಳ್ಳುವುದು ಅಗತ್ಯ. ಆಸ್ಪತ್ರೆಗೆ ಸಂಬಂಧಿಸಿದ ಓಡಾಟ ಸಂಭವಿಸಬಹುದು. ವೃತ್ತಿ ಕ್ಷೇತ್ರದಲ್ಲಿ ಕೆಲವು ವಿಘ್ನಗಳು ಎದುರಾಗಲಿವೆ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ ಇದ್ದರೂ ಗೌರವ ಮತ್ತು ಮಾನ್ಯತೆ ದೊರೆಯಲಿದೆ. ತಂದೆಯ ಆರೋಗ್ಯದಲ್ಲಿ ಏರುಪೇರು ಕಾಣಿಸಬಹುದು; ತಾಯಿಯ ಆರೋಗ್ಯದ ಬಗ್ಗೆ ಸಹ ಜಾಗ್ರತೆ ವಹಿಸಬೇಕು. ಅಗತ್ಯವಿದ್ದರೆ ತಕ್ಷಣ ವೈದ್ಯರ ಸಲಹೆ ಪಡೆಯಿರಿ. ಹಿರಿಯರೊಂದಿಗೆ ವಾದ-ವಿವಾದ ಸಂಭವಿಸಬಹುದು. ಪರಿಸ್ಥಿತಿಗಳ ಪರಿಣಾಮವಾಗಿ ಕುಟುಂಬದಲ್ಲಿ ಕಲಹ ಉಂಟಾಗಬಹುದು. ಸಾಂಸಾರಿಕ ಸುಖ ಹಂತಹಂತವಾಗಿ ಗೋಚರವಾದರೂ ಮನಸ್ಸಿಗೆ ಸಂಪೂರ್ಣ ಸಮಾಧಾನ ದೊರೆಯದಿರಬಹುದು. ಆದರೂ ಗುರುಕೃಪೆಯಿಂದ ಎಲ್ಲಾ ಅಡೆತಡೆಗಳನ್ನು ಎದುರಿಸಿ ಮುನ್ನಡೆಯುವ ಶಕ್ತಿ ಸಿಗುತ್ತದೆ. ಕುಟುಂಬದಲ್ಲಿ ಪತ್ನಿಯ ಸಹಾಯದಿಂದ ಹಣಕಾಸಿನ ಸಮಸ್ಯೆಗಳು ಪರಿಹಾರವಾಗಲಿವೆ. ಅಧ್ಯಾತ್ಮಿಕ ಚಿಂತನೆಗಳು ಹೆಚ್ಚಾಗುವವು. ಸಹೋದರರೊಂದಿಗೆ ಹಳೆಯ ಬಾಂಧವ್ಯ ಮರು ಸ್ಥಾಪನೆಯಾಗುವ ಸಾಧ್ಯತೆ ಇದೆ. ಸಾಲ ಮರುಪಾವತಿ ಸಾಧ್ಯವಾಗಲಿದೆ. ಹಳಸಿಹೋದ ಸಂಬಂಧಗಳಲ್ಲಿ ಮರುಮದುವೆ ಮಾತುಕತೆ ಯಶಸ್ವಿಯಾಗುವ ಲಕ್ಷಣಗಳಿವೆ. ಒಟ್ಟಾರೆ, ಈ ಅವಧಿಯಲ್ಲಿ ಸಹನೆ, ಸಮಾಧಾನ ಮತ್ತು ವಿವೇಕದಿಂದ ನಡೆದುಕೊಂಡರೆ ಉತ್ತಮ ಫಲಿತಾಂಶಗಳು ಕಾಣಿಸಿಕೊಳ್ಳುತ್ತವೆ.

 

ಕನ್ಯಾ ರಾಶಿ ಫಲಿತಾಂಶ: ಜವಾಬ್ದಾರಿ, ಅವಕಾಶ ಮತ್ತು ಎಚ್ಚರಿಕೆಯ ಸಮಯ

ಕನ್ಯಾ ರಾಶಿಯವರು ತಮ್ಮ ವ್ಯವಹಾರಗಳನ್ನು ಸ್ಥಳಾಂತರಿಸುವ ಬಗ್ಗೆ ಯೋಚಿಸುತ್ತಿದ್ದರೆ, ಅದು ನಿಮಗೆ ಅನುಕೂಲಕರವಾಗುವ ಸಾಧ್ಯತೆ ಇದೆ. ಆಸ್ತಿ ಸಂಬಂಧಿತ ವಿಷಯಗಳಲ್ಲಿ ಸುಲಭವಾಗಿ ಸಾಧನೆ ಕಾಣಬಹುದು. ಕುಟುಂಬದ ಪ್ರಮುಖ ಜವಾಬ್ದಾರಿಯನ್ನು ನೀವು ವಹಿಸಿಕೊಳ್ಳುವ ಸಂದರ್ಭ ಬರುತ್ತದೆ. ಮಹಿಳೆಯರಿಗೆ ಉದ್ಯೋಗದಲ್ಲಿ ವರ್ಗಾವಣೆ ಹಾಗೂ ಬಡ್ತಿ ಸಂಭವಿಸಬಹುದು. ಆದರೆ ವಿವಾಹ ವಿಷಯದಲ್ಲಿ ವಿಳಂಬ ಉಂಟಾಗುವ ಸಾಧ್ಯತೆ ಇದೆ. ನಿಶ್ಚಿತಾರ್ಥವಾದ ಸಂಬಂಧ ಮುರಿದುಬಿಡುವ ಸಂಭವವೂ ಕಾಣಿಸುತ್ತದೆ. ಅತ್ತೆ-ಸೊಸೆ ನಡುವಿನ ಕಾದಾಟ ಕುಟುಂಬ ಶಾಂತಿಗೆ ಧಕ್ಕೆ ತರಬಹುದು. ವಾಹನ ಅಪಘಾತದ ಸೂಚನೆ ಇರುವುದರಿಂದ ಚಾಲನೆ ಮಾಡುವಾಗ ವಿಶೇಷ ಜಾಗ್ರತೆ ಅಗತ್ಯ. ವ್ಯಾಪಾರಿಗಳಿಗೆ ಇದು ಅಭಿವೃದ್ಧಿ ಕಾಣುವ ಕಾಲವಾಗಿದ್ದರೂ, ಉದ್ಯಮಗಳಲ್ಲಿ ಆರ್ಥಿಕ ಸಂಕಟ ಎದುರಾಗಬಹುದು. ಹೀಗಾಗಿ ಹಣಕಾಸು ವ್ಯವಹಾರಗಳಲ್ಲಿ ಎಚ್ಚರಿಕೆ ಮುಖ್ಯ. ಮಹಿಳೆಯರಿಗೆ ಸ್ವಲ್ಪ ಮಟ್ಟಿನ ತೊಂದರೆಗಳು ಕಾಣಿಸಬಹುದು. ಕೃಷಿಯೇತರ ಚಟುವಟಿಕೆಗಳಲ್ಲಿ ವಿಳಂಬ ಸಂಭವಿಸಬಹುದು. ನ್ಯಾಯಾಲಯ ಸಂಬಂಧಿತ ಕೆಲಸಗಳಲ್ಲಿ ಹಿನ್ನಡೆ ಕಾಣಬಹುದು. ಆದರೂ ಸಮಾಜದಲ್ಲಿ ಗೌರವ ಹಾಗೂ ಮಾನ್ಯತೆ ಸಿಗುವ ಭಾಗ್ಯವಿದೆ. ನಿಂತುಹೋದ ಮನೆ ಕಟ್ಟಡ ಪತ್ನಿಯ ಸಹಾಯದಿಂದ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಆರೋಗ್ಯದ ವಿಷಯದಲ್ಲಿ ಉದರದೋಷ ಹಾಗೂ ನೇತ್ರದೋಷಗಳ ಬಗ್ಗೆ ಗಮನ ಹರಿಸಿ. ಅಗತ್ಯವಿದ್ದರೆ ವೈದ್ಯಕೀಯ ಸಲಹೆ ಪಡೆಯುವುದು ಉತ್ತಮ. ಪ್ರೇಮ ಸಂಬಂಧಗಳಲ್ಲಿ ಮಧ್ಯಸ್ಥಿಕೆ, ಚಾಡಿ ಮಾತುಗಳಿಂದ ಸಮಸ್ಯೆಗಳು ಉಂಟಾಗಬಹುದು. ಈ ಅವಧಿಯಲ್ಲಿ ಸಹನೆ, ವಿವೇಕ ಮತ್ತು ಸಮಾಧಾನದಿಂದ ನಡೆದುಕೊಳ್ಳುವುದು ಉತ್ತಮ ಫಲಿತಾಂಶಕ್ಕೆ ದಾರಿ ಮಾಡಿಕೊಡುತ್ತದೆ.

 

ತುಲಾ ರಾಶಿ ಫಲಿತಾಂಶ: ಶುಭಕಾರ್ಯಗಳ ನಡುವೆ ಸಂಯಮ ಅಗತ್ಯ

ತುಲಾ ರಾಶಿಯವರೊಂದಿಗೆ ವಿವಾಹವಾದರೆ ದೀರ್ಘಕಾಲ ಒಟ್ಟಾಗಿ ಸಂತೋಷದಿಂದ ಜೀವನ ಸಾಗಿಸುವ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ಸ್ಥಿರತೆ ಕಾಣಿಸಿಕೊಳ್ಳುತ್ತದೆ. ನಿಮ್ಮ ಶತ್ರುಗಳು ತಮ್ಮೊಳಗಿನ ಭಿನ್ನಾಭಿಪ್ರಾಯಗಳಿಂದಲೇ ದುರ್ಬಲರಾಗುವರು. ಮಕ್ಕಳ ಕಡೆಯಿಂದ ಶುಭ ಸುದ್ದಿ ದೊರೆಯಬಹುದು. ಒಡಹುಟ್ಟಿದವರ ನಡುವೆ ಉಂಟಾಗುವ ವಿವಾದಗಳನ್ನು ನೀವು ಮಧ್ಯಸ್ಥಿಕೆ ಮೂಲಕ ಪರಿಹರಿಸಬೇಕಾಗಬಹುದು. ಮನೆಯಲ್ಲಿ ಶುಭಕಾರ್ಯಗಳು ಜರುಗುವ ಸಾಧ್ಯತೆ ಇದೆ. ಪ್ರೇಮಿಗಳಿಗೆ ವಿವಾಹ ಅವಕಾಶಗಳು ಮೂಡಬಹುದು. ಆದರೆ ಕೆಲವರಿಗೆ ಹಿರಿಯರಿಂದ ವಿರೋಧ ಎದುರಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಇದು ಅನುಕೂಲಕರ ಕಾಲ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗೆಲುವು ಸಾಧ್ಯ. ಉತ್ತಮ ವಿದ್ಯಾಭ್ಯಾಸಕ್ಕಾಗಿ ಪ್ರಯತ್ನ ಮುಂದುವರಿಸಿದರೆ ಯಶಸ್ಸು ಖಚಿತ. ಸಹವಾಸ ದೋಷದಿಂದ ಕೆಟ್ಟ ಅಭ್ಯಾಸಗಳಿಗೆ ಒಳಗಾಗುವ ಸಾಧ್ಯತೆ ಇದೆ, ಆದ್ದರಿಂದ ಸ್ನೇಹಿತರ ಆಯ್ಕೆಯಲ್ಲಿ ಎಚ್ಚರಿಕೆ ವಹಿಸಬೇಕು. ಸಾಂಸಾರಿಕ ಜೀವನದಲ್ಲಿ ಕೆಲವು ತಾಪತ್ರಯಗಳು ಕಂಡುಬರಬಹುದು. ಆರೋಗ್ಯದ ವಿಷಯದಲ್ಲಿ ಉದಾಸೀನತೆ ತೋರಿಸಬೇಡಿ. ಕುಟುಂಬ ಸಮೇತ ದೇವದರ್ಶನ ಭಾಗ್ಯ ಸಿಗಲಿದೆ. ಮಕ್ಕಳಿಂದ ಕೆಲವೊಂದು ತಕರಾರುಗಳು ಉಂಟಾಗಬಹುದು. ಬೇರೆಯವರ ಕುಟುಂಬ ವಿಚಾರಗಳಲ್ಲಿ ತಲೆಹಾಕುವುದನ್ನು ತಪ್ಪಿಸುವುದು ಒಳಿತು. ನಿಮ್ಮ ಕುಟುಂಬದ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯಗಳು ಮೂಡಬಹುದು. ಸಮಾಜದ ಸಣ್ಣ ವಿಷಯಗಳಿಗೂ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ. ಒಟ್ಟಾರೆ, ಸಹನೆ ಮತ್ತು ವಿವೇಕದಿಂದ ನಡೆದುಕೊಂಡರೆ ಶುಭಫಲಗಳನ್ನು ಹೆಚ್ಚಿಸಿಕೊಂಡು, ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಬಹುದು.

 

ವೃಶ್ಚಿಕ ರಾಶಿ ಫಲಿತಾಂಶ: ಹಣ, ಕುಟುಂಬ ಮತ್ತು ಸಾಮಾಜಿಕ ಗೌರವದಲ್ಲಿ ಸಮನ್ವಯದ ಅವಧಿ

ವೃಶ್ಚಿಕ ರಾಶಿಯವರಿಗೆ ಈ ಅವಧಿ ಮನೆಯಲ್ಲಿಯ ಮಂಗಳಕಾರ್ಯಗಳಿಗೆ ಅನುಕೂಲಕರವಾಗಿದೆ. ಆದರೆ ಹಣಕಾಸು ಸಂಬಂಧಿತ ವಿಚಾರಗಳಲ್ಲಿ ಚಿಂತೆಯು ಹೆಚ್ಚಾಗಬಹುದು. ಸಹೋದರರು, ಮಿತ್ರರು ಮತ್ತು ಬಳಗದ ಸಹಾಯದಿಂದ ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸಬಹುದು. ಸ್ವಂತ ಪ್ರಯತ್ನಗಳಿಂದ ಹಣಕಾಸಿನಲ್ಲಿ ಪ್ರಗತಿ ಕಾಣುವ ಸಂಭವವಿದೆ. ಕುಟುಂಬದೊಂದಿಗೆ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರಯಾಣಗಳು ಸಕಾರಾತ್ಮಕ ಪರಿಣಾಮ ತರುತ್ತವೆ. ವಾಹನ ಚಾಲಕರು ಮತ್ತು ಸಂಬಂಧಿತ ವರ್ಗದವರಿಗೆ ಉತ್ತಮ ಫಲಕಾಂಕ್ಷೆಗಳ ಸಾಧ್ಯತೆ ಇದೆ. ಗ್ರಾಮ ಪಂಚಾಯತಿ ಸದಸ್ಯರು, ಉದ್ಯೋಗಿಗಳು ಮತ್ತು ಇತರ ಸಮಾಜ ಸೇವಕರು ಸಮಾಜದಲ್ಲಿ ವಿಶೇಷ ಗೌರವ ಪಡೆಯುವ ಅವಕಾಶ ಸಿಗಲಿದೆ. ಸಂಗಾತಿಯ ಮನಸ್ಸು ಉಲ್ಲಾಸದಿಂದ ಕೂಡಿದ ಸಂದರ್ಭಗಳು ಕಾಣಬಹುದು. ಆದರೆ ನೂತನ ಮನೆ ನಿರ್ಮಾಣ ಅಥವಾ ಭೂ ಖರೀದಿಗೆ ಸಕಾಲವಲ್ಲ. ಧಾರ್ಮಿಕ ಕಾರ್ಯಗಳಲ್ಲಿ ಕೆಲವು ಅಡೆತಡೆಗಳು ಎದುರಾಗಬಹುದು. ಕಾರ್ಮಿಕ ವರ್ಗದವರಿಗೆ ಗೊಂದಲದ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ. ಮಧ್ಯಸ್ಥಿಕೆ ಮಾಡುವವರಿಂದ ಕೆಲಸ ಕಳೆದುಕೊಳ್ಳುವ ಭೀತಿ ಕಾಣಬಹುದು. ಬಂಧುಗಳಿಂದ ವಿರೋಧ ಮತ್ತು ಸಹೋದರ–ಸಹೋದರಿಯಿಂದ ಮನಸ್ತಾಪ ಉಂಟಾಗಬಹುದು. ಆಸ್ತಿ ಖರೀದಿಯಲ್ಲಿ ಯಶಸ್ಸು ಕಾಣುವ ಭಾಗ್ಯವಿದೆ. ಮಕ್ಕಳಿಂದ ಸಂತೋಷದ ಭಾಗ್ಯವಿದೆ. ಹಣಕಾಸು ಮತ್ತು ವ್ಯಾಪಾರ ವಿಷಯಗಳಲ್ಲಿ ಹೆಂಡತಿಯ ಮಾರ್ಗದರ್ಶನ ಪಡೆದು, ಮನಸ್ಸಿನಲ್ಲಿ ಸಮಾಧಾನ ಮತ್ತು ತಾಳ್ಮೆಯಿಂದ ಮುಂದುವರಿಯುವುದು ಉತ್ತಮ ಫಲಿತಾಂಶಕ್ಕೆ ದಾರಿ ಮಾಡಿಕೊಡುತ್ತದೆ.

 

ಧನುಸ್ಸು ರಾಶಿ ಫಲಿತಾಂಶ: ಹಣ, ಆರೋಗ್ಯ ಮತ್ತು ಸಂಬಂಧಗಳಲ್ಲಿ ಎಚ್ಚರಿಕೆ ಅವಧಿ

ಧನುಸ್ಸು ರಾಶಿಯವರಿಗೆ ಪಾರ್ಟ್ ಟೈಮ್ ಕೆಲಸದ ಅವಕಾಶಗಳು ಲಭ್ಯವಾಗುವ ಲಕ್ಷಣಗಳಿವೆ. ಆದರೆ ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ, ವಿಶೇಷವಾಗಿ ಸಂಬಂಧಿಕರಿಗೆ ಸಾಲ ನೀಡುವ ಸಂದರ್ಭ, ಅದು ಬಿರುಕು ಮತ್ತು ಕಲಹಕ್ಕೆ ಕಾರಣವಾಗಬಹುದು. ಸಂಗಾತಿಯೊಂದಿಗೆ ತಾತ್ಕಾಲಿಕ ಜಗಳಗಳು ಸಂಭವಿಸಬಹುದು. ಸಂಗಾತಿಯೊಂದಿಗೆ ಪ್ರಯಾಣಕ್ಕೆ ಯೋಜನೆ ರೂಪಿಸುತ್ತಿದ್ದರೆ, ಅದು ಯಶಸ್ವಿಯಾಗಲು ತಾಳ್ಮೆ ಮತ್ತು ವ್ಯವಸ್ಥೆ ಮುಖ್ಯ. ಆರೋಗ್ಯದಲ್ಲಿ ಪದೇ ಪದೇ ಅನಾರೋಗ್ಯ, ನರ ದೌರ್ಬಲ್ಯ ಮತ್ತು ಮಾನಸಿಕ ಚಿಂತೆ ಕಾಣಿಸಬಹುದು. ಕೆಲ ಕಾರ್ಯಗಳಲ್ಲಿ ಕಿರಿಕಿರಿ, ದೀರ್ಘಕಾಲದ ಒತ್ತಡ ಮತ್ತು ಹೆಚ್ಚು ಖರ್ಚು ಎದುರಾಗುವ ಸಾಧ್ಯತೆ ಇದೆ. ದೂರ ಸಂಚಾರದಲ್ಲಿ ಕಾರ್ಯಸಿದ್ಧತೆ ಅಗತ್ಯವಿದೆ. ಶುಭಮಂಗಳ ಕಾರ್ಯಗಳನ್ನು ತಾತ್ಕಾಲಿಕವಾಗಿ ಮುಂದಕ್ಕೆ ಹಾಕುವುದು ಉತ್ತಮ. ಪಾಲು ಬಂಡವಾಳಗಳಲ್ಲಿ ಗೊಂದಲಗಳು ಎದುರಾಗಬಹುದು. ಹಣಕಾಸಿನ ವ್ಯವಹಾರದಲ್ಲಿ ಪ್ರಗತಿ ಸಂಭವಿಸಲಿದೆ. ಹೊಸ ವಸ್ತುಗಳ ಖರೀದಿ ಜೋರಾಗಿ ನಡೆಯಬಹುದು. ದೀರ್ಘಕಾಲದ ಸಮಸ್ಯೆಗಳಲ್ಲಿ ಪರಿಹಾರ ಕಾಣುವುದು ಸಾಧ್ಯ. ಸಹೋದರರಿಂದ ಭಿನ್ನಾಭಿಪ್ರಾಯಗಳು ಮೂಡಬಹುದು. ಗಂಡ–ಹೆಂಡತಿ ನಡುವೆ ವಿರಸ ಉಂಟಾಗಬಹುದು. ಮಕ್ಕಳ ವಿದ್ಯಾಭ್ಯಾಸ ಮತ್ತು ಮಧ್ಯಸ್ಥಿಕೆ ಸಂಬಂಧಿ ಬೇಸರಗಳು ಕಾಡಬಹುದು. ಕುಟುಂಬಕ್ಕೆ ಹೊಸ ಸದಸ್ಯರ ಸೇರ್ಪಡೆ ಸಂಭವಿಸಲಿದೆ. ಹೆಂಡತಿ ತವರು ಮನೆಗೆ ಹೋಗುವ ಸಂದರ್ಭ ಕೂಡ ಉಂಟಾಗಬಹುದು. ಪ್ರೇಮಿಗಳ ಮದುವೆ ವಿಚಾರದಲ್ಲಿ ಕೆಲ ಅಡೆತಡೆಗಳು ಎದುರಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಮನಸ್ಸಿನಲ್ಲಿ ಸಮಾಧಾನ, ಸಹನೆ ಮತ್ತು ಹಣಕಾಸು–ಸಂಬಂಧ ವಿಚಾರದಲ್ಲಿ ಎಚ್ಚರಿಕೆ ಮುಖ್ಯ.

 

ಮಕರ ರಾಶಿ ಫಲಿತಾಂಶ: ಹಣ, ಕುಟುಂಬ ಮತ್ತು ಆರೋಗ್ಯದಲ್ಲಿ ಎಚ್ಚರಿಕೆ ಅವಧಿ

ಮಕರ ರಾಶಿಯವರು ದೀರ್ಘಕಾಲದಂತೆ ತಮ್ಮ ಸಂಗಾತಿಯೊಂದಿಗೆ ಬಾಳಲು ಅವಕಾಶ ಹೊಂದಿದ್ದಾರೆ. ಸಾಕಷ್ಟು ಹೋರಾಟಗಳ ನಂತರ ಆಸ್ತಿ ಸಂಬಂಧಿತ ಸಮಸ್ಯೆಗಳು ಬಗೆಹರಿದು ಮರಳಿ ನಿಮ್ಮಲ್ಲಿ ಬರುತ್ತವೆ. ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ದಾರಿ ಸುಗಮವಾಗಲಿದೆ. ಆರ್ಥಿಕವಾಗಿ ಸ್ಥಿರತೆ ಮತ್ತು ನಿಮ್ಮ ಅದೃಷ್ಟ ಸಹಾಯಕವಾಗಲಿದೆ. ಭೂಮಿ, ವಾಹನ, ಮನೆ ಅಥವಾ ಅಂಗಡಿ ಖರೀದಿಸುವ ವಿಚಾರದಲ್ಲಿ ಯೋಚನೆಗಳು ಮೂಡುತ್ತವೆ, ಆದರೆ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳುವುದು ಮುಖ್ಯ. ಶತ್ರುಗಳ ಕಾಟದಿಂದ ಪಾರಾಗಲು ಕ್ರಮ ಕೈಗೊಳ್ಳಬೇಕಾಗುತ್ತದೆ. ಮಕ್ಕಳಿಂದ ಕೆಲವೊಂದು ನೀಚ ಕಾಮಾಸಕ್ತಿ ಕಾಳಜಿ ಉಂಟು ಮಾಡಬಹುದು. ಸಂಗಾತಿಯೊಂದಿಗೆ ಸಹವಾಸ ದೋಷದಿಂದ ಪೊಲೀಸ್ ಸ್ಟೇಷನ್‌ಗೆ ಹೋಗುವ ಪರಿಸ್ಥಿತಿಗಳು ಸಂಭವಿಸಬಹುದು. ಮೇಲಾಧಿಕಾರಿಗಳೊಂದಿಗೆ ಗೊಂದಲ ಮತ್ತು ವ್ಯವಹಾರದಲ್ಲಿ ಕಷ್ಟ–ನಷ್ಟಗಳನ್ನು ಅನುಭವಿಸಬೇಕಾಗಬಹುದು. ರಾಜಕೀಯ ವ್ಯಕ್ತಿಗಳು ರಾಜಕೀಯ ಕ್ಷೇತ್ರದಿಂದ ದೂರ ಸರಲಿದ್ದಾರೆ. ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಅಗತ್ಯ. ಮಾತಾಪಿತೃ ಆರೋಗ್ಯದಲ್ಲಿ ಏರುಪೇರು ಕಾಣಬಹುದು; ಸೂಕ್ತ ವೈದ್ಯರ ಸಲಹೆ ಪಡೆಯುವುದು ಸೂಕ್ತ. ತಲೆಸುತ್ತು, ನರ ಸಂಬಂಧಿ ಸಮಸ್ಯೆಗಳು ಕಾಡಬಹುದು. ಕೆಲಸದಲ್ಲಿ ಹೆಚ್ಚಿನ ಒತ್ತಡ ಎದುರಾಗಲಿದೆ. ಹಣಕಾಸಿನ ವಿಷಯಗಳಲ್ಲಿ ಮಧ್ಯಸ್ಥಿಕೆ ಮಾಡುವುದನ್ನು ತಪ್ಪಿಸಿ. ಹಣ ನೀಡಿದರೆ ಧನಹಾನಿ ಮತ್ತು ಮಾನಹಾನಿ ಸಂಭವಿಸಬಹುದು. ಪ್ರೇಮಿಗಳ ಮದುವೆ ಸಂಬಂಧಿ ವಿಚಾರಗಳಲ್ಲಿ ಕೂಡ ಎಚ್ಚರಿಕೆ ಅಗತ್ಯ. ಒಟ್ಟಾರೆ, ಎಚ್ಚರಿಕೆ, ಸಹನೆ ಮತ್ತು ವೈದ್ಯಕೀಯ–ಹಣಕಾಸು ವಿಷಯಗಳಲ್ಲಿ ಜಾಗ್ರತೆ ಅತ್ಯಂತ ಮುಖ್ಯ.

 

ಕುಂಭ ರಾಶಿ ಫಲಿತಾಂಶ: ಉದ್ಯೋಗ, ಆಸ್ತಿ ಮತ್ತು ಸಂಬಂಧಗಳಲ್ಲಿ ಜಾಗ್ರತೆ ಅಗತ್ಯ

ಕುಂಭ ರಾಶಿಯವರಿಗೆ ಈ ಅವಧಿಯಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಕೆಲವು ತಪ್ಪುಗಳಿಂದ ಅಧಿಕಾರಿಗಳಿಂದ ತೊಂದರೆ ಎದುರಾಗಬಹುದು. ಆಸ್ತಿಯ ಮಾರಾಟ ಮಾಡಲು ಯೋಚಿಸುತ್ತಿದ್ದರೆ ದಾರಿ ಸುಗಮವಾಗುವ ಸಾಧ್ಯತೆ ಇದೆ. ಪರೀಕ್ಷೆ ಬರೆದವರು ಫಲಿತಾಂಶದ ಬಗ್ಗೆ ಚಿಂತಿತರಾಗಬಹುದು. ಆಸ್ತಿಗೆ ಸಂಬಂಧಿಸಿದ ವಿವಾದದಲ್ಲಿ ಜಾಗ್ರತೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು. ಸಂಗಾತಿಯೊಂದಿಗೆ ಉಂಟಾಗುವ ಬಿರುಕುಗಳ ಕಾರಣವನ್ನು ಗುರುತಿಸಿ ಪರಿಹರಿಸುವುದು ಮುಖ್ಯ. ಉದ್ಯೋಗದಲ್ಲಿ ಸ್ಥಾನ ಬದಲಾವಣೆ ಅಥವಾ ಪ್ರಯಾಣದ ಅವಕಾಶಗಳಿವೆ. ಕೆಲವರಿಗೆ ಪಿತ್ತ ಸಂಬಂಧಿ ಆರೋಗ್ಯ ಸಮಸ್ಯೆ, ಮಾತೃವರ ಶಾರೀರಿಕ ಪೀಡೆ ಸಂಭವಿಸಬಹುದು. ಹಳೆಯ ಸಾಲ ಮರುಪಾವತಿಯಾಗಲಿದೆ. ಸಹೋದರರಿಗೆ ವಾಹನ ಅಪಘಾತ ಸಂಭವಿಸಬಹುದು, ಎಚ್ಚರಿಕೆ ಅಗತ್ಯ. ಪ್ರೇಮಿಗಳಲ್ಲಿ ಹೊಸ ಉತ್ಸಾಹ ಕಾಣಬಹುದು, ಆದರೆ ಕೆಲವು ಗುರಿ–ಸಾಧನೆಗಳಲ್ಲಿ ವಿಳಂಬ ಸಂಭವಿಸುತ್ತದೆ; ಪುನಃ ಪ್ರಯತ್ನ ಮಾಡಿ. ನಿಮ್ಮೊಂದಿಗೆ ಹಳೆಯ ಮೋಜು–ಮಸ್ತಿ ಮಾಡಿದವರು ತೊಂದರೆ/ಹಣಕಾಸು ವಿಚಾರದಲ್ಲಿ ದೂರ ಹೋಗಬಹುದು, ಅವರ ಮೇಲೆ ಜಾಗ್ರತೆ ವಹಿಸಿ. ಆತ್ಮಸಾಕ್ಷಿ ಮತ್ತು ವಿವೇಕದಿಂದ ನಡೆದುಕೊಂಡರೆ ಲಾಭವಾಗುತ್ತದೆ. ಯೋಜನೆಗಳು ಪತ್ನಿಯೊಂದಿಗೆ ಚರ್ಚಿಸಿ ಕ್ರಮವಾಗಬೇಕು. ಮಕ್ಕಳಿಂದ ಕೆಲವು ಮನಸ್ತಾಪ ಉಂಟಾಗಬಹುದು, ಬಂಧು–ಬಾಂಧವರೊಡನೆ ವಿಶ್ವಾಸಪೂರ್ಣ ಸಂಬಂಧವನ್ನು ಉಳಿಸಿಕೊಳ್ಳಿ. ಬಂಡವಾಳ ಹೂಡಿದ ವ್ಯವಹಾರಗಳು ತಾತ್ಕಾಲಿಕ ಹಿನ್ನಡೆ ಅನುಭವಿಸಿದರೂ, ಮುಂದಿನ ದಿನಗಳಲ್ಲಿ ಲಾಭದಾಯಕವಾಗುತ್ತವೆ. ಪ್ರೇಮ ಸಂಬಂಧಗಳಲ್ಲಿ ವಿರಸ ಉಂಟಾಗಬಹುದು. ಆರ್ಥಿಕವಾಗಿ ಉಳಿತಾಯದ ಮೇಲೆ ಗಮನಹರಿಸಿ. ವಿದ್ಯಾರ್ಥಿಗಳು ಶ್ರಮ ಮತ್ತು ಪ್ರಯತ್ನದಿಂದ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ವೈದ್ಯಕೀಯ ಮತ್ತು ವಾಣಿಜ್ಯ ಶಿಕ್ಷಣದವರಿಗೆ ಸಹ ಉತ್ತಮ ಅವಧಿ. ಒಟ್ಟಾರೆ, ಜಾಗ್ರತೆ, ಪರಿಶ್ರಮ ಮತ್ತು ಸಂಬಂಧಗಳಲ್ಲಿ ಸಮಾಧಾನದಿಂದ ನಡೆದುಕೊಂಡರೆ ಉತ್ತಮ ಫಲಿತಾಂಶಗಳು ದೊರೆಯುತ್ತವೆ.

 

ಮೀನ ರಾಶಿ ಫಲಿತಾಂಶ: ಸಂಬಂಧ, ಹಣಕಾಸು ಮತ್ತು ಕೆಲಸಗಳಲ್ಲಿ ಎಚ್ಚರಿಕೆ ಅವಧಿ

ಮೀನ ರಾಶಿಯವರು ದೀರ್ಘಕಾಲದಂತೆ ಸಂಗಾತಿಯೊಂದಿಗೆ ದಾಂಪತ್ಯ ಜೀವನ ಸಾಗಿಸಲು ಸಾಧ್ಯತೆ ಇದೆ. ಕುಟುಂಬದಲ್ಲಿ ಹಳೆಯ ಜಗಳಗಳು ಮತ್ತು ಘರ್ಷಣೆಗಳನ್ನು ನಿಮ್ಮ ಮಧ್ಯಸ್ಥಿಕೆಯ ಮೂಲಕ ಪರಿಹರಿಸಬಹುದಾಗಿದೆ. ವಿದೇಶಗಳೊಂದಿಗೆ ವ್ಯವಹಾರ ಮಾಡುವವರು ಕೆಲವು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲು ಅವಕಾಶ ಸಿಗುತ್ತದೆ. ಮಧ್ಯವರ್ತಿಗಳು ಬಹಳ ಪ್ರಯೋಜನ ಪಡೆಯುವ ಲಕ್ಷಣಗಳಿವೆ. ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ದೊರೆಯುತ್ತದೆ, ಉದ್ಯೋಗದಲ್ಲಿ ಉತ್ತಮ ಬದಲಾವಣೆ ಸಂಭವಿಸಬಹುದು. ಕುಟುಂಬದೊಂದಿಗೆ ಸಣ್ಣ ಪ್ರವಾಸಗಳು ಸಂತೋಷ ನೀಡುತ್ತವೆ. ಆದರೆ ಪರಸ್ತ್ರೀ ಪುರುಷ ಸ್ನೇಹದ ಪರಿಣಾಮವಾಗಿ ಕೌಟುಂಬಿಕ ಕಲಹ ಉಂಟಾಗಬಹುದು. ಪಾತ್ರೆ ವ್ಯಾಪಾರದಲ್ಲಿ ಲಾಭದಾಯಕ ಸಮಯ, ಆದರೆ ಬೇರೆ ವ್ಯವಹಾರ ಕಡೆ ಗಮನ ಬೇಡ. ಸ್ನೇಹಿತರಿಂದ ಸಿಹಿ ಸುದ್ದಿ ದೊರೆಯಬಹುದು. ಕೆಲಸ ಕಾರ್ಯಗಳಲ್ಲಿ ಒತ್ತಡ ಹೆಚ್ಚಾಗುವ ಲಕ್ಷಣಗಳಿವೆ. ಸಾಂಸಾರಿಕವಾಗಿ ಕೆಲವು ಸಮಸ್ಯೆಗಳು ತಲೆದೋರಬಹುದು. ನಿಮ್ಮ ದೃಢ ನಿರ್ಧಾರ ಮತ್ತು ಅಚಲ ನಿಲುವಿನಿಂದಲೇ ಕಾರ್ಯ ಸಾಧನೆಯಾಗುತ್ತದೆ. ಕೌಟುಂಬಿಕ ಹೊಣೆಗಾರಿಕೆ ಹೆಚ್ಚಾಗಿರುವುದರಿಂದ, ನಿಮ್ಮ ಯೋಜನೆಗಳು ಅರ್ಥಪೂರ್ಣವಾದರೂ ಸಹಕಾರದ ಕೊರತೆಯಿಂದ ತೊಂದರೆ ಉಂಟಾಗಬಹುದು. ಹಿತ ಶತ್ರುಗಳ ಮುಂದೆ ಯೋಜನೆಗಳನ್ನು ವಿವರಿಸಬೇಡಿ; ಇಲ್ಲದೆ ಹಿನ್ನಡೆ ಅನುಭವಿಸಬಹುದು. ಕೆಲವರು ನಿಮ್ಮನ್ನು ತಮ್ಮ ಕೆಲಸಗಳಲ್ಲಿ ಬಳಸಿಕೊಳ್ಳುವ ಸಾಧ್ಯತೆ ಇದೆ, ಇಂತಹವರಿಂದ ದೂರವಿರುವುದು ಉತ್ತಮ. ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ, ಎಲ್ಲಾ ಕೆಲಸಗಳನ್ನು ಬೇರೆಯವರಿಗೆ ಹಂಚಿದರೂ ಮೇಲ್ವಿಚಾರಣೆ ಮಾಡುವುದು ಅಗತ್ಯ. ವಿನಾಕಾರಣ ನಿಂದನೆ ಬಂದಾಗ ಅದನ್ನು ನಿರ್ಲಕ್ಷಿಸಬೇಡಿ; ಧೈರ್ಯದಿಂದ ಎದುರಿಸಿ. ಕೆಲವು ಬಂಧುಗಳ ಕಿರಿಕಿರಿ ಉಂಟಾಗಬಹುದು, ಅವರಿಂದ ದೂರವಿರಬೇಕು. ಪ್ರೇಮ ಮತ್ತು ದಾಂಪತ್ಯ ಜೀವನದಲ್ಲಿ ಪ್ರೀತಿ–ಸಮನ್ವಯ ಕ್ಷೀಣಿಸುವ ಲಕ್ಷಣಗಳಿವೆ. ಈ ಸಮಯದಲ್ಲಿ ಧೈರ್ಯ, ಸಮಾಧಾನ ಮತ್ತು ಎಚ್ಚರಿಕೆಯ ನಿರ್ವಹಣೆ ಮುಖ್ಯ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

2 days ago

   
Image 1
Image 1

ಬುಧವಾರದ ರಾಶಿ ಭವಿಷ್ಯ 04 ಮಾರ್ಚ್ 2026

ಮೇಷ ರಾಶಿ ಭವಿಷ್ಯ:ಇಂದು ಮೇಷ ರಾಶಿಯವರಿಗೆ ಅದೃಷ್ಟದ ದಿನವಾಗಿರಲಿದ... ಓದನ್ನು ಮುಂದುವರಿಸಿ


Edited by: ಬಾನು

21 hours ago

   

ಧವಾರದ ರಾಶಿ ಭವಿಷ್ಯ 04 ಮಾರ್ಚ್ 2026

ಮೇಷ ರಾಶಿ ಭವಿಷ್ಯ:ಇಂದು ಮೇಷ ರಾಶಿಯವರಿಗೆ ಅದೃಷ್ಟದ ದಿನವಾಗಿರಲಿದ... ಓದನ್ನು ಮುಂದುವರಿಸಿ


Edited by: ಬಾನು

21 hours ago

   
Image 1

ರಕ್ತ ವರ್ಣದ ಚಂದ್ರಗ್ರಹಣಕ್ಕೆ ಕೌಂಟ್‌ಡೌನ್! ಸ್ಪರ್ಶ–ಮೋಕ್ಷ ಸಮಯ ಇಲ್ಲಿದೆ

ಪಾಲ್ಗುಣ ಶುಕ್ಲ ಹುಣ್ಣಿಮೆ ದಿನವಾದ ಇಂದು ವರ್ಷದ ಮೊದಲ ಕೇತುಗ್ರಸ್ಥ ಚಂದ್ರಗ್ರಹಣ ಸಂಭವ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಭಾನುವಾರದ ರಾಶಿ ಭವಿಷ್ಯ – 01 ಮಾರ್ಚ್ 2026

ಮೇಷ ರಾಶಿ ಭವಿಷ್ಯ : ಮೇಷ ರಾಶಿಯವರಿಗೆ ಇಂದು ಮಿಶ್ರ ಫಲಗಳು ಕಾಣಿಸ... ಓದನ್ನು ಮುಂದುವರಿಸಿ


Edited by: ಬಾನು

3 days ago

   

ಭಾನುವಾರದ ರಾಶಿ ಭವಿಷ್ಯ – 01 ಮಾರ್ಚ್ 2026

ಮೇಷ ರಾಶಿ ಭವಿಷ್ಯ : ಮೇಷ ರಾಶಿಯವರಿಗೆ ಇಂದು ಮಿಶ್ರ ಫಲಗಳು ಕಾಣಿಸ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1

27 ಫೆಬ್ರವರಿ 2026 ಶುಕ್ರವಾರದ ರಾಶಿ ಭವಿಷ್ಯ

ಮೇಷ ರಾಶಿ ಭವಿಷ್ಯ: ಕಷ್ಟಕಾಲದಲ್ಲಿ ಪತ್ನಿಯ ಬೆಂಬಲ – ವಿದೇಶ ಯೋಗದ ಸುಳಿವುಓದನ್ನು ಮುಂದುವರಿಸಿ


Edited by: ಬಾನು

5 days ago

   

ರಾಶಿ ಭವಿಷ್ಯ – 27 ಫೆಬ್ರವರಿ 2026

ಮೇಷ ರಾಶಿ ಭವಿಷ್ಯ: ಕಷ್ಟಕಾಲದಲ್ಲಿ ಪತ್ನಿಯ ಬೆಂಬಲ – ವಿದೇಶ ಯೋಗದ ಸುಳಿವುಓದನ್ನು ಮುಂದುವರಿಸಿ


Edited by: ಬಾನು

5 days ago

   

ಮೇಷ ರಾಶಿ ಭವಿಷ್ಯ: ಕಷ್ಟಕಾಲದಲ್ಲಿ ಪತ್ನಿಯ ಬೆಂಬಲ – ವಿದೇಶ ಯೋಗದ ಸುಳಿವು

ಮೇಷ ರಾಶಿ ಭವಿಷ್ಯ: ಕಷ್ಟಕಾಲದಲ್ಲಿ ಪತ್ನಿಯ ಬೆಂಬಲ – ವಿದೇಶ ಯೋಗದ ಸುಳಿವು

&nb... ಓದನ್ನು ಮುಂದುವರಿಸಿ


Edited by: ಬಾನು

5 days ago

   

ರಾಶಿ ಭವಿಷ್ಯ – 2026

ಮೇಷ ರಾಶಿ ಭವಿಷ್ಯ: ಕಷ್ಟಕಾಲದಲ್ಲಿ ಪತ್ನಿಯ ಬೆಂಬಲ – ವಿದೇಶ ಯೋಗದ ಸುಳಿವು

&nb... ಓದನ್ನು ಮುಂದುವರಿಸಿ


Edited by: ಬಾನು

5 days ago

   

ರಾಶಿ ಭವಿಷ್ಯ – 27 ಫೆಬ್ರವರಿ 2026

ಮೇಷ ರಾಶಿ ಭವಿಷ್ಯ: ಕಷ್ಟಕಾಲದಲ್ಲಿ ಪತ್ನಿಯ ಬೆಂಬಲ – ವಿದೇಶ ಯೋಗದ ಸುಳಿವುಓದನ್ನು ಮುಂದುವರಿಸಿ


Edited by: ಬಾನು

5 days ago

   
Image 1

© 2024 Panchayat News

Disclaimer: The content and images featured on this platform are not our own. If you believe any content infringes upon your rights, please report it, and we will promptly remove it.