ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ 39 ಆರೋಪಿಗಳು ಸಾಬೀತು: ಪ್ರಜ್ವಲ್ ರೇವಣ್ಣ ಹೆಸರು ಚಾರ್ಜ್‌ಶೀಟ್‌ನಲ್ಲಿ ಇಲ್ಲ

ಹಾಸನ: ಕರ್ನಾಟಕದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಪ್ರಜ್ವಲ್ ರೇವಣ್ಣ ಸಂಬಂಧಿತ ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಹಾಸನದ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ವಿಶೇಷ ತನಿಖಾ ತಂಡ (SIT) 13,712 ಪುಟಗಳ ವಿವರವಾದ ಚಾರ್ಜ್‌ಶೀಟ್ ಸಲ್ಲಿಸಿದೆ.

 

ಪ್ರಕರಣದಲ್ಲಿ ಒಟ್ಟು 52 ಮಂದಿಯ ಹೆಸರು ಉಲ್ಲೇಖವಾಗಿದ್ದು, ಅವರಲ್ಲಿ 39 ಮಂದಿಯ ವಿರುದ್ಧ ಆರೋಪಗಳು ಸಾಬೀತಾಗಿದ್ದು, ಮಹಿಳೆಯರ ಸಮ್ಮತಿಯಿಲ್ಲದೆ ಮೊಬೈಲ್ ಮೂಲಕ ವಿಡಿಯೋ ಚಿತ್ರೀಕರಿಸಿ, ಪೆನ್‌ಡ್ರೈವ್ ಮೂಲಕ ಹಂಚಿಕೆ ಮಾಡಿರುವ ಆರೋಪಗಳ ವಿಚಾರದಲ್ಲಿ SIT ದೃಢಪಡಿಸಿದೆ.

 

2024ರ ಲೋಕಸಭಾ ಚುನಾವಣೆಯ ವೇಳೆ ಜೆಡಿಎಸ್ ಏಜೆಂಟ್ ಆಗಿದ್ದ ವಕೀಲ ಪೂರ್ಣಚಂದ್ರ ನೀಡಿದ ದೂರಿನ ಆಧಾರದ ಮೇಲೆ ತನಿಖೆ ಆರಂಭವಾಗಿತ್ತು. ತನಿಖೆ ವೇಳೆ ಆರೋಪಿಗಳು ಹಾಸನದಲ್ಲೇ ಸುಮಾರು 70 ಪೆನ್‌ಡ್ರೈವ್‌ಗಳನ್ನು ಖರೀದಿಸಿ, ಅವುಗಳ ಮೂಲಕ ವಿಡಿಯೋಗಳನ್ನು ಹಂಚಿಕೆ ಮಾಡಿದ್ದಂತೆ ಬಹಿರಂಗವಾಗಿದೆ. ಒಟ್ಟು 277 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿ, ತಾಂತ್ರಿಕ ಸಾಕ್ಷ್ಯಗಳು ಮತ್ತು ಫೋರೆನ್ಸಿಕ್ ವರದಿ ಆಧರಿಸಿ ದೋಷಾರೋಪಣೆ ಮಾಡಲಾಗಿದೆ.

 

ಎ1 ನವೀನ್, ಎ2 ಕಾರ್ತಿಕ್ ಎನ್ (ಪ್ರಜ್ವಲ್ ಅವರ ಕಾರು ಚಾಲಕ), ಎ3 ಚೇತನ್ ಬಿಸಿ, ಎ4 ಚೇತನ್ ವೈ ಎಸ್, ಎ5 ಲಿಖಿತ್ ಗೌಡ ಸೇರಿದಂತೆ ಒಟ್ಟು 39 ಮಂದಿಯ ವಿರುದ್ಧ ಆರೋಪ ಹೊರಿಸಲಾಗಿದೆ. ಇದರಲ್ಲಿ ಬಿಜೆಪಿ ನಾಯಕ ಪ್ರೀತಂ ಗೌಡ ಮತ್ತು ಸಂಸದ ಶ್ರೇಯಸ್ ಪಾಟೀಲ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರ ಹೆಸರುಗಳೂ ಸೇರಿದ್ದು ಗಮನಾರ್ಹವಾಗಿದೆ. ಪ್ರಜ್ವಲ್ ರೇವಣ್ಣ ಅವರ ಹೆಸರು ಈ ಚಾರ್ಜ್‌ಶೀಟ್‌ನಲ್ಲಿ ಸೇರಿಸಿಲ್ಲವೆಂದು SIT ತಿಳಿಸಿದೆ. ಮುಂದಿನ ನ್ಯಾಯಾಲಯದ ಕ್ರಮಗಳತ್ತ ಎಲ್ಲಾ  ಗಮನ ನೆಟ್ಟಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

13 hours ago

   
Image 1
Image 1
ರಾಯಚೂರು

ಪತ್ನಿಯೊಂದಿಗೆ ಅನೈತಿಕ ಸಂಬಂಧದ ಶಂಕೆಯಿಂದ ಯುವಕ ಹತ್ಯೆ – ಇಬ್ಬರು ಆರೋಪಿಗಳು ಬಂಧನ

ರಾಯಚೂರು: ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರೆಂಬ ಅನುಮಾನದ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಬೆಂಗಳೂರು ನಗರ

ಬೆಂಗಳೂರು ಸಿಸಿಬಿ ದಾಳಿ: ಅಕ್ರಮ ಗನ್ ಜಾಲ ಭೇದ – ಮಾಸ್ಟರ್ ಮೈಂಡ್ ಬಂಧನ

ಬೆಂಗಳೂರು: ರಾಜಧಾನಿಯಲ್ಲಿ ಅಕ್ರಮ ಶಸ್ತ್ರಾಸ್ತ್ರಗಳ ಮಾರಾಟ ನಡೆಸು... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ದಕ್ಷಿಣಕನ್ನಡ

‘ರಕ್ಷಕನೇ ಭಕ್ಷಕ?’: ಮೂಡಿಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಪಿಜಿ ಲೈಂಗಿಕ ಆರೋಪಗಳ ನಡುವೆ ಅಮಾನತು – ನ್ಯಾಯದ ಪ್ರಶ್ನೆ

ದಕ್ಷಿಣ ಕನ್ನಡ: ಮೂಡಿಬಿದಿರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂದ... ಓದನ್ನು ಮುಂದುವರಿಸಿ


Edited by: ಬಾನು

12 hours ago

   
Image 1

ಪೊಲೀಸ್ ವಲಯದಲ್ಲಿ ಶೋಕ : ಹೃದಯಾಘಾತದಿಂದ ಮುಖ್ಯಪೇದೆ ವೆಂಕಟರಮಣಪ್ಪ ಅಕಾಲಿಕ ನಿಧನ

ಕೋಲಾರ: ಕೋಲಾರದಲ್ಲಿ ಹೃದಯಾಘಾತದಿಂದ ಪೊಲೀಸ್ ಮುಖ್ಯಪೇದೆ ವೆಂಕಟರಮ... ಓದನ್ನು ಮುಂದುವರಿಸಿ


Edited by: ಬಾನು

12 hours ago

   
Image 1
ಬೆಂಗಳೂರು ನಗರ

ನೊಂದ ಮಹಿಳೆ ಪರ ವಕಾಲತ್ತು ವಹಿಸಿರುವ ವಕೀಲರ ಮೇಲೆ BDA ಅಧಿಕಾರಿಯ ಜೀವ ಬೆದರಿಕೆ!

ಬೆಂಗಳೂರು: ನಗರದಲ್ಲಿ ಬೆಂಗಳೂರಿನ ಅಭಿವೃದ್ಧಿ ಪ್ರಾಧಿಕಾರ (ಬಿಡಿಎ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1
ದಕ್ಷಿಣಕನ್ನಡ

ಮಂಗಳೂರು

ಗಂಡನನ್ನು ಬಂಧಿಸಿ ಹೆಂಡ್ತಿಯನ್ನು ಮಂಚಕ್ಕೆ ಕರೆದಿದ್ದ ಪ್ರಕರಣ - ಇನ್ಸ್‌ಪೆಕ್ಟರ್ ಸಸ್ಪೆಂಡ್

ಮಂಗಳೂರು: ಪತಿಯನ್ನು ಸುಳ್ಳು ಪ್ರಕರಣದಲ್ಲಿ ಬಂಧಿಸಿ, ಬಿಡುಗಡೆ ಮಾ... ಓದನ್ನು ಮುಂದುವರಿಸಿ


Edited by: ಬಾನು

14 hours ago

   
Image 1
ಬೆಳಗಾವಿ

15 ದಿನದ ಮಗು ಸಾವು: ತಂದೆ ಮೇಲೆ ಗಂಭೀರ ಅನುಮಾನ

ಬೆಳಗಾವಿ: ಕೇವಲ 15 ದಿನಗಳ ಹಿಂದೆಯಷ್ಟೇ ಜನಿಸಿದ್ದ ಮಗು ಏಕಾಏಕಿ ಸ... ಓದನ್ನು ಮುಂದುವರಿಸಿ


Edited by: ಬಾನು

15 hours ago

   
Image 1
ಮಂಡ್ಯ

ಯುಗಾದಿ ಹಬ್ಬಕ್ಕೆ ಜೂಜಾಟಕ್ಕೆ ಬ್ರೇಕ್ – ಮಂಡ್ಯ ಎಸ್ಪಿ ಕಠಿಣ ಎಚ್ಚರಿಕೆ

ಮಂಡ್ಯ: ಯುಗಾದಿ ಹಬ್ಬದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಜೂಜಾಟವನ್ನು... ಓದನ್ನು ಮುಂದುವರಿಸಿ


Edited by: ಬಾನು

15 hours ago

   
Image 1
ಬೆಂಗಳೂರು ನಗರ

ಸಿನಿಮೀಯ ದರೋಡೆ: ಬೈಕ್ ಅಡ್ಡಗಟ್ಟಿ ₹31 ಲಕ್ಷ ಲೂಟಿ, 5 ಆರೋಪಿಗಳು ಬಂಧನ

ಬೆಂಗಳೂರು: ಬೈಕ್ ಅಡ್ಡಗಟ್ಟಿ ಸಿನಿಮೀಯ ರೀತಿಯಲ್ಲಿ ದರೋಡೆ ನಡೆಸಿದ... ಓದನ್ನು ಮುಂದುವರಿಸಿ


Edited by: ಬಾನು

15 hours ago

   
Image 1
ಬೆಂಗಳೂರು ನಗರ

ಸುತ್ತಿಗೆಯಿಂದ ಹೊಡೆದು ಸ್ನೇಹಿತನ ಹತ್ಯೆ: ಬೆಂಗಳೂರಿನಲ್ಲಿ ಭೀಕರ ಘಟನೆ

ಬೆಂಗಳೂರು: ಅತ್ತಿಮರ ಗೊರವಿನಗೆರೆಯಲ್ಲಿ ಸಂಭವಿಸಿದ ಭೀಕರ ಘಟನೆতে... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1