75 ವರ್ಷ ಪೂರೈಸಿದ ಶಾಲೆಗೆ ವಿಶೇಷ ಅನುದಾನ ಕೋರಿ ಬೊಮ್ಮಾಯಿ ಮನವಿ
ಹಾವೇರಿ : ಜಿಲ್ಲೆಯ ಸವಣೂರು ತಾಲೂಕಿನ ಹೊಸನೀರಲಗಿ ಗ್ರಾಮದಲ್ಲಿ ಅಮೃತ ಮಹೋತ್ಸವ ಆಚರಿಸುತ್ತಿರುವ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ರಾಜ್ಯ ಸರ್ಕಾರ ವಿಶೇಷ ಅನುದಾನ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ಅಮೃತ ಮಹೋತ್ಸವ ಸಮಾರಂಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, “ಹೊಸನೀರಲಗಿ ಗ್ರಾಮವು ಸಾಮರಸ್ಯದ ಸಂಕೇತವಾಗಿದೆ. ದೇವಸ್ಥಾನ, ಶಾಲೆ, ರಸ್ತೆ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ನಾನು ಭಾಗಿಯಾಗಿದ್ದೇನೆ. ಈ ಗ್ರಾಮವು ನನಗೆ ಅಪಾರ ಪ್ರೀತಿ ಮತ್ತು ವಿಶ್ವಾಸ ನೀಡಿದೆ,” ಎಂದು ಹೇಳಿದರು. 75 ವರ್ಷಗಳನ್ನು ಪೂರೈಸಿರುವ ಶಾಲೆಗೆ ರಾಜ್ಯ ಸರ್ಕಾರ ವಿಶೇಷ ಅನುದಾನ ನೀಡುವಂತೆ ಅವರು ಒತ್ತಾಯಿಸಿದರು.
10 ಲಕ್ಷ ರೂ. ಅನುದಾನದ ಭರವಸೆ
ಈ ಭಾಗದ ಸಂಸದ ಹಾಗೂ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಅವರ ಸಂಸದರ ನಿಧಿಯಿಂದ 10 ಲಕ್ಷ ರೂ. ಅನುದಾನ ನೀಡಿಸುವ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ರಾಣೆಬೆನ್ನೂರುನ ಶನೇಶ್ವರ ಮಠದ ಶ್ರೀ ಷ. ಬ್ರ. ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಸಚಿವ ಸತೀಶ ಜಾರಕಿಹೊಳಿ, ಶಾಸಕ ಯಾಸೀರ ಅಹ್ಮದಖಾನ ಪಠಾಣ, ಹೆಸ್ಕಾಂ ಅಧ್ಯಕ್ಷ ಸೈಯದ್ ಅಜ್ಜಂಪೀರ ಎಸ್ ಖಾದ್ರಿ, ಗಡಿ ಪ್ರದೇಶಾಭಿವೃದ್ಧಿ ಅಧ್ಯಕ್ಷ ಸೋಮಣ್ಣ ಬೇವಿನಮರದ, ಎಸ್.ಡಿ.ಎಂ.ಸಿ ಅಧ್ಯಕ್ಷ ಧರಿಯಪ್ಪಗೌಡ ಪಾಟೀಲ್ ಹಾಗೂ ಮುಖಂಡ ಗಂಗಾಧರ ಬಾಣದ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಕೈಗಾ ಅಣು ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ 21 ಸಾವಿರ ಕೋಟಿ ಯೋಜನೆಗೆ ವೇಗ: 5–6ನೇ ಘಟಕ ಕಾಂಕ್ರೀಟಿಕರಣ ಆರಂಭ
ಉತ್ತರ ಕನ್ನಡ ಜಿಲ್ಲೆ: ಕೈಗಾ ಅಣು ವಿದ್ಯುತ್ ಉತ್ಪಾದನಾ ಕೇ... ಓದನ್ನು ಮುಂದುವರಿಸಿ
ಇಸ್ರೇಲ್–ಇರಾನ್ ಉದ್ವಿಗ್ನತೆ ನಡುವೆ ಕೋಡಿಮಠ ಶ್ರೀಗಳ ಎಚ್ಚರ ಸಂದೇಶ
ಬೆಂಗಳೂರು ಗ್ರಾಮಾಂತರ : ಜಿಲ್ಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ... ಓದನ್ನು ಮುಂದುವರಿಸಿ
📰 ಮಧ್ಯಪ್ರಾಚ್ಯ ಯುದ್ಧ: ಕೋಲಾರ ಜಿಲ್ಲಾಡಳಿತದಿಂದ ಹೊರದೇಶಗಳಲ್ಲಿ ಸಿಲುಕಿರುವವರಿಗೆ ಸಹಾಯವಾಣಿ
ಕೋಲಾರ, ಮಾರ್ಚ್ 01: ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿಯಲ್ಲಿ ಇ... ಓದನ್ನು ಮುಂದುವರಿಸಿ
ದುಬೈನಲ್ಲಿ ಸಿಲುಕಿರುವ ಭರತ್ ರೆಡ್ಡಿ ಸಂಪರ್ಕಕ್ಕೆ ಸಿಗ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಆತಂಕ
ಬೆಂಗಳೂರು, ಮಾರ್ಚ್ 01: ಇಸ್ರೇಲ್–ಇರಾನ್ ಸಂಘರ್ಷದ ಹಿನ್ನೆಲೆಯಲ್ಲ... ಓದನ್ನು ಮುಂದುವರಿಸಿ
ದುಬೈನಲ್ಲಿ ಸಿಲುಕಿದ 50ಕ್ಕೂ ಹೆಚ್ಚು ಕನ್ನಡಿಗರು ವಿಮಾನ ಹಾರಾಟ ರದ್ದಾದ ಹಿನ್ನೆಲೆ, ದುಬೈ ಒಕ್ಕಲಿಗರ ಸಂಘ ತುರ್ತು ಸಂಪರ್ಕ ಸಂಖ್ಯೆ ಪ್ರಕಟ
ಹಾಸನ: ಇರಾನ್–ಅಮೆರಿಕ–ಇಸ್ರೇಲ್ ಯುದ್ಧ ಹಿನ್ನೆಲೆ, ದುಬೈ ಮತ್ತು ಅ... ಓದನ್ನು ಮುಂದುವರಿಸಿ
ಇರಾನ್ ಸುಪ್ರೀಂ ಲೀಡರ್ ಖಮೇನಿ ಹತ್ಯೆ: ಚಿಕ್ಕಬಳ್ಳಾಪುರದ ಅಲೀಪುರದಲ್ಲಿ 3 ದಿನ ‘ಬ್ಲಾಕ್ ಡೇ’ ಶೋಕಾಚರಣೆ
ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲ್ಲೂಕಿನ ಅಲೀಪುರ ಗ್ರಾಮವು ಇರಾ... ಓದನ್ನು ಮುಂದುವರಿಸಿ
ದುಬೈನಲ್ಲಿ ಸಿಲುಕಿದ ಮಂಡ್ಯ ಹಾಲು ಒಕ್ಕೂಟ ನಿರ್ದೇಶಕ ಡಾಲು ರವಿ – ಯುದ್ಧಭೀತಿಯಲ್ಲಿ ಸುರಕ್ಷಿತ
ಮಂಡ್ಯ: ಅಮೇರಿಕ ಮತ್ತು ಇಸ್ರೇಲ್ ವಿರುದ್ಧ ಇರಾನ್ ಮಧ್ಯಪ್ರಾಚ್ಯದಲ... ಓದನ್ನು ಮುಂದುವರಿಸಿ
ದುಬೈ, ಇರಾನ್, ಇಸ್ರೇಲ್‌ನಲ್ಲಿ ಸಿಲುಕಿರುವ ಕನ್ನಡಿಗರ ಸುರಕ್ಷತೆಗೆ ಕರ್ನಾಟಕ ಸರ್ಕಾರ ಕ್ರಮಕೈಗೊಳ್ಳುತ್ತಿದೆ – ಸಿದ್ದರಾಮಯ್ಯ
ಬೆಂಗಳೂರು, ಮಾರ್ಚ್ 1: ಇರಾನ್ ಮತ್ತು ಇಸ್ರೇಲ್ ನಡುವಣ ಯುದ್ಧದಿಂದ... ಓದನ್ನು ಮುಂದುವರಿಸಿ
ಡಿ.ಕೆ. ಶಿವಕುಮಾರ್ ರಂಭಾಪುರಿ ಪೀಠಕ್ಕೆ ಭೇಟಿ – ರಾಜ್ಯ ರಾಜಕೀಯ ಮತ್ತು ಅಂತಾರಾಷ್ಟ್ರೀಯ ಸಂಘರ್ಷ ಕುರಿತು ಪ್ರತಿಕ್ರಿಯೆ
ಚಿಕ್ಕಮಗಳೂರು: ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರು ಚಿಕ್ಕ... ಓದನ್ನು ಮುಂದುವರಿಸಿ
ಮಂಗಳೂರು
ಮಂಗಳೂರು ವಿಮಾನ ನಿಲ್ದಾಣ: ಸಂಘರ್ಷದ ನಡುವೆ ಗಲ್ಪ್ ವಿಮಾನ ಹಾರಾಟ ರದ್ದು, ಪ್ರಯಾಣಿಕರಿಗೆ ಸಂಕಷ್ಟ
ಮಂಗಳೂರು: ಇಸ್ರೇಲ್–ಇರಾನ್ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಗಲ್... ಓದನ್ನು ಮುಂದುವರಿಸಿ