2011 ಜನಗಣತಿ ಆಧಾರ ಅಪಾಯಕರ – ಡಿಕೆ ಸುರೇಶ್ ತೀವ್ರ ಅಭಿಪ್ರಾಯ
ಬೆಂಗಳೂರು: ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳ ಮರು ವಿಂಗಡಣೆ ವಿಚಾರ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುವ ಸಾಧ್ಯತೆ ಇದೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಆತಂಕ ವ್ಯಕ್ತಪಡಿಸಿದ್ದಾರೆ. ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಮರುವಿಂಗಡಣೆಯಿಂದ ದಕ್ಷಿಣ ರಾಜ್ಯಗಳ ಕ್ಷೇತ್ರಗಳು ಕಡಿಮೆಯಾಗುವ ಜೊತೆಗೆ, ಆರ್ಥಿಕವಾಗಿ ಕೂಡ ಹೊಡೆತ ಬೀಳುವ ಸಾಧ್ಯತೆ ಇದೆ. ನಮ್ಮ ರಾಜ್ಯಗಳಿಂದ ಸಂಗ್ರಹವಾಗುವ ತೆರಿಗೆಗಳು ಉತ್ತರ ಭಾರತದ ರಾಜ್ಯಗಳಿಗೆ ವರ್ಗಾವಣೆಯಾಗುವ ಪರಿಸ್ಥಿತಿ ಉಂಟಾಗಬಹುದು,” ಎಂದು ಹೇಳಿದರು.
ಪ್ರಧಾನಿಯವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, “ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗುವುದಿಲ್ಲ ಎನ್ನುವುದು ವಾಸ್ತವಿಕತೆಗೆ ದೂರ. ದಕ್ಷಿಣ ರಾಜ್ಯಗಳು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದರೆ ಜನರು ಪರ್ಯಾಯ ಮಾರ್ಗಗಳನ್ನು ಯೋಚಿಸುವ ಪರಿಸ್ಥಿತಿ ಬರಬಹುದು,” ಎಂದು ಎಚ್ಚರಿಸಿದರು. ಇದೇ ವೇಳೆ, 2011ರ ಜನಗಣತಿ ಆಧಾರದ ಮೇಲೆ ಮರುವಿಂಗಡಣೆ ಮಾಡುವುದನ್ನು ಪ್ರಶ್ನಿಸಿದ ಅವರು, “ಅಂದಿನ ಜನಸಂಖ್ಯೆ ಮತ್ತು ಇಂದಿನ ವಾಸ್ತವಿಕತೆ ನಡುವೆ ಭಾರೀ ವ್ಯತ್ಯಾಸವಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಜನಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಇದನ್ನು ಪರಿಗಣಿಸದೇ ನಿರ್ಧಾರ ತೆಗೆದುಕೊಂಡರೆ ಹಲವು ಸವಾಲುಗಳು ಎದುರಾಗುತ್ತವೆ,” ಎಂದು ತಿಳಿಸಿದರು.
ದೇಶದ ಪ್ರಸ್ತುತ ಪರಿಸ್ಥಿತಿ ಕುರಿತು ಮಾತನಾಡಿದ ಅವರು, “ಯುದ್ಧದ ಪರಿಣಾಮವಾಗಿ ದೇಶದಲ್ಲಿ ಹಲವು ಸಮಸ್ಯೆಗಳು ಉಂಟಾಗುತ್ತಿವೆ. ಬೆಲೆ ಏರಿಕೆ ಹಾಗೂ ಅಭಾವಗಳು ಹೆಚ್ಚುತ್ತಿವೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು. ಮುಂದಿನ ದಿನಗಳಲ್ಲಿ ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ಜನತೆಗೆ ಮಾರ್ಗದರ್ಶನ ಅಗತ್ಯ,” ಎಂದು ಹೇಳಿದರು. ರಾಜಕೀಯ ವಿಚಾರಗಳಿಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಸ್ಥಾನ ಕುರಿತು ಕೇಳಿದ ಪ್ರಶ್ನೆಗೆ, “ಆ ವಿಷಯವನ್ನು ಸಂಬಂಧಿಸಿದವರನ್ನೇ ಕೇಳಬೇಕು,” ಎಂದು ಉತ್ತರಿಸಿದರು. ಉಪಚುನಾವಣೆ ಕುರಿತು ವಿಶ್ವಾಸ ವ್ಯಕ್ತಪಡಿಸಿದ ಅವರು, “ಎರಡು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ,” ಎಂದು ಹೇಳಿದರು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಖರ್ಗೆ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ಆರೋಪ – ಬೆಂಗಳೂರಿನಲ್ಲಿ ದೂರು
ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ... ಓದನ್ನು ಮುಂದುವರಿಸಿ
ನೀರಿನ ಬಿಲ್ ಪಾವತಿಗೆ ಸುವರ್ಣಾವಕಾಶ – ಬಡ್ಡಿ ಮನ್ನಾ ಘೋಷಣೆ
ಬೆಂಗಳೂರು: ನಗರದ ನೀರಿನ ಬಿಲ್ ಬಾಕಿದಾರರಿಗೆ ಬೆಂಗಳೂರು ನೀರು ಸರಬ... ಓದನ್ನು ಮುಂದುವರಿಸಿ
ಭಾಲ್ಕಿ
ಮನೆ ಸಮಾರಂಭದಲ್ಲಿ ಊಟ ಸೇವಿಸಿದವರಿಗೆ ಅನಾರೋಗ್ಯ – ಆಸ್ಪತ್ರೆಗೆ ದಾಖಲು - 40ಕ್ಕೂ ಹೆಚ್ಚು ಜನ ಅಸ್ವಸ್ಥ
ಬೀದರ್: ಜಿಲ್ಲೆಯ ಭಾಲ್ಕಿ ತಾಲೂಕಿನ ಜಾಂತಿ ಗ್ರಾಮದಲ್ಲಿ ಸಂಭವಿಸಿದ... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ನಾನು PCC ಅಧ್ಯಕ್ಷ – ಸಿಎಂ ವಿಚಾರದಲ್ಲಿ ನನ್ನ ಮಾತೇ ಅಂತಿಮ: ಡಿ.ಕೆ. ಶಿವಕುಮಾರ್
ಹುಬ್ಬಳ್ಳಿ: ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚ... ಓದನ್ನು ಮುಂದುವರಿಸಿ
ಬಿಜೆಪಾಕ್ಕೆ ಯತ್ನಾಳ್ ರೀ-ಎಂಟ್ರಿ? ವೇದಿಕೆ ಸಿದ್ಧ ಎಂದ ಜಾರಕಿಹೊಳಿ
ಬೆಳಗಾವಿ: ಮಾಜಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಶೀಘ್ರದಲ್ಲ... ಓದನ್ನು ಮುಂದುವರಿಸಿ
ಖಾಲಿ ಹುದ್ದೆಗಳ ಭರ್ತಿಗೆ ವಿದ್ಯಾರ್ಥಿಗಳ ಹೋರಾಟಕ್ಕೆ ಬ್ರೇಕ್!
ಧಾರವಾಡ: ವಿವಿಧ ಸರ್ಕಾರಿ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗ... ಓದನ್ನು ಮುಂದುವರಿಸಿ
ಮುಡಾ ಹಗರಣಕ್ಕೆ ಹೊಸ ತಿರುವು – ಹೈಕೋರ್ಟ್‌ಗೆ ಅರ್ಜಿ, ಮರುತನಿಖೆ ಬೇಡಿಕೆ!
ಮೈಸೂರು: ಮುಡಾ ಹಗರಣ ಪ್ರಕರಣದಲ್ಲಿ ಮತ್ತೆ ಮುಖ್ಯಮಂತ್ರಿ ಸಿದ್ದರಾ... ಓದನ್ನು ಮುಂದುವರಿಸಿ
ನರಸಿಂಹರಾಜಪುರ
ಹೊಳೆಗೆ ಹಾರಿ ನರ್ಸ್ ಆತ್ಮಹತ್ಯೆ – ಕಾರಣ ತಿಳಿಯದ ದುರ್ಘಟನೆ
ಚಿಕ್ಕಮಗಳೂರು: ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಮುತ್ತಿನಕೊಪ್... ಓದನ್ನು ಮುಂದುವರಿಸಿ
ಹಸುಗಳ ಶೆಡ್‌ಗೆ ಬೆಂಕಿ – 6 ಹಸುಗಳ ದಾರುಣ ಸಾವು, ವಾಹನಗಳಿಗೂ ಬೆಂಕಿ ಹಾನಿ
ಬೆಂಗಳೂರು: ನಗರದ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂಪುರ... ಓದನ್ನು ಮುಂದುವರಿಸಿ
ಹೆಲ್ಮೆಟ್ ಧರಿಸಿದ ಕಳ್ಳನ ದಾಳಿ – ಮನೆಗೆ ನುಗ್ಗಿ ಗ್ಯಾಸ್ ಸಿಲಿಂಡರ್ ಕಳವು!
ಬೆಂಗಳೂರು: ನಗರದ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಚಿತ... ಓದನ್ನು ಮುಂದುವರಿಸಿ