ಗುರುವಾರದ ರಾಶಿ ಭವಿಷ್ಯ – 12 ಮಾರ್ಚ್ 2026

ಮೇಷ ರಾಶಿ : ಇಂದು ಮಿತ್ರರಿಂದ ಧನ ಸಹಾಯ ದೊರೆಯುವ ಸಾಧ್ಯತೆ ಇದೆ. ಉನ್ನತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ ಸಾಧಿಸುವ ಯೋಗ ಕಂಡುಬರುತ್ತಿದ್ದು, ಪ್ರತಿಷ್ಠಿತ ಕಂಪನಿಯಲ್ಲಿ ಮಿತ್ರರ ಸಹಾಯದಿಂದ ಉದ್ಯೋಗ ಅವಕಾಶ ದೊರೆಯುವ ಸಾಧ್ಯತೆಯೂ ಇದೆ. ಕಿರುತೆರೆಯ ಲೇಖಕರು ಹಾಗೂ ನಿರ್ದೇಶಕರಿಗೆ ಬೆಳ್ಳಿ ತೆರೆಗೆ ಅವಕಾಶಗಳು ಸಿಗುವ ಸೂಚನೆಗಳಿವೆ. ಮಕ್ಕಳ ಮೂಲಕ ಧನಲಾಭ ಕಂಡುಬರಬಹುದು. ಹೋಟೆಲ್, ಬೇಕರಿ, ಸ್ವೀಟ್ ಮಾರ್ಟ್, ಕಾಂಡಿಮೆಂಟ್ಸ್ ಹಾಗೂ ಖಾನಾವಳಿ ವ್ಯವಹಾರ ನಡೆಸುವವರಿಗೆ ಹೆಚ್ಚಿನ ಆದಾಯದ ಅವಕಾಶ ಇದೆ. ಶಿಕ್ಷಕರು ಉನ್ನತಾಭ್ಯಾಸಕ್ಕಾಗಿ ಪೂರ್ವಸಿದ್ಧತೆ ಕೈಗೊಳ್ಳುವ ಸಾಧ್ಯತೆ ಇದೆ. ಸಾರ್ವಜನಿಕ ಸೇವೆಯಲ್ಲಿ ನಿರತರಾದವರಿಗೆ ಉತ್ತಮ ಆದಾಯ ಲಭಿಸಬಹುದು. ಟೂರಿಸ್ಟ್ ವಾಹನ ಮಾಲಕರಿಗೆ ಧನಲಾಭವಾಗುವ ಸೂಚನೆಗಳಿವೆ. ರಿಯಲ್ ಎಸ್ಟೇಟ್ ಉದ್ಯಮದಾರರಿಗೆ ಅನಿರೀಕ್ಷಿತ ಲಾಭ ದೊರೆಯುವ ಸಾಧ್ಯತೆ ಇದೆ. ಆದರೆ ಸರ್ಕಾರಿ ನೌಕರರು ಹಿರಿಯ ಅಧಿಕಾರಿಗಳ ಅವಕೃಪೆಗೆ ಗುರಿಯಾಗುವ ಸಂಭವವಿದೆ. ವಿದೇಶ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಸ್ವಲ್ಪ ಅಲೆದಾಟ ಹೆಚ್ಚಾಗಬಹುದು. ಹೈನುಗಾರಿಕೆ, ತೋಟಗಾರಿಕೆ ಹಾಗೂ ಕೃಷಿ ಕ್ಷೇತ್ರದಲ್ಲಿ ತೊಡಗಿರುವವರು ಉತ್ತಮ ಆದಾಯ ಗಳಿಸುವ ಅವಕಾಶವಿದೆ. ಪ್ರೇಮ ಸಂಬಂಧಗಳಲ್ಲಿ ಕೆಲವು ಕಹಿ ಘಟನೆಗಳು ಸಂಭವಿಸಿದರೂ ಪ್ರೇಮಪರ್ವ ಮುಂದುವರಿಯುವ ಸೂಚನೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಫಲಿತಾಂಶ ಕುರಿತು ಸ್ವಲ್ಪ ಅನುಮಾನಗಳಿರಬಹುದು. ತಾತ್ಕಾಲಿಕ ಶಿಕ್ಷಕರಿಗೆ ಶುಭಫಲಗಳು ದೊರೆಯುವ ಸಾಧ್ಯತೆ ಇದೆ. ನೀರು ಸರಬರಾಜು ಮಾಡುವ ಉದ್ಯಮದಲ್ಲಿರುವವರಿಗೆ ಧನಲಾಭವಾಗುವ ಸಾಧ್ಯತೆ ಇದೆ. ಆರೋಗ್ಯದ ವಿಚಾರದಲ್ಲಿ ಪದೇ ಪದೇ ಅಜೀರ್ಣದ ತೊಂದರೆ ಕಾಡುವ ಸಾಧ್ಯತೆ ಇರುವುದರಿಂದ ಆಹಾರದಲ್ಲಿ ಎಚ್ಚರಿಕೆ ವಹಿಸುವುದು ಒಳಿತು.

 

ವೃಷಭ ರಾಶಿ : ಇಂದು ವಜಾಗೊಂಡ ನೌಕರಿ ಸಂಬಂಧಿಸಿದ ವಿಷಯಗಳಲ್ಲಿ ಕಾನೂನು ಸಲಹೆ ಪಡೆಯುವ ಅಗತ್ಯ ಎದುರಾಗಬಹುದು. ಸ್ವಂತ ವ್ಯವಹಾರ ನಡೆಸುತ್ತಿರುವವರಿಗೆ ಲಾಭವು ಕೈವಶವಾಗುವ ಸೂಚನೆಗಳಿದ್ದು, ಆದಾಯದಲ್ಲಿ ಹೆಚ್ಚಳ ಕಂಡುಬರುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಲಿದೆ. ಮದುವೆ ಯೋಗವೂ ಕೂಡಿಬರುವ ಸಾಧ್ಯತೆ ಇದೆ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ಕಾಣಿಸಿಕೊಳ್ಳಬಹುದು. ಉದ್ಯೋಗ ಕ್ಷೇತ್ರದಲ್ಲಿ ಧನಲಾಭ ದೊರೆಯುವ ಸೂಚನೆಗಳಿದ್ದು, ಆಸ್ತಿ ಮಾರಾಟ ಅಥವಾ ಖರೀದಿ ಮಾಡುವ ಯೋಗವೂ ಸಂಭವಿಸಬಹುದು. ಉದ್ಯೋಗಿಗಳಿಗೆ ಇಚ್ಚಿಸಿದ ಸ್ಥಳಕ್ಕೆ ವರ್ಗಾವಣೆ ಆಗುವ ಸಾಧ್ಯತೆ ಇದೆ. ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಅನಾರೋಗ್ಯದ ಭಯದಿಂದ ಹೆಚ್ಚುವರಿ ಹಣ ವ್ಯಯವಾಗುವ ಸಂಭವವಿದೆ. ಮಧ್ಯಸ್ಥಿಕೆ ಮಾಡುವವರಿಂದ ಕುಟುಂಬದಲ್ಲಿ ಮಾನಸಿಕ ಕಿರಿಕಿರಿ ಉಂಟಾಗಬಹುದು. ಎದುರಾಳಿಗಳಿಂದ ಕೆಲಸಗಳಲ್ಲಿ ಅಡತಡೆ ಸಂಭವಿಸಬಹುದಾದ್ದರಿಂದ ಎಚ್ಚರಿಕೆ ಅಗತ್ಯ. ಕೋರ್ಟ್-ಕಚೇರಿ ಸಂಬಂಧಿತ ಕೆಲಸಗಳು ವಿಳಂಬವಾಗುವ ಸಾಧ್ಯತೆ ಇದೆ. ಸುಸಜ್ಜಿತ ಮನೆ ಅಥವಾ ಕಟ್ಟಡ ಖರೀದಿ ಮಾಡುವ ಯೋಗ ಕೂಡಿಬರಬಹುದು. ಅಧಿಕಾರಿಗಳಿಗೆ ಪ್ರಭಾವಶಾಲಿ ವ್ಯಕ್ತಿಗಳಿಂದ ಸ್ಥಾನಮಾನ ದೊರೆಯುವ ಸಾಧ್ಯತೆ ಇದೆ. ಆದರೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಕೆಲವು ತೊಂದರೆಗಳು ಎದುರಾಗಬಹುದು. ಬೇಕರಿ ಹಾಗೂ ಹೋಟೆಲ್ ವ್ಯಾಪಾರದಲ್ಲಿ ಸ್ವಲ್ಪ ನಷ್ಟ ಸಂಭವಿಸುವ ಸಾಧ್ಯತೆ ಇದೆ. ವಿದೇಶದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಸಿಹಿ ಸುದ್ದಿ ದೊರೆಯುವ ಸಾಧ್ಯತೆ ಇದೆ. ತಮ್ಮ ಭೂಮಿಯನ್ನು ನಿವೇಶನವಾಗಿ ಪರಿವರ್ತಿಸುವ ಯೋಗವೂ ಇದೆ. ಬಹುದಿನಗಳಿಂದ ಬಾಕಿ ಉಳಿದಿದ್ದ ಸಾಲವನ್ನು ಮರಳಿ ಪಡೆಯುವ ಸಾಧ್ಯತೆ ಇದೆ. ಕಡಿಮೆ ಬಂಡವಾಳ ಹೂಡಿಕೆ ಮಾಡಿದರೂ ಲಾಭ ಪಡೆಯುವ ಅವಕಾಶಗಳು ಕಂಡುಬರುತ್ತವೆ. ಆದರೆ ಸಾರಿಗೆ ಸಂಬಂಧಿತ ವ್ಯಾಪಾರದಲ್ಲಿ ಆರ್ಥಿಕ ನಷ್ಟ ಸಂಭವಿಸುವ ಸಾಧ್ಯತೆ ಇದೆ. ಸಾಲದ ಬಾಧೆಯ ಭಯವೂ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಹಣಕಾಸಿನ ವ್ಯವಹಾರಗಳಲ್ಲಿ ಜಾಗ್ರತೆ ವಹಿಸುವುದು ಒಳಿತು.

 

ಮಿಥುನ ರಾಶಿ : ಇಂದು ಕೈಕೆಳಗಿನ ನೌಕರರಿಂದ ಕೆಲವು ತೊಂದರೆಗಳು ಎದುರಾಗುವ ಸಾಧ್ಯತೆ ಇದೆ. ಜೀವ ವಿಮೆ ಸಲಹೆಗಾರರಿಗೆ ಬಡ್ತಿ ಅಥವಾ ಹೊಸ ಅವಕಾಶಗಳು ದೊರೆಯುವ ಸೂಚನೆಗಳಿವೆ. ಗರಡಿ, ಕರಾಟೆ, ಯೋಗ ಹಾಗೂ ಪ್ರಾಣಾಯಾಮ ತರಬೇತುಗಾರರು ತಮ್ಮ ಕ್ಷೇತ್ರದಲ್ಲಿ ಪ್ರಮುಖ ಸ್ಥಾನವನ್ನು ಅಲಂಕರಿಸುವ ಸಾಧ್ಯತೆ ಇದೆ. ತಾವು ಪ್ರಾರಂಭಿಸಿರುವ ಸಂಸ್ಥೆಯನ್ನು ಮಾರಾಟ ಮಾಡಬೇಕೋ ಬೇಡವೋ ಎಂಬ ವಿಚಾರದಲ್ಲಿ ಮನಸ್ಸಿನಲ್ಲಿ ಚಿಂತೆ ಕಾಡಬಹುದು. ವಿದ್ಯುತ್ ಉಪಕರಣಗಳ ಆಮದು-ರಫ್ತು ವ್ಯಾಪಾರದಲ್ಲಿ ಲಾಭದ ಸೂಚನೆಗಳಿವೆ. ಸಂಗೀತ ಮತ್ತು ನಾಟ್ಯ ಕಲಾವಿದರು ಅತ್ಯುನ್ನತ ಸ್ಥಾನವನ್ನು ಗಳಿಸುವ ಸಾಧ್ಯತೆ ಇದ್ದು, ಅವರ ಪ್ರತಿಭೆಗೆ ಹೆಚ್ಚಿನ ಬೇಡಿಕೆ ಕಾಣಿಸಿಕೊಳ್ಳಲಿದೆ. ರಾಜಕೀಯ ಕ್ಷೇತ್ರದಲ್ಲಿರುವವರು ಮಾಡದ ತಪ್ಪಿಗೂ ಕ್ಷಮೆಯಾಚಿಸಬೇಕಾದ ಪರಿಸ್ಥಿತಿ ಎದುರಾಗಬಹುದು. ಅಧಿಕಾರ ಕಳೆದುಕೊಳ್ಳುವ ಸಾಧ್ಯತೆಯೂ ಕಂಡುಬರುತ್ತಿದ್ದು, ಹಿತೈಷಿಗಳಿಂದಲೇ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಉದ್ಯೋಗಸ್ಥರಿಗೆ ವಿವಾದಗಳು ಹೆಚ್ಚಾಗುವ ಸಾಧ್ಯತೆ ಇದೆ. ಆರೋಗ್ಯದ ವಿಚಾರದಲ್ಲಿ ಆಕಸ್ಮಿಕ ಏರುಪೇರು ಕಂಡುಬರಬಹುದು. ವಿಶೇಷವಾಗಿ ಬೆನ್ನು ಹಾಗೂ ಕಾಲುಗಳಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ. ಕೃಷಿ ಭೂಮಿ ಖರೀದಿಸುವ ಯೋಗ ಕೂಡಿಬರುವ ಸಾಧ್ಯತೆ ಇದೆ. ಸುಂದರವಾದ ಮನೆ ಕಟ್ಟುವ ಕನಸು ಸಾಕಾರವಾಗುವ ಸೂಚನೆಗಳಿವೆ. ಹಠ ಮತ್ತು ಧೈರ್ಯದಿಂದ ಹಲವಾರು ಸವಾಲುಗಳನ್ನು ಜಯಿಸುವಿರಿ. ಆದರೆ ಇಷ್ಟಪಟ್ಟ ಕೆಲವರು ದೂರವಾಗುವ ಸಾಧ್ಯತೆ ಇರುವುದರಿಂದ ಸಂಬಂಧಗಳನ್ನು ಕಾಪಾಡಿಕೊಳ್ಳಲು ಜಾಗ್ರತೆ ವಹಿಸುವುದು ಉತ್ತಮ.

 

ಕರ್ಕಾಟಕ ರಾಶಿ :ಇಂದು ನಿಮ್ಮ ಉದ್ದೇಶ ಉತ್ತಮವಾಗಿದ್ದರೂ ಕುಟುಂಬ ಸದಸ್ಯರಿಂದ ಕೆಲ ತೊಂದರೆಗಳು ಎದುರಾಗುವ ಸಾಧ್ಯತೆ ಇದೆ. ರೈತರ ಮಕ್ಕಳಿಗೆ ಶುಭಮಂಗಳ ಯೋಗ ಕಂಡುಬರುತ್ತಿದ್ದು, ಕುಟುಂಬದಲ್ಲಿ ಸಂತಸದ ಸುದ್ದಿ ಕೇಳಿಬರಬಹುದು. ಕುಟುಂಬದಲ್ಲಿ ಆಸ್ತಿ ಮತ್ತು ಹಣಕಾಸಿನ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆ ಇದೆ. ಉಪವೃತ್ತಿ ಅಥವಾ ಪಾರ್ಟ್‌ಟೈಮ್ ಆದಾಯದಿಂದ ಧನಲಾಭ ದೊರೆಯುವ ಸೂಚನೆಗಳಿವೆ. ಕಿರುತೆರೆಯ ಲೇಖಕರು ಹಾಗೂ ನಿರ್ದೇಶಕರಿಗೆ ಬೆಳ್ಳಿ ತೆರೆಗೆ ಅವಕಾಶಗಳು ಸಿಗುವ ಸಾಧ್ಯತೆ ಇದೆ. ಮಕ್ಕಳ ಮೂಲಕ ಧನಲಾಭ ದೊರೆಯಬಹುದು. ಹೋಟೆಲ್, ಬೇಕರಿ, ಸ್ವೀಟ್ ಮಾರ್ಟ್, ಕಾಂಡಿಮೆಂಟ್ಸ್ ಹಾಗೂ ಖಾನಾವಳಿ ವ್ಯಾಪಾರದಲ್ಲಿ ತೊಡಗಿರುವವರಿಗೆ ಉತ್ತಮ ಆದಾಯ ದೊರೆಯುವ ಸಾಧ್ಯತೆ ಇದೆ. ಶಿಕ್ಷಕರು ಉನ್ನತಾಭ್ಯಾಸಕ್ಕಾಗಿ ಪೂರ್ವಸಿದ್ಧತೆ ಕೈಗೊಳ್ಳುವ ಸಾಧ್ಯತೆ ಇದೆ. ಸಾರ್ವಜನಿಕ ಸೇವೆಯಲ್ಲಿ ನಿರತರಾದವರಿಗೆ ಉತ್ತಮ ಆದಾಯ ಲಭಿಸಬಹುದು. ಟೂರಿಸ್ಟ್ ವಾಹನ ನಡೆಸುವ ಮಾಲಕರಿಗೆ ಧನಲಾಭವಾಗುವ ಸೂಚನೆಗಳಿವೆ. ಆದರೆ ಭೂ ವಿವಾದಗಳಿಂದ ಮನಸ್ಸಿಗೆ ಚಿಂತೆ ಉಂಟಾಗಿ ನಿದ್ರೆ ಕೆಡುವ ಸಾಧ್ಯತೆ ಇದೆ. ಪಾಲುಗಾರಿಕೆ ವ್ಯಾಪಾರ ಆರಂಭಿಸುವುದು ಸೂಕ್ತವಲ್ಲ, ನಷ್ಟ ಸಂಭವಿಸುವ ಸಾಧ್ಯತೆ ಇದೆ. ನಷ್ಟ ಅನುಭವಿಸುತ್ತಿರುವ ಕಂಪನಿಯನ್ನು ಖರೀದಿಸಿ ಪುನರಾರಂಭ ಮಾಡುವ ಯೋಚನೆಗಳು ಮೂಡಬಹುದು. ಮಹಿಳಾ ಉದ್ಯಮಿಗಳಿಗೆ ಶುಭದಾಯಕ ಕಾಲವಾಗಿದ್ದು, ಹಣಕಾಸು ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಆದಾಯ ದೊರೆಯುವ ಸಾಧ್ಯತೆ ಇದೆ.

 

ಸಿಂಹ ರಾಶಿ : ಇಂದು ಸಂಗಾತಿಯೊಂದಿಗೆ ಸಮತೋಲನ ಕಾಪಾಡಿಕೊಳ್ಳುವುದು ಅಗತ್ಯ. ಸರಕು ಸಾಗಾಣಿಕೆ ಹಾಗೂ ಸಾರಿಗೆ ವ್ಯವಸ್ಥೆಯಲ್ಲಿ ತೊಡಗಿರುವವರಿಗೆ ಆದಾಯದಲ್ಲಿ ದ್ವಿಗುಣ ಹೆಚ್ಚಳ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಕೃಷಿ ಜಮೀನು ಅಥವಾ ಮನೆ ಖರೀದಿಸುವ ಯೋಗ ಕೂಡಿಬರಬಹುದು. ಕೈಗೆತ್ತಿಕೊಂಡ ಕೆಲಸಗಳು ತಡವಾದರೂ ಕೊನೆಗೆ ಯಶಸ್ಸು ಸಿಗಲಿದೆ. ಆದಾಯ ಉತ್ತಮವಾಗಿದ್ದರೂ ಹಣಕಾಸಿನ ಕೊರತೆ ಎದುರಾಗುವ ಸಾಧ್ಯತೆ ಇರುವುದರಿಂದ ಖರ್ಚಿನಲ್ಲಿ ಎಚ್ಚರಿಕೆ ಅಗತ್ಯ. ಬುದ್ಧಿವಂತಿಕೆಯ ಮಾತು ಮತ್ತು ಚಾತುರ್ಯದಿಂದ ನಿಮ್ಮ ಕೆಲಸಗಳನ್ನು ಸಾಧಿಸಿಕೊಳ್ಳುವಿರಿ. ವಾದ-ವಿವಾದಗಳನ್ನು ದೂರವಿಡುವುದು ಒಳಿತು. ಹಳೆಯ ಸಂಗಾತಿಗೆ ಆರ್ಥಿಕ ಸಂಕಷ್ಟದಿಂದ ಹೊರಬರಲು ನೀವು ಸಹಾಯ ಮಾಡುವ ಸಾಧ್ಯತೆ ಇದೆ. ನಿಮ್ಮ ಪ್ರೀತಿಯ ಸಂಗಾತಿಗೆ ಶಾಶ್ವತ ಪರಿಹಾರ ನೀಡುವಲ್ಲಿ ಯಶಸ್ವಿಯಾಗುವಿರಿ. ಆಪ್ತ ಸಂಬಂಧಿಕರ ಬೆಂಬಲದಿಂದ ಹೊಸ ಉದ್ಯಮ ಆರಂಭಿಸುವ ಯೋಗ ಇದ್ದು, ಈ ವ್ಯವಹಾರದಲ್ಲಿ ಧನಲಾಭವೂ ಕಂಡುಬರುತ್ತದೆ. ಒತ್ತಡದ ಕೆಲಸಗಳ ನಡುವೆ ಕುಟುಂಬವನ್ನು ಮರೆಯದಿರಿ. ಪತ್ನಿಯ ಕಷ್ಟ-ಸುಖಗಳನ್ನು ಅರಿತುಕೊಳ್ಳುವುದು ಮುಖ್ಯ. ಕೆಲವರಿಗೆ ಹಣಕಾಸಿನ ಸಮಸ್ಯೆಗಳು ಎದುರಾಗಬಹುದು; ಇಂತಹ ಸಂದರ್ಭಗಳಲ್ಲಿ ತಾಯಿ-ತಂದೆಯ ಸಲಹೆ ಸಹಾಯಕವಾಗಲಿದೆ. ಮಧ್ಯಸ್ಥಿಕೆ ವಹಿಸಿದ ಹಣದಿಂದ ತೊಂದರೆ ಎದುರಾಗುವ ಸಾಧ್ಯತೆ ಇದೆ. ಪ್ರೀತಿ-ಪ್ರೇಮ ಸಂಬಂಧಗಳು ಕೆಲವೊಮ್ಮೆ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುವ ಸಾಧ್ಯತೆ ಇದೆ. ಹಳೆಯ ಸಂಗಾತಿಯೊಂದಿಗೆ ಪುನರ್ಮಿಲನದ ಅವಕಾಶ ಕೂಡ ಕಂಡುಬರುತ್ತದೆ. ಮಾರಾಟ ಪ್ರತಿನಿಧಿಗಳಿಗೆ ಹಾಗೂ ಗೃಹ ಸಂಬಂಧಿತ ವ್ಯವಹಾರಗಳಲ್ಲಿ ನಿರತರಾದವರಿಗೆ ಹೆಚ್ಚಿನ ಧನಲಾಭ ದೊರೆಯಬಹುದು. ಗೃಹ ಕೈಗಾರಿಕೆಯಲ್ಲಿ ತೊಡಗಿರುವ ಗೃಹಿಣಿಯರು ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ನೂತನ ವ್ಯಾಪಾರ ಅಥವಾ ಸಂಸ್ಥೆ ಪ್ರಾರಂಭಿಸುವ ಯೋಗ ಇದ್ದು, ಪಾಲುಗಾರಿಕೆ ವ್ಯಾಪಾರವೂ ಮುಂದುವರಿಯುವ ಸಾಧ್ಯತೆ ಇದೆ.

 

ಕನ್ಯಾ ರಾಶಿ : ಇಂದು ಅಸೂಯೆಪಡುವ ಸಹೋದ್ಯೋಗಿಗಳ ಜೊತೆ ಕೆಲಸ ನಿರ್ವಹಿಸುವ ಅನಿವಾರ್ಯತೆ ಎದುರಾಗಬಹುದು. ಆದ್ದರಿಂದ ಶಾಂತಿ ಮತ್ತು ಸಹನಶೀಲತೆಯಿಂದ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವುದು ಅಗತ್ಯ. ನಿಮ್ಮ ತಂಟೆಗೆ ಬಾರದಂತೆ ಸಮತೋಲನದಿಂದ ನಡೆದುಕೊಳ್ಳುವುದು ಉತ್ತಮ. ರಾಜಕೀಯ ಪ್ರವೇಶಕ್ಕೆ ಇದು ಸೂಕ್ತ ಸಮಯವಲ್ಲದಿದ್ದರೂ ಸಮಾಜದಲ್ಲಿ ಗೌರವಿತ ಸ್ಥಾನಮಾನ ಗಳಿಸುವ ಸಾಧ್ಯತೆ ಇದೆ. ಖರ್ಚುಗಳು ಹೆಚ್ಚಾದರೂ ಹಣ ಸಂಪಾದನೆ ಕೂಡ ನಡೆಯಲಿದೆ. ಮಕ್ಕಳಿಗೆ ಉದ್ಯೋಗ ದೊರೆಯುವ ಶುಭ ಸೂಚನೆಗಳಿವೆ. ಮಕ್ಕಳ ಅನುಮತಿ ಪಡೆದು ಅವರ ಮದುವೆ ವಿಚಾರವಾಗಿ ಚರ್ಚೆ ಮಾಡುವ ಸಂದರ್ಭ ಎದುರಾಗಬಹುದು. ಕಿರುತೆರೆಯ ಲೇಖಕರು ಹಾಗೂ ನಿರ್ದೇಶಕರಿಗೆ ಬೆಳ್ಳಿ ತೆರೆಗೆ ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ಮಕ್ಕಳ ಮೂಲಕ ಧನಲಾಭ ಕೂಡ ಕಂಡುಬರಬಹುದು. ಹೋಟೆಲ್, ಬೇಕರಿ, ಸ್ವೀಟ್ ಮಾರ್ಟ್, ಕಾಂಡಿಮೆಂಟ್ಸ್ ಹಾಗೂ ಖಾನಾವಳಿ ವ್ಯಾಪಾರ ನಡೆಸುವವರಿಗೆ ಹೆಚ್ಚಿನ ಆದಾಯದ ಸಾಧ್ಯತೆ ಇದೆ. ಶಿಕ್ಷಕರು ಉನ್ನತಾಭ್ಯಾಸಕ್ಕಾಗಿ ಪೂರ್ವಸಿದ್ಧತೆ ಕೈಗೊಳ್ಳಬಹುದು. ಸಾರ್ವಜನಿಕ ಸೇವೆಯಲ್ಲಿ ನಿರತರಾದವರಿಗೆ ಉತ್ತಮ ಆದಾಯ ದೊರೆಯುವ ಸಾಧ್ಯತೆ ಇದೆ. ಟೂರಿಸ್ಟ್ ವಾಹನ ನಡೆಸುವ ಮಾಲಕರಿಗೂ ಧನಲಾಭದ ಯೋಗವಿದೆ. ಟ್ರಾನ್ಸ್‌ಪೋರ್ಟ್ ವ್ಯಾಪಾರದಲ್ಲಿ ತಕ್ಕಮಟ್ಟಿಗೆ ಲಾಭ ಕಂಡುಬರಬಹುದು. ಡೈರಿ ಉತ್ಪನ್ನಗಳ ಮಾರಾಟ ಅಥವಾ ಸರಬರಾಜು ಮಾಡುವವರಿಗೆ ಉತ್ತಮ ಆದಾಯ ದೊರೆಯುವ ಸಾಧ್ಯತೆ ಇದೆ. ವಿದ್ಯಾಭ್ಯಾಸಕ್ಕಾಗಿ ವಿದೇಶ ಪ್ರಯಾಣದ ಅವಕಾಶಗಳು ದೊರೆಯಬಹುದು. ಕೃಷಿ ಭೂಮಿ ಮಾರಾಟ ಮಾಡಲು ಇಚ್ಛಿಸುವವರಿಗೆ ಸೂಕ್ತ ಅವಕಾಶ ಸಿಗುವ ಸಾಧ್ಯತೆ ಇದೆ. ಆರೋಗ್ಯದ ವಿಚಾರದಲ್ಲಿ ಕಣ್ಣು ಹಾಗೂ ಕಿವಿ ನೋವು ಕಂಡುಬರುವ ಸಾಧ್ಯತೆ ಇರುವುದರಿಂದ ವೈದ್ಯರ ಸಲಹೆ ಪಡೆಯುವುದು ಒಳಿತು.

 

ತುಲಾ ರಾಶಿ ; ಇಂದು ವ್ಯಾಪಾರದಲ್ಲಿ ಉದ್ವೇಗಕ್ಕೆ ಒಳಗಾಗದೆ ಶಾಂತಿಯಿಂದ ವಹಿವಾಟು ನಡೆಸುವುದು ಉತ್ತಮ. ದಿನನಿತ್ಯ ಬಳಕೆಯ ಸಾಮಗ್ರಿಗಳಾದ ಕಿರಾಣಿ ವ್ಯಾಪಾರಿಗಳಿಗೆ ಉತ್ತಮ ಲಾಭದ ಸೂಚನೆಗಳಿವೆ. ಉದ್ಯೋಗ ಕ್ಷೇತ್ರದಲ್ಲಿ ಪದೇ ಪದೇ ತೀರ್ಮಾನಗಳನ್ನು ಬದಲಾಯಿಸುವ ಪರಿಸ್ಥಿತಿ ತೊಂದರೆ ಉಂಟುಮಾಡಬಹುದು, ಆದರೆ ಒಟ್ಟಾರೆ ಉದ್ಯೋಗದಲ್ಲಿ ಪ್ರಗತಿ ಹಾಗೂ ಸ್ಥಾನಮಾನ ದೊರೆಯುವ ಸಾಧ್ಯತೆ ಇದೆ. ಪತ್ನಿಯೊಂದಿಗೆ ಅನಾವಶ್ಯಕ ವಿರಸ ಉಂಟಾಗುವ ಸಾಧ್ಯತೆ ಇರುವುದರಿಂದ ಮಾತಿನಲ್ಲಿ ಜಾಗ್ರತೆ ವಹಿಸುವುದು ಉತ್ತಮ. ಆಭರಣ ವ್ಯಾಪಾರಿಗಳಿಗೆ ಪ್ರಗತಿ ಕಂಡುಬರಬಹುದು. ಕಂಪ್ಯೂಟರ್ ಮತ್ತು ಬಿಡಿ ಭಾಗಗಳ ವ್ಯಾಪಾರಿಗಳಿಗೆ ಸ್ವಲ್ಪ ಮಂದಗತಿ ಎದುರಾಗುವ ಸಾಧ್ಯತೆ ಇದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುವ ಸಾಧ್ಯತೆ ಇದೆ. ಪ್ರೇಮ ಪ್ರಕರಣಗಳು ಬಹಿರಂಗವಾಗುವ ಸಾಧ್ಯತೆ ಇದೆ. ಭೂಮಿ ಸಂಬಂಧಿತ ವ್ಯಾಜ್ಯಗಳಲ್ಲಿ ಜಯ ದೊರೆಯಬಹುದು. ಉದ್ಯೋಗಸ್ಥರಿಗೆ ಇಚ್ಛಿಸಿದ ಸ್ಥಳಕ್ಕೆ ವರ್ಗಾವಣೆ ಆಗುವ ಯೋಗವಿದೆ. ಶತ್ರುಗಳ ಮೇಲೆ ಜಯ ಸಾಧಿಸುವಿರಿ. ವಾಹನ ಖರೀದಿಸುವ ಅವಕಾಶ ಕೂಡಿಬರುವ ಸಾಧ್ಯತೆ ಇದೆ. ಕುಟುಂಬದಲ್ಲಿ ಪ್ರೀತಿ ಮತ್ತು ಸಾಮರಸ್ಯ ಉಳಿಯುತ್ತದೆ. ಹಿತಶತ್ರುಗಳಿಂದ ಕಿರಿಕಿರಿ ಹೆಚ್ಚಾಗಬಹುದು. ಮಕ್ಕಳ ಬಗ್ಗೆ ಚಿಂತೆ ಉಂಟಾಗುವ ಸಾಧ್ಯತೆ ಇದೆ. ವಿವಾಹ ಸಂಬಂಧಿತ ವಿಚಾರಗಳಲ್ಲಿ ಅಡೆತಡೆ ಎದುರಾಗಬಹುದು. ಸ್ತ್ರೀ ಮೂಲದಿಂದ ಧನಾಗಮನವಾಗುವ ಸೂಚನೆಗಳಿವೆ. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ. ವಿದೇಶ ಪ್ರವಾಸ ಅಥವಾ ವಿದೇಶದಲ್ಲಿ ನೆಲೆಸುವ ಕನಸು ಸಾಕಾರವಾಗುವ ಸಾಧ್ಯತೆ ಇದೆ. ಆದರೆ ಸಾಲಬಾಧೆ ಹೆಚ್ಚಾಗುವ ಸಾಧ್ಯತೆ ಇದೆ. ಕಾನೂನು ಸಂಬಂಧಿತ ವಿಷಯಗಳಲ್ಲಿ ಕಿರಿಕಿರಿ ಎದುರಾಗಬಹುದು. ಕೆಲವರಿಗೆ ವ್ಯಾಪಾರದಲ್ಲಿ ನಷ್ಟ ಸಂಭವಿಸುವ ಸಾಧ್ಯತೆ ಇದೆ. ಸ್ತ್ರೀಪಕ್ಷದಿಂದ ಕೆಲ ಸಮಸ್ಯೆಗಳು ಎದುರಾಗಬಹುದು. ಮಕ್ಕಳಿಂದ ಮಾನಹಾನಿ ಸಂಭವಿಸುವ ಸಾಧ್ಯತೆ ಇರುವುದರಿಂದ ಜಾಗ್ರತೆ ಅಗತ್ಯ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಒಂದು ಪ್ರಮುಖ ಸಂತೋಷದ ಸುದ್ದಿ ದೊರೆಯುವ ಸಾಧ್ಯತೆ ಇದೆ. ಗೃಹಿಣಿಯರು ಅಡುಗೆ ಕೆಲಸ ಮಾಡುವ ವೇಳೆ ಎಚ್ಚರಿಕೆ ವಹಿಸಬೇಕು. ಸರ್ಕಾರದ ಅಧೀನದಲ್ಲಿರುವ ವ್ಯಾಪಾರ ವ್ಯವಹಾರಗಳು ಲಾಭದಾಯಕವಾಗಬಹುದು. ಮಹಿಳಾ ವೈದ್ಯರಿಗೆ ಅಧ್ಯಯನಕ್ಕಾಗಿ ವಿದೇಶ ಪ್ರವಾಸದ ಅವಕಾಶ ದೊರೆಯಬಹುದು.

ಸಗಟು ವ್ಯಾಪಾರಸ್ಥರು ಕೆಲವು ದೊಡ್ಡ ಸವಾಲುಗಳನ್ನು ಎದುರಿಸಬೇಕಾಗಬಹುದು. ಬಟ್ಟೆ ತಯಾರಿಕೆ ಕ್ಷೇತ್ರದಲ್ಲಿ ತೊಡಗಿರುವವರಿಗೆ ಶುಭದಾಯಕ ಕಾಲವಾಗಿದ್ದು, ಷೇರು ಮಾರುಕಟ್ಟೆ ವ್ಯವಹಾರದಿಂದ ದೂರ ಇರುವುದೇ ಒಳಿತು.

 

 

ವೃಶ್ಚಿಕ ರಾಶಿ :ಇಂದು ಉದ್ಯೋಗ ಕ್ಷೇತ್ರದಲ್ಲಿ ಮೇಲಾಧಿಕಾರಿಗಳು ನಿಮ್ಮ ಕೆಲಸದಲ್ಲಿ ಕಂಡುಬರುವ ಲೋಪದೋಷಗಳ ಬಗ್ಗೆ ಪದೇಪದೇ ಪ್ರಶ್ನಿಸುವ ಸಾಧ್ಯತೆ ಇದೆ. ಆದರೂ ನಿಮ್ಮ ಪರಿಶ್ರಮದಿಂದ ಉದ್ಯೋಗದಲ್ಲಿ ಉನ್ನತ ಮಟ್ಟವನ್ನು ತಲುಪುವ ಅವಕಾಶಗಳು ಕಂಡುಬರುತ್ತವೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿರುವವರಿಗೆ ಉತ್ತಮ ಲಾಭ ದೊರೆಯುವ ಸಾಧ್ಯತೆ ಇದೆ. ಬಹುಕಾಲದಿಂದ ಹೊಂದಿದ್ದ ಪ್ರೀತಿಯ ಕನಸು ಇಂದು ನನಸಾಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಉತ್ತಮ ಲಾಭ ಗಳಿಸುವ ಅವಕಾಶಗಳಿವೆ. ಆದರೆ ಪ್ರಿಯತಮೆಯೊಂದಿಗೆ ವಾದಗಳಿಗೆ ಕಾರಣವಾಗುವ ಸಾಧ್ಯತೆ ಇರುವುದರಿಂದ ಮಾತಿನಲ್ಲಿ ಜಾಗ್ರತೆ ವಹಿಸುವುದು ಒಳಿತು. ವಿವಾದಾತ್ಮಕ ವಿಷಯಗಳ ಬಗ್ಗೆ ಚರ್ಚೆ ಮಾಡುವುದನ್ನು ತಪ್ಪಿಸುವುದು ಉತ್ತಮ. ಪತ್ನಿಯ ಸಹಾಯವನ್ನು ಗೌರವದಿಂದ ಸ್ವೀಕರಿಸಿದರೆ ಕುಟುಂಬ ಜೀವನ ಸುಖಕರವಾಗಿರುತ್ತದೆ. ಉದ್ಯೋಗ ಸಮಸ್ಯೆಗಳನ್ನು ನಿವಾರಿಸಲು ಹಣಕಾಸು ಸಹಾಯ ನೀಡುವ ಮನೋಭಾವ ನಿಮ್ಮಲ್ಲಿ ಕಾಣಿಸಿಕೊಳ್ಳಬಹುದು. ಸಾಮಾಜಿಕ ಸಮಾರಂಭಗಳಲ್ಲಿ ಭಾಗವಹಿಸುವುದರಿಂದ ಪ್ರಭಾವಿ ವ್ಯಕ್ತಿಗಳೊಂದಿಗೆ ಬಾಂಧವ್ಯ ಹೆಚ್ಚಾಗುವ ಸಾಧ್ಯತೆ ಇದೆ. ವಿದೇಶದಲ್ಲಿ ವ್ಯಾಪಾರ ಆರಂಭಿಸಲು ಹಣಕಾಸಿನ ಲಾಭ ದೊರೆಯುವ ಸಾಧ್ಯತೆ ಇದೆ. ಸಂಗಾತಿಯ ಸೇವೆಯನ್ನು ನಿರ್ಲಕ್ಷಿಸಿದರೆ ಮನಶಾಂತಿಗೆ ಭಂಗ ಉಂಟಾಗಬಹುದು. ಅಜ್ಞಾತ ಮೂಲಗಳಿಂದ ಹಣ ದೊರೆಯುವ ಸಾಧ್ಯತೆ ಇರುವುದರಿಂದ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಬಹುದು. ನಿಮ್ಮ ಸಂಗಾತಿಯ ಮನಸ್ಸು ತುಂಬಾ ಮುಗ್ಧವಾಗಿರುವುದರಿಂದ ಅವರ ಭಾವನೆಗಳಿಗೆ ಧಕ್ಕೆಯಾಗದಂತೆ ನಡೆದುಕೊಳ್ಳುವುದು ಉತ್ತಮ. ಪಿತ್ರಾರ್ಜಿತ ಸ್ವಗ್ರಹ ಅಥವಾ ಭೂಮಿ ದೊರೆಯುವ ಸಾಧ್ಯತೆ ಇದೆ. ಜೊತೆಗೆ ದೊಡ್ಡ ಸಂಸ್ಥೆಯಲ್ಲಿ ಉದ್ಯೋಗ ಅವಕಾಶ ದೊರೆಯುವ ಯೋಗವೂ ಕಾಣಿಸುತ್ತದೆ.

 

ಧನಸ್ಸು ರಾಶಿ : ಇಂದು ದೈವಾನುಗ್ರಹದಿಂದ ಸಂತಾನ ಫಲ ದೊರೆಯುವ ಸಾಧ್ಯತೆ ಇದೆ. ಮನೆಯಲ್ಲಿ ಸಂತೋಷ ಮತ್ತು ಸಡಗರದ ವಾತಾವರಣ ನಿರ್ಮಾಣವಾಗಲಿದೆ. ಗುತ್ತಿಗೆದಾರರ ಕೆಲಸಗಳು ವೇಗವಾಗಿ ಸಾಗುವ ಸೂಚನೆಗಳಿದ್ದು, ಸಿದ್ಧ ಉಡುಪು ತಯಾರಿಕಾ ಘಟಕ ಆರಂಭಿಸುವ ಯೋಗವೂ ಕಂಡುಬರುತ್ತದೆ. ಸಾರ್ವಜನಿಕ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಅಧಿಕ ಪ್ರಸಂಗದಿಂದ ಜನರಿಂದ ಕೆಲ ತೊಂದರೆಗಳು ಎದುರಾಗಬಹುದು. ಎದುರಾಳಿಗಳು ನಿಮ್ಮನ್ನು ಹಿಂಸಿಸಲು ಪ್ರಯತ್ನಿಸುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ನಡೆದುಕೊಳ್ಳುವುದು ಅಗತ್ಯ. ವ್ಯಾಪಾರಿಗಳಿಗೆ ಶುಭಫಲಗಳು ಕಂಡುಬರುವ ಸಾಧ್ಯತೆ ಇದೆ. ಉದ್ಯೋಗವಿಲ್ಲದವರಿಗೆ ಉದ್ಯೋಗ ದೊರೆಯುವ ಅವಕಾಶಗಳು ಕಾಣಿಸಿಕೊಳ್ಳುತ್ತವೆ. ಭೂಮಿ ಸಂಬಂಧಿತ ಸಮಸ್ಯೆಗಳು ನಿವಾರಣೆಯಾಗುವ ಸಾಧ್ಯತೆ ಇದೆ. ಕೋರ್ಟ್-ಕಚೇರಿ ಕೆಲಸಗಳಲ್ಲಿ ಜಯ ದೊರೆಯಬಹುದು. ವಾಹನ ಖರೀದಿಸುವ ಯೋಗವಿದ್ದು, ವಿದೇಶ ಪ್ರವಾಸದ ಪ್ರಯತ್ನಗಳು ಚುರುಕುಗೊಳ್ಳಬಹುದು. ಹಿಂದೆ ಮಾಡಿದ ಹಣದ ಹೂಡಿಕೆಗಳಿಂದ ಉತ್ತಮ ಲಾಭ ದೊರೆಯುವ ಸಾಧ್ಯತೆ ಇದೆ. ಭವ್ಯ ಮನೆ ಅಥವಾ ಬಂಗ್ಲೆಯಲ್ಲಿ ವಾಸಿಸುವ ಅವಕಾಶ ಕೂಡಿಬರಬಹುದು. ನಿಮ್ಮ ಸುತ್ತಲಿನ ಜನರು ನಿಮ್ಮ ಬಗ್ಗೆ ಪಿಸುಮಾತು ಆಡಿದರೂ ಅದನ್ನು ಗಮನಿಸದೆ ನಿಮ್ಮ ಕೆಲಸದಲ್ಲಿ ಗಮನ ಹರಿಸುವುದು ಉತ್ತಮ. ನೌಕರದಾರರಿಗೆ ಅಧಿಕಾರಿಗಳಿಂದ ಶುಭವಾರ್ತೆ ದೊರೆಯಬಹುದು. ಇಚ್ಚಿಸಿದ ಕಾರ್ಯಗಳು ಕೈಗೂಡುವ ಸಮಯ ಇದಾಗಿರುತ್ತದೆ. ಖಾಸಗಿ ಉದ್ಯೋಗಸ್ಥರಿಗೆ ಅನಿರೀಕ್ಷಿತ ಪ್ರಗತಿ ಸಾಧ್ಯ. ಪ್ರೇಮ ಪ್ರಕರಣಗಳಲ್ಲಿ ಹೊಸ ತಿರುವುಗಳು ಕಂಡುಬರುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿದ ಧನಲಾಭ ದೊರೆಯಬಹುದು. ಕೆಲವರಿಗೆ ಪರಸ್ತ್ರೀ ಮೋಹ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ. ವಿವಾಹ ಯೋಗ ಕೂಡಿಬರುವ ಸಾಧ್ಯತೆ ಇದೆ. ದಂಪತಿಗಳಿಗೆ ಸಂತಾನ ಭಾಗ್ಯ ದೊರೆಯಬಹುದು. ಮಾತಾ-ಪಿತೃಗಳಿಂದ ಧನ ಸಹಾಯ ದೊರೆಯುವ ಸೂಚನೆಗಳಿವೆ. ನವದಂಪತಿಗಳಲ್ಲಿ ಕೆಲವೊಮ್ಮೆ ವೈರಾಗ್ಯ ಭಾವನೆ ಹೆಚ್ಚಾಗಬಹುದು. ಗಣ್ಯ ವ್ಯಕ್ತಿಗಳ ಭೇಟಿ ಮೂಲಕ ಉದ್ಯೋಗದಲ್ಲಿ ಇಚ್ಛಿಸಿದ ಸ್ಥಳಕ್ಕೆ ವರ್ಗಾವಣೆ ಆಗುವ ಅವಕಾಶಗಳು ದೊರೆಯಬಹುದು. ಆದರೆ ಅನೈತಿಕ ಪ್ರೀತಿಯ ಕಡೆ ಹೆಚ್ಚು ಆಕರ್ಷಣೆಯಾಗದಂತೆ ಜಾಗ್ರತೆ ವಹಿಸುವುದು ಒಳಿತು.

 

ಮಕರ ರಾಶಿ : ಇಂದು ಮನೆಯಲ್ಲಿ ಮದುವೆಯ ಸಮಾಚಾರದಿಂದ ಸಂತಸದ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ. ನೀವು ಶ್ರದ್ಧೆಯಿಂದ ಕೈಗೊಂಡಿರುವ ಕೆಲಸಗಳಿಗೆ ಸಂಪೂರ್ಣ ಜವಾಬ್ದಾರಿ ಹೊತ್ತು ಯಶಸ್ಸು ಸಾಧಿಸುವ ಸಮಯ ಇದಾಗಿದೆ. ಟಿವಿ ನಿರೂಪಕರು ಮತ್ತು ಪತ್ರಿಕಾ ವರದಿಗಾರರಿಗೆ ಧನಲಾಭದ ಜೊತೆಗೆ ವೃತ್ತಿಯಲ್ಲಿ ಮುನ್ನಡೆ ಸಿಗುವ ಸಾಧ್ಯತೆ ಇದೆ. ಬಹು ಬೇಡಿಕೆಯ ವರದಿಗಾರರಾಗಿ ಗುರುತಿಸಿಕೊಳ್ಳುವ ಅವಕಾಶ ಕೂಡಿಬರಬಹುದು. ವಿವಾಹ ಆಕಾಂಕ್ಷೆ ಹೊಂದಿರುವವರಿಗೆ ಶುಭ ಸೂಚನೆಗಳಿದ್ದು, ಮಕ್ಕಳಿಂದ ನಿಮ್ಮ ಆಸೆಗಳು ಈಡೇರುವ ಸಾಧ್ಯತೆ ಇದೆ. ಉದ್ಯೋಗ ಕ್ಷೇತ್ರದಲ್ಲಿ ಸ್ವಯಂಕೃತ ತಪ್ಪಿನಿಂದ ಕೆಲವು ತೊಂದರೆಗಳು ಎದುರಾಗಬಹುದು. ಉದ್ಯೋಗ ಕಳೆದುಕೊಳ್ಳುವ ಭಯವೂ ಕಾಡುವ ಸಾಧ್ಯತೆ ಇದೆ. ಸರ್ಕಾರಿ ಮಧ್ಯವರ್ತಿಗಳಿಗೆ ಧನಲಾಭ ದೊರೆಯುವ ಸಾಧ್ಯತೆ ಇದೆ. ಸಂಗಾತಿಯಿಂದ ಧನ ಆಗಮನವಾಗುವ ಸೂಚನೆಗಳಿವೆ. ಪಾಲುದಾರಿಕೆಯಲ್ಲಿ ಕೆಲಸ ಮಾಡುವವರಿಗೆ ಹಾಗೂ ಮಾರಾಟಗಾರರಿಗೆ ಉತ್ತಮ ಆದಾಯ ದೊರೆಯಬಹುದು. ಉದ್ಯಮಿಗಳಿಗೆ ಲಾಭದಾಯಕ ಕಾಲವಾಗಿದ್ದು, ರಾಜಕಾರಣಿಗಳಿಗೆ ಸಹ ಶುಭದಾಯಕ ಸಮಯ ಕಂಡುಬರುತ್ತದೆ. ಆದರೆ ಕೌಟುಂಬಿಕ ಕಲಹಗಳು ಕೋರ್ಟ್ ಮೆಟ್ಟಿಲೇರಿಸುವ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ. ಉದ್ಯೋಗ ಕ್ಷೇತ್ರದಲ್ಲಿ ಶತ್ರುಗಳ ಕಾಟ ಹೆಚ್ಚಾಗುವ ಸಾಧ್ಯತೆ ಇದೆ. ಬಾಡಿ ಮಸಾಜ್, ಜಿಮ್, ಯೋಗಾಸನ ಹಾಗೂ ನಾಟಿ ವೈದ್ಯಕೀಯ ಕ್ಷೇತ್ರದಲ್ಲಿ ತೊಡಗಿರುವವರಿಗೆ ಹೆಚ್ಚಿನ ಬೇಡಿಕೆ ಕಂಡುಬರುತ್ತದೆ. ಪ್ರೇಮಿಗಳ ನಡುವೆ ಉಂಟಾಗುವ ವಿವಾದಗಳನ್ನು ರಾಜಿಮಾಡಿಕೊಳ್ಳುವುದು ಉತ್ತಮ. ಕೌಶಲ್ಯ ತರಬೇತಿಯಲ್ಲಿ ಉತ್ತೀರ್ಣರಾದವರಿಗೆ ಉದ್ಯೋಗ ದೊರೆಯುವ ಅವಕಾಶಗಳಿವೆ. ಅತ್ತೆ-ಸೊಸೆ ನಡುವೆ ಭಿನ್ನಾಭಿಪ್ರಾಯಗಳು ಮುಂದುವರಿಯುವ ಸಾಧ್ಯತೆ ಇರುವುದರಿಂದ ಅದಕ್ಕೆ ಕಡಿವಾಣ ಹಾಕುವುದು ಒಳಿತು. ಆಸ್ತಿ ವಿಚಾರಗಳಲ್ಲಿ ಮಧ್ಯಸ್ಥಿಕೆ ಮಾಡುವವರು ದಾರಿ ತಪ್ಪಿಸುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಒಂದು ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿ ಹೊಣೆಗಾರಿಕೆ ದೊರೆಯುವ ಸಾಧ್ಯತೆ ಇದೆ. ರಾಜಕಾರಣಿಗಳಿಗೆ ಶತ್ರು ಪೀಡೆ ಕಾಣಿಸಿಕೊಳ್ಳಬಹುದು. ನಂಬಿದವರಿಂದ ಉಡುಗೊರೆ ದೊರೆಯುವ ಸಾಧ್ಯತೆ ಇದೆ. ಸಂತಾನ ಸಂಬಂಧಿತ ವಿಚಾರಗಳು ಸಂತೋಷ ತರಬಹುದು. ಪತ್ರಿಕಾ ವರದಿಗಾರರಿಗೆ ಹೆಚ್ಚಿನ ವೇತನ ಸಿಗುವ ಸಾಧ್ಯತೆ ಇದ್ದು, ಉದ್ಯೋಗಿಗಳಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ.

 

ಕುಂಭ ರಾಶಿ : ಇಂದು ನಿಮ್ಮ ಜನ್ಮ ಕುಂಡಲಿಯನ್ನು ಪರಿಶೀಲಿಸುವ ಮೂಲಕ ಜಟಿಲ ಸಮಸ್ಯೆಗಳಿಗೆ ಪರಿಹಾರ ದೊರೆಯುವ ಸಾಧ್ಯತೆ ಇದೆ. ಉನ್ನತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ ಸಾಧಿಸುವ ಸೂಚನೆಗಳಿವೆ. ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳಿಗೆ ಕೆಲಸದಲ್ಲಿ ಸ್ವಲ್ಪ ಆಭದ್ರತೆ ಎದುರಾಗಬಹುದು. ವಸ್ತ್ರ ವಿನ್ಯಾಸಕಾರರಿಗೆ ಧನಲಾಭ ದೊರೆಯುವ ಸಾಧ್ಯತೆ ಇದೆ. ವಾದ-ವಿವಾದಗಳಲ್ಲಿ ಸೋಲು ಕಂಡುಬರುವ ಸಾಧ್ಯತೆ ಇರುವುದರಿಂದ ಮಾತಿನಲ್ಲಿ ಎಚ್ಚರಿಕೆ ಅಗತ್ಯ. ಅಧಿಕಾರಿಗಳ ಮುಂದೆ ಭಯದ ವಾತಾವರಣ ಉಂಟಾಗಬಹುದು. ಕಲಾವಿದರಿಗೆ ಸನ್ಮಾನ ದೊರೆಯಲಿದೆ. ಕೋರ್ಟ್ ವ್ಯವಹಾರಗಳಲ್ಲಿ ಜಯದ ಸಾಧ್ಯತೆ ಇದೆ. ಸರ್ಕಾರಿ ನೌಕರರು ತಮ್ಮ ಕೆಲಸದಲ್ಲಿ ಸ್ವಲ್ಪ ಅಭದ್ರತೆ ಅನುಭವಿಸಬಹುದು. ಪ್ರೇಮಿಗಳ ನಡುವೆ ಸಾಮರಸ್ಯ ಸೃಷ್ಟಿಯಾಗುವ ದಿನ. ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳಿಗೆ ಅನುಕೂಲದ ಸಮಯ. ಆರ್ಥಿಕ ಸಲಹೆಗಾರರಿಗೆ ಹೊಸ ಸಂಸ್ಥೆ ಪ್ರಾರಂಭ ಮಾಡುವ ಅವಕಾಶ ದೊರೆಯಲಿದೆ. ಇಂದು ಗಣ್ಯ ವ್ಯಕ್ತಿಯ ಭೇಟಿ ನಿಮ್ಮ ಕೆಲಸದ ಸಂಸ್ಥೆಗೆ ಹೊಸ ದಿಕ್ಕು ನೀಡಬಹುದು. ಪಾರ್ಶ್ವ ವಾಯು ರೋಗಿಗಳು ನಿಧಾನವಾಗಿ ಚೇತರಿಕೆ ಕಾಣಲಿದ್ದಾರೆ. ವಿದೇಶದಲ್ಲಿ ನೆಲೆಸಿರುವ ಕುಟುಂಬದಲ್ಲಿ ಸ್ವಲ್ಪ ಬಿರುಕು ಕಾಣಿಸಿಕೊಳ್ಳಬಹುದು. ಪಕ್ಷದ ನಿಷ್ಠಾವಂತ ಸೇವೆಯನ್ನು ಸಲ್ಲಿಸಿದವರಿಗೆ ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ಥಾನಕ್ಕೆ ನೇಮಕವಾಗುವ ಅವಕಾಶ ಇದೆ. ಕಿರುತೆರೆ ಮತ್ತು ಚಲನಚಿತ್ರ ನಿರ್ಮಾಪಕರಿಗೆ ಬಂಪರ್ ಡ್ರಾ ಸಾಧ್ಯತೆ ಇದೆ. ಛಾಯಾಗ್ರಹಕರಿಗೆ ಶುಭದಿನ, ದಿನಸಿ ವ್ಯಾಪಾರಿಗಳಿಗೆ ಹೊಸ ವ್ಯವಹಾರಕ್ಕಾಗಿ ಚಿಂತನೆ ಮಾಡುವ ಸಮಯ. ದಾಂಪತ್ಯದಲ್ಲಿ ಶೀಘ್ರ ಕೋಪದಿಂದ ಮನಸ್ಸ್ತಾಪ ಸಂಭವಿಸಬಹುದು. ನಿರೂಪಣೆ ಮತ್ತು ಪತ್ರಿಕಾ ವರದಿಗಾರರು ತಮ್ಮ ಕೆಲಸದ ಬಗ್ಗೆ ಜಾಗ್ರತೆಯಿರಬೇಕು. ಕಾಂಟ್ರಾಕ್ಟರ್‌ಗಳಿಗೆ ಹೊಸ ಟೆಂಡರ್ ಗಳಲ್ಲಿ ಭಾಗ್ಯ ಇದೆ. ಹಳೆಯ ಬಿಲ್ ಮರುಪಾವತಿಯಲ್ಲಿ ವಿಳಂಬ ಸಂಭವಿಸಬಹುದು. ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುವವರು ಅಲ್ಲಿಯೇ ಮುಂದುವರಿಯುವ ಯೋಗವಿದೆ. ನಿಶ್ಚಿತಾರ್ಥ ಆಗಬೇಕಿದ್ದ ಶುಭ ಕಾರ್ಯ ಈ ಸಮಯದಲ್ಲಿ ರದ್ದಾಗುವ ಸಾಧ್ಯತೆ ಇದೆ.

 

ಮೀನ ರಾಶಿ :  ಇಂದು ತಮ್ಮ ಕೌಶಲ್ಯಗಳನ್ನು ಉಪಯೋಗಿಸಿ ಉತ್ತಮ ಕೆಲಸಗಳಿಗೆ ತೊಡಗಿಕೊಳ್ಳುವ ಮೂಲಕ ಯಶಸ್ಸು ಪಡೆಯುವ ಅವಕಾಶವಿದೆ. ಕುಟುಂಬದಲ್ಲಿ ಕೆಲವರಿಗೆ ಕಿರಿಕಿರಿ ಕಾಣಿಸಬಹುದು, ಆದರೆ ಅದರಿಂದ ಅತಿಯಾದ ಚಿಂತೆ ಮಾಡಬೇಡಿ. ಅದಿರು ಉದ್ಯಮಗಾರರಿಗೆ ಶುಭದಾಯಕ ಸಮಯ. ಮೇಕಪ್ ವಸ್ತುಗಳ ಮಾರಾಟಗಾರರಿಗೆ ಹೆಚ್ಚಿನ ಲಾಭ ದೊರೆಯುವ ಸಾಧ್ಯತೆ ಇದೆ. ರಾಜಕಾರಣಿಗಳಿಗೆ ಶುಭ ಯೋಗ ಕಂಡುಬರುತ್ತದೆ. ಎಲೆಕ್ಟ್ರಾನಿಕ್ಸ್ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳಿಗೆ ನೌಕರಿ ದೊರೆಯಲಿದೆ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ತೊಡಗಿರುವವರಿಗೆ ಉತ್ತಮ ಆದಾಯ ದೊರೆಯುವ ಸೂಚನೆ ಇದೆ. ಮಧ್ಯವರ್ತಿಗಳು ಮತ್ತು ಪಾಲುದಾರಿಕೆಯಲ್ಲಿ ತೊಡಗಿರುವವರು ಧನಲಾಭ ಪಡೆಯುವ ಸಾಧ್ಯತೆ ಇದೆ. ನಂಬಿದವರಿಂದ ಧನ ಆಗಮನವೂ ಕಂಡುಬರುವುದಾಗಿದೆ. ಆಸ್ತಿ ವಿಚಾರದಲ್ಲಿ ಕೋರ್ಟ್ ಮೆಟ್ಟಿಲಿನಲ್ಲಿ ಸಂದರ್ಭಗಳು ಎದುರಾಗಬಹುದು.  ವಾಹನ ಮತ್ತು ಬಿಡಿ ಭಾಗ ಮಾರಾಟಗಾರರಿಗೆ ಅಧಿಕ ಲಾಭ ದೊರೆಯುವ ಸಾಧ್ಯತೆ ಇದೆ. ಅತ್ತೆ-ಸೊಸೆ ನಡುವೆ ಕಿರಿಕಿರಿ ಉಂಟಾಗಬಹುದು; ಇದರಿಂದ ಮನಸ್ಸು ಬೇಸರವಾಗದಂತೆ ಎಚ್ಚರಿಕೆ ವಹಿಸಿಕೊಳ್ಳಿ. ವಿವಾಹ ಸಂಬಂಧಿ ಮಾತುಕತೆಗಾಗಿ ಉತ್ತಮ ಅವಕಾಶ ಸಿಗುವ ಸಾಧ್ಯತೆ ಇದೆ. ಪತ್ರಿಕಾ ವರದಿಗಾರರಿಗೆ ಖಾಯಂ ಉದ್ಯೋಗ ಪ್ರಾಪ್ತಿ ಸಾಧ್ಯ, ಕಿರುತೆರೆ ಮತ್ತು ಚಲನಚಿತ್ರ ನಿರ್ಮಾಪಕರಿಗೆ ಈ ಬಾರಿ ಬಂಪರ್ ಕೊಡುಗೆ ದೊರೆಯುವ ಶಕ್ತಿ ಇದೆ. ಪಕ್ಷದ ಕಾರ್ಯಕರ್ತರಿಗೆ ಸಂಘ ಮಂಡಳಿಗಳಲ್ಲಿ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ಥಾನಕ್ಕೆ ನೇಮಕವಾಗುವ ಸಾಧ್ಯತೆ ಇದೆ. ಕೆಲವರಿಗೆ ಅವಿರೋಧ ನೇಮಕದ ಅವಕಾಶವೂ ಎದುರಾಗಬಹುದು. ಶತ್ರುಪೀಡೆ ನಿವಾರಣೆ ಮಾಡಲು ಉತ್ತಮ ಸಮಯ. ಉಪನ್ಯಾಸಕರಿಗೆ ಉದ್ಯೋಗದಲ್ಲಿ ಸ್ವಲ್ಪ ಅಭದ್ರತೆ ಎದುರಾಗಬಹುದು. ಆರೋಗ್ಯ ಇಲಾಖೆ ಉದ್ಯೋಗಿಗಳಿಗೆ ಸಿಹಿ ಸಂದೇಶ ಸಿಗುವ ಸಾಧ್ಯತೆ ಇದೆ. ಅಧಿಕಾರ ವರ್ಗದಲ್ಲಿ ತೊಡಗಿರುವವರಿಗೆ ಧನಲಾಭದ ಸೂಚನೆಗಳಿವೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

6 days ago

   
Image 1
Image 1
ಬೆಂಗಳೂರು ನಗರ

2026 ಮಾರ್ಚ್ 18 ಬುಧವಾರ ದಿನದ ರಾಶಿ ಭವಿಷ್ಯ

ಮೇಷ ರಾಶಿ : ಮೇಷ ರಾಶಿಯವರಿಗೆ ಇಂದಿನ ದಿನ ಮಿಶ್ರ ಫಲಿತಾಂಶಗಳನ್ನು... ಓದನ್ನು ಮುಂದುವರಿಸಿ


Edited by: ಬಾನು

20 hours ago

   
Image 1

ಮಂಗಳವಾರ, 17 ಮಾರ್ಚ್ 2026 – ರಾಶಿ ಭವಿಷ್ಯ

ಮೇಷ ರಾಶಿ ಭವಿಷ್ಯ: ಉದ್ಯೋಗದಲ್ಲಿ ಸವಾಲು, ವ್ಯಾಪಾರದಲ್ಲಿ ಲಾಭದ ಸೂಚನೆ ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಶನಿವಾರದ ರಾಶಿ ಭವಿಷ್ಯ – 14 ಮಾರ್ಚ್ 2026

ಮೇಷ ರಾಶಿ ಭವಿಷ್ಯ:  ಮೇಷ ರಾಶಿಯವರಿಗೆ ಈ ಅವಧಿಯಲ್ಲಿ ಜರೂರಿ... ಓದನ್ನು ಮುಂದುವರಿಸಿ


Edited by: ಬಾನು

4 days ago

   

ಮನೋಭಿಲಾಷೆಗಳು ಕ್ರಮೇಣ ಈಡೇರುವ ಸಾಧ್ಯತೆ ಕಂಡುಬರುತ್ತಿದೆ.

ಮೇಷ ರಾಶಿ ಭವಿಷ್ಯ:  ಮೇಷ ರಾಶಿಯವರಿಗೆ ಈ ಅವಧಿಯಲ್ಲಿ ಜರೂರಿ... ಓದನ್ನು ಮುಂದುವರಿಸಿ


Edited by: ಬಾನು

4 days ago

   

ಮೇಷ ರಾಶಿಯವರಿಗೆ ಈ ಅವಧಿಯಲ್ಲಿ ಜರೂರಿ ಕೆಲಸಗಳು

ಮೇಷ ರಾಶಿ ಭವಿಷ್ಯ:  ಮೇಷ ರಾಶಿಯವರಿಗೆ ಈ ಅವಧಿಯಲ್ಲಿ ಜರೂರಿ... ಓದನ್ನು ಮುಂದುವರಿಸಿ


Edited by: ಬಾನು

4 days ago

   

2026

ಮೇಷ ರಾಶಿ ಭವಿಷ್ಯ:  ಮೇಷ ರಾಶಿಯವರಿಗೆ ಈ ಅವಧಿಯಲ್ಲಿ ಜರೂರಿ... ಓದನ್ನು ಮುಂದುವರಿಸಿ


Edited by: ಬಾನು

4 days ago

   

14 ಮಾರ್ಚ್ 2026

ಮೇಷ ರಾಶಿ ಭವಿಷ್ಯ:  ಮೇಷ ರಾಶಿಯವರಿಗೆ ಈ ಅವಧಿಯಲ್ಲಿ ಜರೂರಿ... ಓದನ್ನು ಮುಂದುವರಿಸಿ


Edited by: ಬಾನು

4 days ago

   

ಶನಿವಾರದ ರಾಶಿ ಭವಿಷ್ಯ – 14 ಮಾರ್ಚ್ 2026

ಮೇಷ ರಾಶಿ ಭವಿಷ್ಯ:  ಮೇಷ ರಾಶಿಯವರಿಗೆ ಈ ಅವಧಿಯಲ್ಲಿ ಜರೂರಿ... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1

ಶುಕ್ರವಾರದ ರಾಶಿ ಭವಿಷ್ಯ – 13 ಮಾರ್ಚ್ 2026

ಮೇಷ ರಾಶಿ ಭವಿಷ್ಯ

ಮೇಷ ರಾಶಿಯವರಿಗೆ ಇಂದು ಮಿಶ್ರ ಫಲಗಳು ಕ... ಓದನ್ನು ಮುಂದುವರಿಸಿ


Edited by: ಬಾನು

5 days ago

   

ಗುರುವಾರದ ರಾಶಿ ಭವಿಷ್ಯ – 12 ಮಾರ್ಚ್ 2026

ಮೇಷ ರಾಶಿ : ಇಂದು ಮಿತ್ರರಿಂದ ಧನ ಸಹಾಯ ದೊರೆಯುವ ಸಾಧ್ಯತೆ ಇದೆ.... ಓದನ್ನು ಮುಂದುವರಿಸಿ


Edited by: ಬಾನು

6 days ago

   
Image 1