ರಸ್ತೆ ಬದಿ ಚಪ್ಪಲಿ ಹೊಲಿಸಿದ ಅಣ್ಣಂದಿರ ಕನಸು ನನಸಾದ ದಿನ –ಸಿವಿಲ್ ಜಡ್ಜ್ ಆದ ಪದ್ಮಾವತಿ ಮಾದಿಗ

ದಾಂಡೇಲಿ : ಬಡತನವು ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದನ್ನು ತಮ್ಮ ಯಶಸ್ಸಿನ ಮೂಲಕ ಸಾಬೀತುಪಡಿಸಿದ್ದಾರೆ ದಾಂಡೇಲಿಯ ಪದ್ಮಾವತಿ ನಾಗಣ್ಣ ಮಾದಿಗ. ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯ ಪುತ್ರಿಯಾಗಿ ಹೊರಹೊಮ್ಮಿದ್ದಾರೆ. ತಂದೆ ನಾಗಣ್ಣ ಅವರ ನಿಧನದ ಬಳಿಕ ಕುಟುಂಬದ ಹೊಣೆಗಾರಿಕೆ ಅಣ್ಣಂದಿರ ಮೇಲಿದೆ. ಆರ್ಥಿಕ ಸಂಕಷ್ಟಗಳ ನಡುವೆಯೂ ತಂಗಿಯ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗದಂತೆ ಅವರು ಶ್ರಮಿಸಿದರು. ರಸ್ತೆ ಬದಿಯಲ್ಲಿ ಚಪ್ಪಲಿ ಹೊಲಿಯುವ ಕೆಲಸ ಮಾಡುತ್ತಾ ಪದ್ಮಾವತಿಯ ಶಿಕ್ಷಣಕ್ಕೆ ಬೆಂಬಲ ನೀಡಿದರು ಎಂಬುದು ತಿಳಿದುಬಂದಿದೆ.

 

ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ ಪದ್ಮಾವತಿ, ಇಂಗ್ಲಿಷ್ ಭಾಷೆಯ ಸವಾಲನ್ನೂ ಮೀರಿ ಕಾನೂನು ಪದವಿ ಪಡೆದು ನ್ಯಾಯಾಂಗ ಪರೀಕ್ಷೆಗೆ ತಯಾರಾದರು. ಮೊದಲ ಪ್ರಯತ್ನದಲ್ಲೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ನ್ಯಾಯಪೀಠದ ಮೆಟ್ಟಿಲೇರಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಿಂದ ನ್ಯಾಯಾಧೀಶೆಯಾಗಿ ಆಯ್ಕೆಯಾದ ಮಾದಿಗ ಸಮುದಾಯದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. “ನಮ್ಮ ತಂಗಿ ಸಮಾಜಕ್ಕೆ ನ್ಯಾಯ ನೀಡುವ ಸ್ಥಾನಕ್ಕೆ ಏರಿದ್ದಾಳೆ” ಎಂಬ ಅಣ್ಣಂದಿರ ಹೆಮ್ಮೆಯ ಮಾತು ಕುಟುಂಬದ ಸಂತಸವನ್ನು ವ್ಯಕ್ತಪಡಿಸುತ್ತದೆ. ಪದ್ಮಾವತಿಯ ಈ ಸಾಧನೆ ಅನೇಕ ಯುವಕರಿಗೆ ಪ್ರೇರಣೆಯಾಗಿದ್ದು, ಬಡತನದ ನಡುವೆಯೂ ಕನಸುಗಳನ್ನು ಬೆನ್ನಟ್ಟಿದರೆ ಯಶಸ್ಸು ಸಾಧ್ಯ ಎಂಬ ಸಂದೇಶವನ್ನು ನೀಡುತ್ತದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

8 hours ago

   
Image 1
Image 1
ಚಾಮರಾಜನಗರ

ಬಿಳಿಗಿರಿ ಅರಣ್ಯದಲ್ಲಿ ಹುಲಿ ಸಾವು: ಉರುಳು ಹಾಕಿದ್ದ ಬೇಟೆಗಾರ ಬಂಧನ

ಚಾಮರಾಜನಗರ: ಬಿಳಿಗಿರಿ ಹುಲಿ ಸಂರಕ್ಷಿತಾರಣ್ಯದ ಕೊಳ್ಳೇಗಾಲ ವಲಯದಲ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಹಾಸನ

ಹಾಸನಾಂಬೆ ಉತ್ಸವ ದೀಪಾಲಂಕಾರದಲ್ಲಿ ಗೋಲ್ಮಾಲ್? 15 ಲಕ್ಷ ರೂಪಾಯಿ ಗಲಾಟೆ ಸಂಶಯ

ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ಭಾಗ್ಯ ನೀಡುವ ಶಕ್ತಿದೇವತೆ ಹ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಗದಗ

ಲಕ್ಕುಂಡಿ “ಚಿನ್ನದ ನಿಧಿ” ಪ್ರಕರಣಕ್ಕೆ ಹೊಸ ತಿರುವು .. ಹಂಡೆಯಲ್ಲಿ ಚಿನ್ನದ ನಾಣ್ಯ ವಿಡಿಯೋ… ಬಳಿಕ ಬಯಲಾದ ನಕಲಿ ಕಥೆ

ಗದಗ: ಲಕ್ಕುಂಡಿ ಗ್ರಾಮದಲ್ಲಿ 455 ಗ್ರಾಂ ಚಿನ್ನ ಪತ್ತೆಯಾದ ಸುದ್ದ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ವಿಜಯಪುರ

ಸಿಂದಗಿ ಆಸ್ಪತ್ರೆ ದುರಂತ: ವೈದ್ಯರ ಕೊರತೆ, ಹೆರಿಗೆ ವೇಳೆ ನವಜಾತ ಶಿಶು ಹಾಗೂ ತಾಯಿ ಸಾವು

ವಿಜಯಪುರ : ಸಿಂದಗಿ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1
ರಾಮನಗರ

ರಾಮನಗರದಲ್ಲಿ ವಿಶೇಷ ಕ್ಷಣ : ನಿರ್ಮಲಾ ಸೀತಾರಾಮನ್ ಶಂಕುಸ್ಥಾಪನೆಗೆ ಆಗಮ

ರಾಮನಗರ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ರಾಮ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಕಲ್ಬುರ್ಗಿ

ಕಲಬುರಗಿ: ಬೀದಿ ನಾಯಿಗಳ ದಾಳಿಯಲ್ಲಿ 5 ಮಕ್ಕಳಿಗೆ ಗಂಭೀರ ಗಾಯ

ಕಲಬುರಗಿ : ನಗರದ ದೇವಿನಗರ ಬಡಾವಣೆಯಲ್ಲಿ ಭಾನುವಾರದಂದು ನಡೆದ ದುರ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಬೆಂಗಳೂರು ನಗರ

ಕೆಎಂಎಫ್ ನಂದಿನಿ ಉತ್ಪನ್ನಗಳಿಗೆ QR ಕೋಡ್‌ ಜೊತೆ ಹೊಸ ಸುರಕ್ಷತಾ ಕ್ರಮ

ಬೆಂಗಳೂರು: ರಾಜ್ಯದ ಹೆಮ್ಮೆಯ ನಂದಿನಿ ಉತ್ಪನ್ನಗಳ ಸುರಕ್ಷತೆಯನ್ನು... ಓದನ್ನು ಮುಂದುವರಿಸಿ


Edited by: ಬಾನು

14 hours ago

   
Image 1
ಬೆಂಗಳೂರು ನಗರ

ಕಲ್ಯಾಣ ಮಂಟಪಗಳಿಗೆ ವಧು–ವರರ ವಯಸ್ಸು ಪರಿಶೀಲನೆ ಕಡ್ಡಾಯವಿಲ್ಲ: ಹೈಕೋರ್ಟ್ ಸ್ಪಷ್ಟನೆ

ಬೆಂಗಳೂರು : ಕರ್ನಾಟಕ ಹೈಕೋರ್ಟ್ ಬಾಲ್ಯ ವಿವಾಹ ಆರೋಪದಲ್ಲಿ ಹುಸೈನ... ಓದನ್ನು ಮುಂದುವರಿಸಿ


Edited by: ಬಾನು

15 hours ago

   
Image 1
ಮಂಡ್ಯ

ಮದ್ದೂರು

ನಾಡಬಾಂಬ್ ಸ್ಫೋಟದಲ್ಲಿ ಹಸುವಿನ ಬಾಯಿ ಛಿದ್ರ-ಛಿದ್ರ; ರೈತ ಮಹಿಳೆ ಗಂಭೀರ ಆಘಾತ

ಮಂಡ್ಯ: ಮದ್ದೂರು ತಾಲ್ಲೂಕಿನ K. M. Doddi ಸಮೀಪದ ಹರಳಹಳ್ಳಿ ಗ್ರ... ಓದನ್ನು ಮುಂದುವರಿಸಿ


Edited by: ಬಾನು

18 hours ago

   
Image 1
ಮಂಡ್ಯ

ವೈರಮುಡಿ ಬ್ರಹ್ಮೋತ್ಸವ: ಮಂಡ್ಯದಲ್ಲಿ 13 ದಿನಗಳ ಶೋಭಾಯಾತ್ರೆ ಪ್ರಾರಂಭ

ಮಂಡ್ಯ: ಮಾರ್ಚ್ 23ರಿಂದ ಏಪ್ರಿಲ್ 5ರವರೆಗೆ ನಡೆಯುವ ವೈರಮುಡಿ ಬ್ರ... ಓದನ್ನು ಮುಂದುವರಿಸಿ


Edited by: ಬಾನು

18 hours ago

   
Image 1