ಲಕ್ಕುಂಡಿ “ಚಿನ್ನದ ನಿಧಿ” ಪ್ರಕರಣಕ್ಕೆ ಹೊಸ ತಿರುವು .. ಹಂಡೆಯಲ್ಲಿ ಚಿನ್ನದ ನಾಣ್ಯ ವಿಡಿಯೋ… ಬಳಿಕ ಬಯಲಾದ ನಕಲಿ ಕಥೆ

ಗದಗ: ಲಕ್ಕುಂಡಿ ಗ್ರಾಮದಲ್ಲಿ 455 ಗ್ರಾಂ ಚಿನ್ನ ಪತ್ತೆಯಾದ ಸುದ್ದಿ ಹೊಸ ಸಂಚಲನ ಮೂಡಿಸಿದ ಬೆನ್ನಲ್ಲೇ, 2022ರಲ್ಲಿ ದಾಖಲಾಗಿದ್ದ ನಿಧಿ ವಂಚನೆ ಪ್ರಕರಣ 2026ರಲ್ಲಿ ಮತ್ತೆ ಚರ್ಚೆಗೆ ಬಂದಿದೆ. ಬಸೀರಾಬೇಗಂ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ಮರು ಪರಿಶೀಲನೆಗೆ ಒಳಪಡಿಸಲಾಯಿತು. ನಂತರ ಪೀರಸಾಬ್ ಕೌತಾಳ ಸಲ್ಲಿಸಿದ ಹೊಸ ದೂರಿನಲ್ಲಿ ಹಂಡೆಯಲ್ಲಿ ಚಿನ್ನದ ನಾಣ್ಯಗಳಿರುವುದಾಗಿ ಹೇಳಲಾದ ವಿಡಿಯೋ ಸಾಕ್ಷ್ಯ ಒದಗಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರ ನೇತೃತ್ವದಲ್ಲಿ ಸಮಗ್ರ ತನಿಖೆ ಕೈಗೊಳ್ಳಲಾಗಿದೆ.

 

ತನಿಖೆಯಲ್ಲಿ ಉತ್ತರಾಖಂಡ ಮೂಲದ ಹಜರತ್ ಮಾಲ್ವಿ ಎಂಬಾತನನ್ನು ಬಂಧಿಸಲಾಗಿದೆ. ಆತ “ನಿಧಿ ಶೋಧ ತಜ್ಞ” ಎಂದು ಹೇಳಿಕೊಂಡು ಜಮೀನಿನಲ್ಲಿ ನಕಲಿ ಗೋಲ್ಡ್ ಬಿಸ್ಕೆಟ್‌ಗಳನ್ನು ಹೂತು ಬಳಿಕ ಪತ್ತೆ ಮಾಡಿದಂತೆ ನಾಟಕವಾಡಿ ಹಣ ಸುಲಿಗೆ ಮಾಡುತ್ತಿದ್ದಾನೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಮಾರು 20 ಲಕ್ಷ ರೂಪಾಯಿ ವಂಚನೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ.

 

ದೆಹಲಿ ಹಾಗೂ ಧಾರವಾಡ ಮೂಲದ ಮಹಿಳೆಯರು ಸೇರಿದಂತೆ ಹಲವರು ಮೋಸಕ್ಕೊಳಗಾಗಿರುವ ಸಾಧ್ಯತೆ ಇದ್ದು, ಪ್ರಕರಣದಲ್ಲಿ ಇನ್ನೂ ಕೆಲವರು ಭಾಗಿಯಾಗಿರುವ ಶಂಕೆಯೂ ವ್ಯಕ್ತವಾಗಿದೆ. ಕಾನೂನುಬದ್ಧ ಅನುಮತಿ ಇಲ್ಲದೆ ನಿಧಿ ಶೋಧ ಕಾರ್ಯ ಕೈಗೊಳ್ಳುವುದು ಅಪರಾಧ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಐತಿಹಾಸಿಕ ಹಿನ್ನೆಲೆಯ ಲಕ್ಕುಂಡಿಯನ್ನು ನೆಪ ಮಾಡಿಕೊಂಡು ನಡೆಸಲಾಗಿದ್ದ ಈ ನಕಲಿ ನಿಧಿ ವಂಚನೆ ಪ್ರಕರಣ ಇದೀಗ ಪೊಲೀಸ್ ಬಲೆಗೆ ಸಿಲುಕಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ವಿವರಗಳು ಬಹಿರಂಗವಾಗುವ ಸಾಧ್ಯತೆ ಇದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

8 hours ago

   
Image 1
Image 1
ಚಾಮರಾಜನಗರ

ಬಿಳಿಗಿರಿ ಅರಣ್ಯದಲ್ಲಿ ಹುಲಿ ಸಾವು: ಉರುಳು ಹಾಕಿದ್ದ ಬೇಟೆಗಾರ ಬಂಧನ

ಚಾಮರಾಜನಗರ: ಬಿಳಿಗಿರಿ ಹುಲಿ ಸಂರಕ್ಷಿತಾರಣ್ಯದ ಕೊಳ್ಳೇಗಾಲ ವಲಯದಲ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಹಾಸನ

ಹಾಸನಾಂಬೆ ಉತ್ಸವ ದೀಪಾಲಂಕಾರದಲ್ಲಿ ಗೋಲ್ಮಾಲ್? 15 ಲಕ್ಷ ರೂಪಾಯಿ ಗಲಾಟೆ ಸಂಶಯ

ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ಭಾಗ್ಯ ನೀಡುವ ಶಕ್ತಿದೇವತೆ ಹ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಉತ್ತರಕನ್ನಡ

ದಾಂಡೇಲಿ

ರಸ್ತೆ ಬದಿ ಚಪ್ಪಲಿ ಹೊಲಿಸಿದ ಅಣ್ಣಂದಿರ ಕನಸು ನನಸಾದ ದಿನ –ಸಿವಿಲ್ ಜಡ್ಜ್ ಆದ ಪದ್ಮಾವತಿ ಮಾದಿಗ

ದಾಂಡೇಲಿ : ಬಡತನವು ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದನ್ನು ತಮ್... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ವಿಜಯಪುರ

ಸಿಂದಗಿ ಆಸ್ಪತ್ರೆ ದುರಂತ: ವೈದ್ಯರ ಕೊರತೆ, ಹೆರಿಗೆ ವೇಳೆ ನವಜಾತ ಶಿಶು ಹಾಗೂ ತಾಯಿ ಸಾವು

ವಿಜಯಪುರ : ಸಿಂದಗಿ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ರಾಮನಗರ

ರಾಮನಗರದಲ್ಲಿ ವಿಶೇಷ ಕ್ಷಣ : ನಿರ್ಮಲಾ ಸೀತಾರಾಮನ್ ಶಂಕುಸ್ಥಾಪನೆಗೆ ಆಗಮ

ರಾಮನಗರ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ರಾಮ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಕಲ್ಬುರ್ಗಿ

ಕಲಬುರಗಿ: ಬೀದಿ ನಾಯಿಗಳ ದಾಳಿಯಲ್ಲಿ 5 ಮಕ್ಕಳಿಗೆ ಗಂಭೀರ ಗಾಯ

ಕಲಬುರಗಿ : ನಗರದ ದೇವಿನಗರ ಬಡಾವಣೆಯಲ್ಲಿ ಭಾನುವಾರದಂದು ನಡೆದ ದುರ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಬೆಂಗಳೂರು ನಗರ

ಕೆಎಂಎಫ್ ನಂದಿನಿ ಉತ್ಪನ್ನಗಳಿಗೆ QR ಕೋಡ್‌ ಜೊತೆ ಹೊಸ ಸುರಕ್ಷತಾ ಕ್ರಮ

ಬೆಂಗಳೂರು: ರಾಜ್ಯದ ಹೆಮ್ಮೆಯ ನಂದಿನಿ ಉತ್ಪನ್ನಗಳ ಸುರಕ್ಷತೆಯನ್ನು... ಓದನ್ನು ಮುಂದುವರಿಸಿ


Edited by: ಬಾನು

15 hours ago

   
Image 1
ಬೆಂಗಳೂರು ನಗರ

ಕಲ್ಯಾಣ ಮಂಟಪಗಳಿಗೆ ವಧು–ವರರ ವಯಸ್ಸು ಪರಿಶೀಲನೆ ಕಡ್ಡಾಯವಿಲ್ಲ: ಹೈಕೋರ್ಟ್ ಸ್ಪಷ್ಟನೆ

ಬೆಂಗಳೂರು : ಕರ್ನಾಟಕ ಹೈಕೋರ್ಟ್ ಬಾಲ್ಯ ವಿವಾಹ ಆರೋಪದಲ್ಲಿ ಹುಸೈನ... ಓದನ್ನು ಮುಂದುವರಿಸಿ


Edited by: ಬಾನು

15 hours ago

   
Image 1
ಮಂಡ್ಯ

ಮದ್ದೂರು

ನಾಡಬಾಂಬ್ ಸ್ಫೋಟದಲ್ಲಿ ಹಸುವಿನ ಬಾಯಿ ಛಿದ್ರ-ಛಿದ್ರ; ರೈತ ಮಹಿಳೆ ಗಂಭೀರ ಆಘಾತ

ಮಂಡ್ಯ: ಮದ್ದೂರು ತಾಲ್ಲೂಕಿನ K. M. Doddi ಸಮೀಪದ ಹರಳಹಳ್ಳಿ ಗ್ರ... ಓದನ್ನು ಮುಂದುವರಿಸಿ


Edited by: ಬಾನು

18 hours ago

   
Image 1
ಮಂಡ್ಯ

ವೈರಮುಡಿ ಬ್ರಹ್ಮೋತ್ಸವ: ಮಂಡ್ಯದಲ್ಲಿ 13 ದಿನಗಳ ಶೋಭಾಯಾತ್ರೆ ಪ್ರಾರಂಭ

ಮಂಡ್ಯ: ಮಾರ್ಚ್ 23ರಿಂದ ಏಪ್ರಿಲ್ 5ರವರೆಗೆ ನಡೆಯುವ ವೈರಮುಡಿ ಬ್ರ... ಓದನ್ನು ಮುಂದುವರಿಸಿ


Edited by: ಬಾನು

18 hours ago

   
Image 1