ಬಿಳಿಗಿರಿ ಅರಣ್ಯದಲ್ಲಿ ಹುಲಿ ಸಾವು: ಉರುಳು ಹಾಕಿದ್ದ ಬೇಟೆಗಾರ ಬಂಧನ

ಚಾಮರಾಜನಗರ: ಬಿಳಿಗಿರಿ ಹುಲಿ ಸಂರಕ್ಷಿತಾರಣ್ಯದ ಕೊಳ್ಳೇಗಾಲ ವಲಯದಲ್ಲಿ ಉರುಳಿಗೆ ಸಿಲುಸಿ ಸಾವನ್ನಪ್ಪಿದ್ದ ಹುಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯಾಧಿಕಾರಿಗಳು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಕೊಲ್ಲೇಗಾಲ ತಾಲ್ಲೂಕಿನ ಕೊಂಗರಹಳ್ಳಿ ಗ್ರಾಮದ 35 ವರ್ಷದ ಕುಮಾರ್ ಬಂಧಿತ ವ್ಯಕ್ತಿಯಾಗಿದ್ದು, ವನ್ಯಜೀವಿ ಬೇಟೆಯ ಉದ್ದೇಶದಿಂದ ಉರುಳು ಹಾಕಿದ್ದನೆಂದು ಆರೋಪಿಸಲಾಗಿದೆ. ಈ ಪ್ರಕರಣವನ್ನು ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.

 

ಫೆಬ್ರವರಿ 15ರಂದು ಗುಂಡಾಲ್ ಜಲಾಶಯದಲ್ಲಿ ಬೃಹದಾಕಾರದ ಗಂಡು ಹುಲಿಯ ಮೃತದೇಹ ತೇಲುತ್ತಿರುವುದು ಪತ್ತೆಯಾಯಿತು. ಸ್ಥಳಕ್ಕೆ ಭೇಟಿ ನೀಡಿದ ಬಿಳಿಗಿರಿ ಟೈಗರ್ ರಿಸರ್ವ್ ಸಿಬ್ಬಂದಿ ಪರಿಶೀಲನೆ ನಡೆಸಿದಾಗ, ಹುಲಿಯ ಕತ್ತಿಗೆ ಉರುಳು ಸಿಲುಕಿದ್ದು, ಪರದಾಡಿದ ಬಳಿಕ ನೀರು ಕುಡಿಯಲು ಬರುವ ವೇಳೆ ಜಲಾಶಯದಲ್ಲಿ ಬಿದ್ದು ಸಾವನ್ನಪ್ಪಿರುವುದು ದೃಢಪಟ್ಟಿದೆ. ಹುಲಿಯ ಶ್ವಾಸಕೋಶದಲ್ಲಿ ನೀರು ಸಂಗ್ರಹವಾಗಿರುವುದು ಪರಿಶೀಲನೆ ವೇಳೆ ದೃಢಪಟ್ಟಿದೆ.

 

ಅರಣ್ಯ ಇಲಾಖೆಯ ಮಾಹಿತಿ ಪ್ರಕಾರ, ಮೃತ ಹುಲಿ ಸುಮಾರು ಆರು ವರ್ಷದ ಗಂಡು ಹುಲಿ ಮತ್ತು ಸುಮಾರು 95 ಕೆಜಿ ತೂಕದಿತ್ತು. ಗುಂಡಾಲ್ ಜಲಾಶಯದ ಸುತ್ತಮುತ್ತ ಜಮೀನುಗಳಿದ್ದು, ಕೆಲವರು ಕಾಡು ಹಂದಿಗಳ ಹಾವಳಿಗೆ ತಡೆ ನೀಡಲು ಬೈಕ್ ಕ್ಲಚ್ ಕೇಬಲ್ ಮೂಲಕ ಉರುಳನ್ನು ಸಿದ್ಧಪಡಿಸಿ ಬೇಲಿಯ ಬಳಿ ಇಟ್ಟಿದ್ದಾರೆ ಎಂಬ ಮಾಹಿತಿ ಬಂದಿದೆ. ಆಹಾರ ಅರಸಿ ಬಂದ ಹುಲಿ ಇದೇ ಉರುಳಿಗೆ ಸಿಲುಕಿಯೇ ಜಲಾಶಯದಲ್ಲಿ ಪ್ರಾಣ ಬಿಟ್ಟಿದೆ. ಅರಣ್ಯಾಧಿಕಾರಿಗಳು ಆರೋಪಿಯೊಂದಿಗೆ ಇನ್ನಿತರ ವ್ಯಕ್ತಿಗಳು ಸಹ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸುತ್ತಿದ್ದು, ತನಿಖೆ ಮುಂದುವರಿಯುತ್ತಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

8 hours ago

   
Image 1
Image 1
ಹಾಸನ

ಹಾಸನಾಂಬೆ ಉತ್ಸವ ದೀಪಾಲಂಕಾರದಲ್ಲಿ ಗೋಲ್ಮಾಲ್? 15 ಲಕ್ಷ ರೂಪಾಯಿ ಗಲಾಟೆ ಸಂಶಯ

ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ಭಾಗ್ಯ ನೀಡುವ ಶಕ್ತಿದೇವತೆ ಹ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಗದಗ

ಲಕ್ಕುಂಡಿ “ಚಿನ್ನದ ನಿಧಿ” ಪ್ರಕರಣಕ್ಕೆ ಹೊಸ ತಿರುವು .. ಹಂಡೆಯಲ್ಲಿ ಚಿನ್ನದ ನಾಣ್ಯ ವಿಡಿಯೋ… ಬಳಿಕ ಬಯಲಾದ ನಕಲಿ ಕಥೆ

ಗದಗ: ಲಕ್ಕುಂಡಿ ಗ್ರಾಮದಲ್ಲಿ 455 ಗ್ರಾಂ ಚಿನ್ನ ಪತ್ತೆಯಾದ ಸುದ್ದ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಉತ್ತರಕನ್ನಡ

ದಾಂಡೇಲಿ

ರಸ್ತೆ ಬದಿ ಚಪ್ಪಲಿ ಹೊಲಿಸಿದ ಅಣ್ಣಂದಿರ ಕನಸು ನನಸಾದ ದಿನ –ಸಿವಿಲ್ ಜಡ್ಜ್ ಆದ ಪದ್ಮಾವತಿ ಮಾದಿಗ

ದಾಂಡೇಲಿ : ಬಡತನವು ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದನ್ನು ತಮ್... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ವಿಜಯಪುರ

ಸಿಂದಗಿ ಆಸ್ಪತ್ರೆ ದುರಂತ: ವೈದ್ಯರ ಕೊರತೆ, ಹೆರಿಗೆ ವೇಳೆ ನವಜಾತ ಶಿಶು ಹಾಗೂ ತಾಯಿ ಸಾವು

ವಿಜಯಪುರ : ಸಿಂದಗಿ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ರಾಮನಗರ

ರಾಮನಗರದಲ್ಲಿ ವಿಶೇಷ ಕ್ಷಣ : ನಿರ್ಮಲಾ ಸೀತಾರಾಮನ್ ಶಂಕುಸ್ಥಾಪನೆಗೆ ಆಗಮ

ರಾಮನಗರ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ರಾಮ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಕಲ್ಬುರ್ಗಿ

ಕಲಬುರಗಿ: ಬೀದಿ ನಾಯಿಗಳ ದಾಳಿಯಲ್ಲಿ 5 ಮಕ್ಕಳಿಗೆ ಗಂಭೀರ ಗಾಯ

ಕಲಬುರಗಿ : ನಗರದ ದೇವಿನಗರ ಬಡಾವಣೆಯಲ್ಲಿ ಭಾನುವಾರದಂದು ನಡೆದ ದುರ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಬೆಂಗಳೂರು ನಗರ

ಕೆಎಂಎಫ್ ನಂದಿನಿ ಉತ್ಪನ್ನಗಳಿಗೆ QR ಕೋಡ್‌ ಜೊತೆ ಹೊಸ ಸುರಕ್ಷತಾ ಕ್ರಮ

ಬೆಂಗಳೂರು: ರಾಜ್ಯದ ಹೆಮ್ಮೆಯ ನಂದಿನಿ ಉತ್ಪನ್ನಗಳ ಸುರಕ್ಷತೆಯನ್ನು... ಓದನ್ನು ಮುಂದುವರಿಸಿ


Edited by: ಬಾನು

15 hours ago

   
Image 1
ಬೆಂಗಳೂರು ನಗರ

ಕಲ್ಯಾಣ ಮಂಟಪಗಳಿಗೆ ವಧು–ವರರ ವಯಸ್ಸು ಪರಿಶೀಲನೆ ಕಡ್ಡಾಯವಿಲ್ಲ: ಹೈಕೋರ್ಟ್ ಸ್ಪಷ್ಟನೆ

ಬೆಂಗಳೂರು : ಕರ್ನಾಟಕ ಹೈಕೋರ್ಟ್ ಬಾಲ್ಯ ವಿವಾಹ ಆರೋಪದಲ್ಲಿ ಹುಸೈನ... ಓದನ್ನು ಮುಂದುವರಿಸಿ


Edited by: ಬಾನು

15 hours ago

   
Image 1
ಮಂಡ್ಯ

ಮದ್ದೂರು

ನಾಡಬಾಂಬ್ ಸ್ಫೋಟದಲ್ಲಿ ಹಸುವಿನ ಬಾಯಿ ಛಿದ್ರ-ಛಿದ್ರ; ರೈತ ಮಹಿಳೆ ಗಂಭೀರ ಆಘಾತ

ಮಂಡ್ಯ: ಮದ್ದೂರು ತಾಲ್ಲೂಕಿನ K. M. Doddi ಸಮೀಪದ ಹರಳಹಳ್ಳಿ ಗ್ರ... ಓದನ್ನು ಮುಂದುವರಿಸಿ


Edited by: ಬಾನು

18 hours ago

   
Image 1
ಮಂಡ್ಯ

ವೈರಮುಡಿ ಬ್ರಹ್ಮೋತ್ಸವ: ಮಂಡ್ಯದಲ್ಲಿ 13 ದಿನಗಳ ಶೋಭಾಯಾತ್ರೆ ಪ್ರಾರಂಭ

ಮಂಡ್ಯ: ಮಾರ್ಚ್ 23ರಿಂದ ಏಪ್ರಿಲ್ 5ರವರೆಗೆ ನಡೆಯುವ ವೈರಮುಡಿ ಬ್ರ... ಓದನ್ನು ಮುಂದುವರಿಸಿ


Edited by: ಬಾನು

18 hours ago

   
Image 1